ರೋಟರ್‍ಯಾಕ್ಟ್ ಯುವ ಸಪ್ತಾಹ ಸಮಾರೋಪ

ರೋಟರಿ ಸುಳ್ಯ, ರೋಟರ್‍ಯಾಕ್ಟ್ ಸುಳ್ಯ, ಇನ್ನರ್‌ವೀಲ್ ಸುಳ್ಯ, ರೋಟರಿ ಸಿಟಿ ಸುಳ್ಯ ಇದರ ಆಶ್ರಯದಲ್ಲಿ ರೋಟರ್‍ಯಾಕ್ಟ್ ಯುವ ಸಪ್ತಾಹದ ಸಮಾರೋಪ ನ.16 ರಂದು ಸುಳ್ಯ ರೋಟರಿ ಸಮುದಾಯಭವನದಲ್ಲಿ ನಡೆಯಿತು. rotaract yuva sapthaha.jpg3
ರೋಟರಿ ಕ್ಲಬ್ ಅಧ್ಯಕ್ಷ ಗಿರಿಜಾ ಶಂಕರ ತುದಿಯಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಜೇಸಿ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್ ಎ.ಎಸ್.ಮುಖ್ಯ ಅತಿಥಿಗಳಾಗಿದ್ದರು. ರೋ| ಬಾಪು ಸಾಹೇಬ್, ರೋಟರ್‍ಯಾಕ್ಟ್ ಅಧ್ಯಕ್ಷ ಭವಾನಿಶಂಕರ ಕಲ್ಲಡ್ಕ, ಇನ್ನರ್‌ವೀಲ್ ಅಧ್ಯಕ್ಷೆ ಹರ್ಷಾ ಕರುಣಾಕರ, ರೋಟರಿ ಸಿಟಿ ಅಧ್ಯಕ್ಷ ಪ್ರಮೋದ್ ನಾಯರ್, ಕಾರ್ಯದರ್ಶಿ ಐಪಿ.ಪಿ. ಬೆಳ್ಯಪ್ಪ ಗೌಡ, ವೇದಿಕೆಯಲ್ಲಿದ್ದರು. rotaract yuva sapthaha
ಸನ್ಮಾನ: ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತರಾದ ತೂಗುಸೇತುವೆಗಳ ಸರದಾರ ಸುಳ್ಯದ ಗಿರೀಶ್ ಭಾರಧ್ವಾಜ್, ೨೦೧೬ ನೇ ಸಾಲಿನ ದ.ಕ.ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸುಳ್ಯ ಗಾಂಧಿನಗರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಎ.ಜಿ.ಭವಾನಿಯವರನ್ನು ಸನ್ಮಾನಿಸಲಾಯಿತು. ರೋಟರ್‍ಯಾಕ್ಟ್ ವಲಯಾಧ್ಯಕ್ಷ ಪ್ರಶಸ್ತಿಗೆ ಭಾಜನರಾದ ಕೆ.ಟಿ.ಭಾಗೀಶ್ ರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿಷ್ಣುಪ್ರಸಾದ್ ಕೆದಿಲಾಯ ಹಾಗೂ ಪೂವೇಂದ್ರನ್ ಕೂಟೇಲ್ ರವರು ರೋಟರ್‍ಯಾಕ್ಟ್ ಸದಸ್ಯರಾಗಿ ಸೇರ್ಪಡೆಗೊಂಡರು.
ರೋಟರ್‍ಯಾಕ್ಟ್ ಸಭಾಪತಿ ಅಬ್ದುಲ್ ಕಲಾಂ ಸ್ವಾಗತಿಸಿದರು. ಚಂದ್ರಶೇಖರ ಪೇರಾಲು ಹಾಗೂ ದಯಾನಂದ ಕೊರತ್ತೋಡಿ ಸನ್ಮಾನಿತರನ್ನು ಪರಿಚಯಿಸಿದರು. ಎನ್.ಎ.ಜಿತೇಂದ್ರ ಅತಿಥಿಗಳನ್ನು ಪರಿಚಯಿಸಿದರು. ಸಪ್ತಾಹ ಸಭಾಪತಿ ಸುರೇಶ್ ಕಾಮತ್ ವರದಿ ಮಂಡಿಸಿದರು. ಡಾ|ಗುರುರಾಜ್ ವಂದಿಸಿದರು. ಶಿವಪ್ರಸಾದ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಕು|ಮೇಘ ಕೃಷ್ಣ ಕಾಯರ್ತೋಡಿ ಇವರಿಂದ ನೃತ್ಯ ಕಾರ್ಯಕ್ರಮ ಮೂಡಿಬಂತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.