ಬಾಳಿಲ ವಿದ್ಯಾಬೋಧಿನಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Balilaಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ  ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿ ನಾಯಕಿ ತನುಶ್ರೀ ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಂತ್ರಿಮಂಡಲದ ಉಪಗೃಹಮಂತ್ರಿ ದೇವಿಪ್ರಸಾದ್ ರೈ.ಪಿ. ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಶಾಲಾ ಮಂತ್ರಿಮಂಡಲದ ಸಭಾಪತಿ ಶ್ರೀರಕ್ಷಾ ಬಿ, ಉಪಮುಖ್ಯಮಂತ್ರಿ ಪುನೀತ್ ಸಿ.ಜಿ., ಚುಂಚನ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಎನ್.ವೆಂಕಟ್ರಮಣ ಭಟ್ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ ಎಸ್ ಶಿವರಾಮ ಶಾಸ್ತ್ರಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು.
ವಿದ್ಯಾರ್ಥಿಗಳಾದ ಸಂಜನಾ ವಾಲ್ತಾಜೆ, ಶ್ರದ್ಧಾ. ಶ್ರೀರಕ್ಷಾ ಪ್ರಾರ್ಥಿಸಿದರು. ಶ್ರಾವ್ಯ ಸಿ ಆಳ್ವ ಸ್ವಾಗತಿಸಿ, ಕಾರ್ತಿಕ್ ಪಿ. ವಂದಿಸಿದರು. ಹರ್ಷಿತಾ ಕೆ. ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರಾದ ಶ್ರೀ ಲೋಕೇಶ್ ಬಿ ಕಾರ್ಯಕ್ರಮವನ್ನು ಸಂಘಟಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ದೀಪಾ ೧೦ಎ. ಸಾಜಿದಾ ೧೦ಎ, ಆಶಿಕಾ ರೈ ೧೦ಬಿ ವಾಚಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.