ಸುಳ್ಯ ವಲಯ ಮಾಸಿಕ ಸಭೆ

sullia havyaka valaya masika sabhe copyಸುಳ್ಯ ವಲಯ ಮಾಸಿಕ ಸಭೆಯು ಡಾ. ಶ್ರೀಕೃಷ್ಣ ಭಟ್ ರವರ ಮನೆಯಲ್ಲಿ ನ.6 ರಂದು ನಡೆಯಿತು. ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಭಟ್ ಡಿ.ಐ ದಂಬೆಮೂಲೆಯವರು ವಹಿಸಿದ್ದರು.
ಕಾರ್ಯದರ್ಶಿ ವಿಜಯಕೃಷ್ಷ ಪೆರಾಜೆಯವರು ವರದಿ ವಾಚಿಸಿದರು. ಕೋಶಾಧಿಕಾರಿ ಈಶ್ವರ್ ಭಟ್ ಉಬರಡ್ಕದವರು ಲೆಕ್ಕ ಪತ್ರ ಮಂಡಿಸಿದರು.
ಮುಳ್ಳೇರಿಯಾ ಮಂಡಲದ ಸುಳ್ಯ ವಲಯ ಉಸ್ತುವಾರಿ ಪ್ರಮುಖರಾದ ಕುಮಾರ ಸುಬ್ರಹ್ಮಣ್ಯ. ಪೈಸಾರಿರವರು ಜ.29 ರಂದು ನಡೆಯುವ ಮಂಗಲ ಗೋಯಾತ್ರೆಯ ಬಗ್ಗೆ ಮಾಹಿತಿಯನ್ನು ನೀಡಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಬೇಕು ಎಂದು ಹೇಳಿದರು.
ಅ.30 ರಂದು ಪ್ರೋ. ಶ್ರೀಕೃಷ್ಣ ಭಟ್ ರವರ ಮನೆಯಲ್ಲಿ ನಡೆದ ಗುರುಭಿಕ್ಷಾ ಕಾರ್ಯಕ್ರಮದ ಬಗ್ಗೆ ಕೆಲವರು ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀಕೃಷ್ಣ ಭಟ್ ರವರು ಗುರು ಭಿಕ್ಷಾ ಕಾರ್ಯಕ್ರಮದಲ್ಲಿ ಸಹಕರಿಸಿದ ವಲಯದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಸಭಾಕಾರ್ಯಕ್ರಮದಲ್ಲಿ ವಲಯ ಪದಾಧಿಕಾರಿಗಳು, ಗುರಿಕಾರರು, ಮಾತೃ ವಿಭಾಗದವರು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.