ನ.26ರಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Arebhashe preessmeet copyಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗಾಗಿ ಕೊಡಮಾಡುವ 2015ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಮೂವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಸಾಹಿತಿ, ನಾಟಕಕಾರ, ಕಾದಂಬರಿಕಾರ, ಖಂಡಕಾವ್ಯ ರಚನೆಗಾರ, ಸೃಜನ ಶೀಲ ಬರಹಗಾರರಾಗಿರುವ ಸುಳ್ಯ ತಾಲೂಕಿನ ಪಂಜದವರಾದ ಟಿ.ಜಿ ಮುಡೂರು, ರಂಗಾಯಣ ಮೈಸೂರು ಕಲಾವಿದೆಯಾಗಿರುವ ಮೂಲತಃ ಸುಳ್ಯದವರಾದ ಶ್ರೀಮತಿ ಗೀತಾ ಮೋಂಟಡ್ಕ ಹಾಗೂ ಜಾನಪದ ಹಾಡುಗಳ ಸಂಗ್ರಹಗಾರ್ತಿ ಮತ್ತು ಸ್ವರಚನಾ ಹಾಡುಗಾರ್ತಿಯಾಗಿರುವ ಕೊಡಗಿನ ಶ್ರೀಮತಿ ಜಾನಕಿ ಬೈತಡ್ಕರಿಗೆ 2015ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ನ.26 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಡಾ. ಪೂವಪ್ಪ ಕಣಿಯೂರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅರೆಭಾಷೆ ಅಕಾಡೆಮಿ ಸದಸ್ಯರಾದ ಸದಾನಂದ ಮಾವಜಿ, ಪಿ.ಎಸ್ ಕಾರ್ಯಪ್ಪ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.