ಗಾಂಧಿನಗರ : ಬಿಸ್ಮಿಲ್ಲಾ ಟ್ರಾವೆಲ್ಸ್‌ನ ಗ್ರಾಂಡ್ ರಿ ಓಪನಿಂಗ್

bismill 2ಸುಳ್ಯ ಗಾಂಧಿನಗರ ಬಿಸ್ಮಿಲ್ಲಾ ಟ್ರಾವೆಲ್ಸ್ ಗ್ರೂಫ್‌ನ ಸುಳ್ಯ ಕಛೇರಿಯ ಗ್ರಾಂಡ್ ರಿ ಓಪನಿಂಗ್ ಕಾರ್ಯಕ್ರಮ ಗಾಂಧಿನಗರದಲ್ಲಿ ನ.10 ರಂದು ನಡೆಯಿತು. ನೂತನ ಸಂಸ್ಥೆಯನ್ನು ಸುಳ್ಯ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಹಾಜಿ ಕೆ.ಎಂ. ಅಬ್ದುಲ್‌ಹಮೀದ್ ಜನತಾ ಸಂಸ್ಥೆಯನ್ನು ಉದ್ಘಾಟಿಸಿದರು. ಸುಳ್ಯ ತಾ. ಎಸ್.ಜೆ.ಯು. ಅಧ್ಯಕ್ಷ ಅಸೈಯದ್ ಕುಂಞಕೊಯ ತಂಙಳ್ ದುವಾ ನೆರವೇರಿಸಿದರು.

bismillಗಾಂಧಿನಗರ ಜುಮ್ಮ ಮಸೀದಿಯ ಮುದ್ದರೀಸ್ ಹಾಗೂ ಖತೀಬಾ ಅಲ್‌ಹಾಜಿ ಆಶ್ರಫ್ ಕಾಮಿಲ್ ಸಖಾಫಿ ನೂತನ ಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನ.ಪಂ. ಮಾಜಿ ಅಧ್ಯಕ್ಷರುಗಳಾದ ಎಂ. ವೆಂಕಪ್ಪ ಗೌಡ, ಪ್ರಕಾಶ್ ಹೆಗ್ಡೆ, ಎಸ್. ಸಂಶುದ್ಧೀನ್ ಅರಂಬೂರು, ಗಾಂಧಿನಗರ ಜುಮ್ಮ ಮಸೀದಿಯ ಉಪಾಧ್ಯಕ್ಷರುಗಳಾದ ಅಹಮದ್ ಕೆ.ಪಿ.ಎಸ್., ಅಬ್ಬಾಸ್ ಹಾಜಿ ಕಟ್ಟೆಕಾರ್, ಅನ್ಸಾರಿಯ ಅನಾಥಲಾಯದ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ವಕೀಲರಾದ ಫವಾಝ್ ಕನಕಮಜಲು, ಅಬೂಬಕ್ಕರ್ ಕನಕಮಜಲು, ಹಾಜಿ ಅಬ್ದುಲ್ ಖಾದರ್ ಪಾರೆ, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಿದ್ಧೀನ್ ಆಶ್ರದ್ ದರ್ಬೆ, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮೊಹಮ್ಮದ್ ಕುಂಞ ಗೂನಡ್ಕ, ಉದ್ಯಮಿ ಮೊಹಮ್ಮದ್ ಬೆಳ್ಳಾರೆ, ಉದ್ಯಮಿ ರೋಹನ್ ಪೀಠರ್, ನ.ಪಂ. ಸದಸ್ಯ ಉಮ್ಮರ್ ಕೆ.ಎಸ್. ತಾಜು ಮಹಮ್ಮದ್, ಹಿರಿಯರಾದ ಮೊಹಿದ್ಧೀನ್ ಕುಂಞ ಮೊದಲಾದವರು ಉಪಸ್ಥಿತರಿದ್ದರು.

bismill 1
ಬಿಸ್ಮಿಲ್ಲ ಗ್ರೂಫ್‌ನ ಮಾಲಕರಾದ ಮೊಹಮ್ಮದ್ ಅಲಿ ಜೌಹರ್ ಅತಿಥಿಗಳಿಗೆ ಸಂಸ್ಥೆಯ ಫಲಕವನ್ನು ನೀಡಿ ಗೌರವಿಸಿದರು. ನ.ಪಂ.ಸದಸ್ಯ ಮುಸ್ತಾಫ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹಪವರ್ತಿ ಹಮೀದ್ ಬೀಜಕೊಚ್ಚಿ, ಹಸೈನಾರ್ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನೂತನ ವೆಬ್‌ಸೈಟ್‌ನ್ನು ನ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್ ಹೆಗ್ಡೆಯವರು ಬಿಡುಗಡೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.