ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

Kannada Nudi-Nade Samvada-Sneha Sulliaಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವದ ನ. ೧ರಂದು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ತುಮಕೂರು ಉದ್ಯಮಿ ವೆಂಕಟೇಶ್ ಕಾರಂತರವರು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ “ಅಸಾಮಾನ್ಯ ಕನ್ನಡಿಗ” ಪ್ರಶಸ್ತಿ ವಿಜೇತ ತೂಗುಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಡಾ. ವಿದ್ಯಾಶಾಂಭವ ಪಾರೆ, ಉಪಾಧ್ಯಕ್ಷ ಎಸ್. ಕೆ. ಆನಂದ್, ಶ್ರೀಮತಿ ಕವಿತಾ ಕಾರಂತ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ, ಶಿಕ್ಷಕಿ ಜಯಂತಿ. ಕೆ ವಂದಿಸಿದರು. ಶಿಕ್ಷಕಿ ಸವಿತ ಎಂ. ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ‘ಕವಿಗೋಷ್ಠಿ’ ಹಾಗೂ ಅಧ್ಯಾಪಕ ವೃಂದದವರಿಂದ ‘ ಕನ್ನಡ ನುಡಿ-ನಡೆ ಸಂವಾದ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ಶಿಕ್ಷಕರಾದ ರಘುರಾಮ ಭಟ್ ಸಿ, ದೇವಿಪ್ರಸಾದ್ ಜಿ.ಸಿ, ಶಿಕ್ಷಕಿಯರಾದ ಸವಿತಾ ಯಂ, ಪವಿತ್ರ ಕೆ, ಭಾಗವಹಿಸಿದರು. ಈ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ವಿಶ್ವಾಸ್ ಡಿ, ಮುರಾರಿ ಅಭ್ಯಂಕರ್, ದೀಕ್ಷಿತ್ ರೈ ಕೆ.ಸಿ, ಅನಘಾ ಆರ್. ಯು, ಪ್ರೀತಿ ಯು, ಕೌಶಿಕ ಜಿ, ಲಿಖಿತಾ, ಯಶಸ್ವಿನಿ, ಸೇವಿತಾ ಪಿ. ಸಿ, ಕವನ ಎಂ. ವಿ, ವೈಷ್ಣವಿ ಕೆ. ಹೆಚ್ ಮತ್ತು ಮಹಿಮಾ ಯು. ಎಸ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.