ಕೆ.ವಿ.ಜಿ.ಅಮರಜ್ಯೋತಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

amarajyothi kannada rajyotasava copyಸುಳ್ಯದ ಕೆ.ವಿ.ಜಿ.ಅಮರಜ್ಯೋತಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಯಶೋದಾ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಶಿಕ್ಷಕಿ ಮಮತಾ ಹಾಗೂ ಹಿಂದಿ ಉಪನ್ಯಾಸಕರಾದ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಭಾವಗೀತೆ ಹಾಗೂ ಸ್ಥಳದಲ್ಲಿಯೇ ಕಥೆ ಓದುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾಲೇಜಿನ ನಾಲ್ಕು ತಂಡಗಳಾದ ಅಚೀವರ್‍ಸ್, ಬಿಲ್ಡರ್‍ಸ್, ಕ್ರಿಯೇಟರ್‍ಸ್ ಹಾಗೂ ಡೆವಲಪರ್‍ಸ್ ತಂಡಗಳ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು. ಕವಿ ಡಿ.ಎಸ್.ಕರ್ಕಿ ಅವರ “ಹಚ್ಚೇವು ಕನ್ನಡದ ದೀಪ”ಗೀತೆಯನ್ನು ಪ್ರಸ್ತುತಪಡಿಸಿದರು. ಉಪನ್ಯಾಸಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಚಾರ್ಯರಾದ ದೀಪಕ್.ವೈ.ಆರ್, ಶಾಲಾ ವೃಂದದವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.