ಪುತ್ತೂರು ಮನೆ ದರೋಡೆ ಪ್ರಕರಣ-ತಂಡದಲ್ಲಿದ್ದ ಐವರ್ನಾಡಿನ ಯುವಕನ ಬಂಧನ

Advt_NewsUnder_1
Advt_NewsUnder_1
Advt_NewsUnder_1

ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಅಂಬಟೆಮೂಲೆ ಪಾದೆಕರ್ಯ ವಿಷ್ಣು ಭಟ್ ಮನೆಯಲ್ಲಿ ದರೋಡೆ ಮಾಡಿದ ತಂಡವನ್ನು ಪೋಲೀಸರು ಪತ್ತೆ ಹಚ್ಚಿದ್ದು ಇದರಲ್ಲಿ ಐವರ್ನಾಡು ಗ್ರಾಮದ ಜಬಳೆಯ ಯುವಕನೋರ್ವನನ್ನು ಬಂಧಿಸಲಾಗಿದೆ.

Santhu Photos copy
ಪಾದೆಕರ್ಯ ವಿಷ್ಣು ಭಟ್‌ರ ಮನೆಯಲ್ಲಿ ನಿಧಿ ಇದೆ ಎಂಬ ಆಸೆಯಿಂದ ೧೦ ಮಂದಿಯ ತಂಡ ಅ.೨೫ರಂದು ಮಧ್ಯಾಹ್ನ ವಿಷ್ಣು ಭಟ್ ಮನೆಗೆ ನುಗ್ಗಿ ಮನೆಯವರ ಮತ್ತು ಕೆಲಸದಾಕೆಯ ಕೈ ಕಾಲು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ್ದರು. ದರೋಡೆಕೋರರನ್ನು ಪತ್ತೆ ಹಚ್ಚಲು ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳ ಮತ್ತು ಪುತ್ತೂರು ಗ್ರಾಮಾಂತರ ಪೋಲೀಸರು ಪ್ರಕರಣದಲ್ಲಿ ಭಾಗಿಯಾದ ಹತ್ತು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ ಐವರ್ನಾಡು ಗ್ರಾಮದ ಜಬಳೆ ಸಿ.ಆರ್.ಸಿ. ಕಾಲೋನಿಯ ರಾಮಮೂರ್ತಿಯವರ ಮಗ ಪ್ರವೀಣ್ ಕುಮಾರ್(೨೩) ಕೂಡಾ ಬಂಧಿತರು. ನಿಧಿ ಇರುವ ಮಹಿತಿಯನ್ನು ತಂಡದ ಪ್ರಮುಖ ಯಶೋಧರ ಶೆಟ್ಟಿಗೆ ಮಾಹಿತಿ ನೀಡಿದವರಲ್ಲಿ ಪ್ರವೀಣ್ ಕುಮಾರ್ ಕೂಡಾ ಒಬ್ಬರಾಗಿದ್ದಾರೆ.

santhosh Photo copy

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.