500 ಹಾಗೂ 1000 ನೋಟುಗಳ ನಿಷೇಧದಿಂದ ಪರದಾಡುತ್ತಿರುವ ಜನತೆ

ಕೇಂದ್ರ ಸರಕಾರ ನಿನ್ನೆ ಮಧ್ಯರಾತ್ರಿಯಿಂದ 500 ರೂ ಮತ್ತು 1000 ರೂ ನೋಟುಗಳ ಚಲಾವಣೆಯನ್ನು ನಿಷೇದಿಸಿ ದಿಢೀರನೆ ಆದೇಶ ಹೊರಡಿಸಿರುವುದರಿಂದ ಜನತೆ ಪರದಾಡತೊಡಗಿದ್ದಾರೆ.
ನಿಷೇಧಗೊಳಿಸಿದ 500 ಮತ್ತು 1000 ರೂಗಳ ನೋಟುಗಳನ್ನು ನ.11 ರ ನಂತರ ಬ್ಯಾಂಕ್ಗಳಲ್ಲಿ ವಿನಿಮಯ ಮಾಡಬೇಕಾಗಿರುವುದರಿಂದ ಇಂದು ಮತ್ತು ನಾಳೆ ವ್ಯವಹಾರ ನಡೆಸಲು 500 ಮತ್ತು 1000 ನೋಟು ಮಾತ್ರ ಇರುವವರಿಗೆ ವ್ಯವಹಾರ ನಡೆಸಲು ಕಷ್ಟವಾಗಿದೆ. ಪೆಟ್ರೋಲ್ ಬಂಕ್ ಮತ್ತು ಇತರ ಎಲ್ಲಾ ಕಡೆಗಳಲ್ಲಿ 500 ಮತ್ತು 1000  ನೋಟುಗಳನ್ನು ಸ್ವೀಕರಿಸುತ್ತಿಲ್ಲ. 100, 50 ಮತ್ತು ಅದಕ್ಕಿಂತ ಸಣ್ಣ ಮೊತ್ತದ ನೋಟುಗಳು ರೂ. ಗಳ ನೋಟು ಇದ್ದರೆ ಮಾತ್ರ ವ್ಯವಹರಿಸಲು ಸಾಧ್ಯವಾಗುತ್ತಿದೆ. ಪೆಟ್ರೋಲ್ ಬಂಕ್‌ಗಳಲ್ಲಿ 500 ರೂ ಭರ್ತಿ ಪೆಟ್ರೋಲ್ ಹಾಕಿದರೆ ಮಾತ್ರ 500 ರೂ.ವನ್ನು ಸ್ವೀಕರಿಸುತ್ತಿದ್ದಾರೆ.

sullia petrol bunk 3 copy
ಅದೇ ರೀತಿ ನಿನ್ನೆ ರಾತ್ರಿ ಸುಳ್ಯ ಕಾರ್ಪೋರೇಶನ್ ಬ್ಯಾಂಕ್‌ವೊಂದರ ಎ.ಟಿ.ಎಂ. ನಲ್ಲಿ ಜನರು ಹಣ ಪಡೆಯಲು ನಿಂತಿರುವ ದೃಶ್ಯವನ್ನು ಇಲ್ಲಿ ಕಾಣಬಹುದು.

corporation atm copy

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.