ಶಿವಳ್ಳಿ ಸಂಪನ್ನದಿಂದ ಸಾಮೂಹಿಕ ದೀಪಾವಳಿ

Shivalli Depavali copyಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ಸಾಮೂಹಿಕ ದೀಪಾವಳಿ ಆಚರಣೆ, ಸಂಪನ್ನದ ಉಪಾಧ್ಯಕ್ಷ ರಮೇಶ್‌ಕುಮಾರ್ ಮತ್ತು ಲೀಲಾ ರಮೇಶ್ ಅವರ ನಿವಾಸ ಅಪೂರ್ವದಲ್ಲಿ ನಡೆಯಿತು.  ಸಂಪನ್ನದ ಮಾಜಿ ಅಧ್ಯಕ್ಷ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮೂಡಿತ್ತಾಯ ರವರು ದೀಪಾವಳಿ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ರಾಮದಾಸ್ ಐತಾಳ, ಸರಳಾ ಹಾಗೂ ಕೃಷ್ಣ ನಾವಡ ಭಾಗವಹಿಸಿದ್ದರು.
ಬೃಂದಾವನ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಅವರು ನಿರೂಪಿಸಿದರು. ಶಿವಳ್ಳಿ ಸಂಪನ್ನದ ಅಧ್ಯಕ್ಷ ರಮೇಶ್ ಸೋಮಯಾಗಿ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾ ವೈಲಾಯ, ಗುರುರಾಯರ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಮುರಳೀಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಶಶಿರಾಜ ಸೋಮಯಾಜಿ ಅವರು ಯಕ್ಷಗಾನದ ಹಾಡುಗಳನ್ನು ಹಾಡಿದರು. ಪುಟಾಣಿಗಳಿಂದ ನೃತ್ಯ, ಹಾಡು ವಿವಿಧ ಮೋಜಿನ ಸ್ಪರ್ಧೆಗಳು ಹಬ್ಬದ ವಾತಾವರಣಕ್ಕೆ ಮೆರುಗು ನೀಡಿತು.
ಈ ಸಂದರ್ಭದಲ್ಲಿ ರಮೇಶ್ ಕುಮಾರ್, ಲೀಲಾ ರಮೇಶ್, ರಾಹುಲ್ , ಶ್ರೀಹರ್ಷ, ರಶ್ಮಿ, ಕರ್ಯಕ್ರಮಕ್ಕೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.