ಸಂಪಾಜೆ ಪೋಡಿ(ಪ್ಲಾಟಿಂಗ್) ಮುಕ್ತ ಗ್ರಾಮಸಭೆ

Sampaje grama sabhe copyಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕಂದಾಯ ಇಲಾಖೆ ಮತ್ತು ಭೂ-ಮಾಪನಾ ಇಲಾಖೆಯ ಆಶ್ರಯದಲ್ಲಿ ದಿನಾಂಕ ನ.9ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯಶೋದ ಕೆ.ಕೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಪಾಜೆ ಗ್ರಾಮವನ್ನು ಪೋಡಿ ಮುಕ್ತ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದ್ದು, ಈ ಗ್ರಾಮಸಭೆಯಲ್ಲಿ ಸರ್ವೇ ಅಧೀಕ್ಷಕರಾದ ವೆಂಕಟೇಶ್ ಸರ್ವೇ ಸೂಪರ್‌ವೈಸರ್‌ರಾದ ಚಂದ್ರಕಾಂತ, ಇವರು ಪೋಡಿ ಮುಕ್ತ ಗ್ರಾಮದ ಬಗ್ಗೆ ಮಾಹಿತಿ ನೀಡಿದರು. ಈ ಸಭೆಯಲ್ಲಿ ಭೂಮಾಪಕರಾದ ಗಿರಿಗೌಡ, ಪ್ರಭು, ಲೋಕೇಶ್, ಶಿವಪ್ರಕಾಶ, ರವಿಚಂದ್ರ, ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸೋಮಶೇಖರ ಕೊಂಗಾಜೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಿ.ಕೆ ಹಮೀದ್, ಪಿ.ಕೆ ಅಬುಶಾಲಿ, ಶ್ರೀಮತಿ ಲೆತಿಶ್ಯಾ ಡಿಸೋಜ, ನಾಗೇಶ್ ಪಿ.ಆರ್, ಷಣ್ಮುಗಂ, ಶ್ರೀ ಲುಕಾಸ್ ಟಿ.ಐ ಹಾಗೂ ಗ್ರಾಮಸ್ಥರು ಭಾಗವಹಿಸಿದರು. ಸಭೆಯಲ್ಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಪಿ.ಎನ್ ಗಣಪತಿಭಟ್, ಹೆಚ್.ಹಮೀದ್ ಚರ್ಚೆಯಲ್ಲಿ ಪಾಲ್ಗೊಂಡಿದರು. ಗ್ರಾಮ ಲೆಕ್ಕಿಗರಾದ ನರಿಯಪ್ಪ ಮಠದ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.