ಕಸಾಪದಿಂದ ಸಾಹಿತ್ಯ ಸಂಭ್ರಮಕ್ಕೆ ಚಾಲನೆ

ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸುವಿಚಾರ ಸಾಹಿತ್ಯ ವೇದಿಕೆಗಳ ಆಶ್ರಯದಲ್ಲಿ ರಾಜ್ಯೋತ್ಸವದ ಪ್ರಯುಕ್ತ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನ.1ರಂದು ನೀಡಿದರು.K.S.P dinda sahitya sambrama copy

ಸುಳ್ಯದ ಸಂಧ್ಯಾರಶ್ಮಿ ಸಭಾಭವನದಲ್ಲಿ ನಡೆದ ಹರಟೆ ಸಂಭ್ರಮ ಕಾರ್ಯಕ್ರಮವನ್ನು ಹಿರಿಯ ಸಾಹಿತಿ, ಪದವಿ ಪೂರ್ವ ಶಿಕ್ಷಣ ಇಲಖೆಯ ನಿವೃತ್ತ ಉಪನಿರ್ದೇಶಕಿ ಶೀಲಾವತಿ ಕೊಳಂಬೆ ಉದ್ಘಾಟಿಸಿದರು. 10ನೇ ಶತಮಾನ ಕನ್ನಡ ಸಾಹಿತ್ಯದ ಅಭ್ಯುದಯದ ಕಾಲ ಎಂದು ವಿಶ್ಲೇಶಿಸಿದ ಅವರು ಕನ್ನಡದ ರತ್ನತ್ರಯರುಗಳಾದ ಪಂಪ, ರನ್ನ, ಪೊನ್ನರು ನಾಡಿಗೆ ನೀಡಿದ ಕೊಡುಗೆಯನ್ನು ನೆನಪಿಸಿದರು.
ಸುವಿಚಾರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ರಂಗಯ್ಯ, ಸ್ವಂತಿಕಾ ಸಾಹಿತ್ಯ ಸಾಂಸ್ಕೃತಿಕ ಬಳಗದ ಅಧ್ಯಕ್ಷ ನಾರಾಯಣ ನೀರಬಿದಿರೆ, ಕನ್ನಡ ಸಾಹಿತ್ಯ ಪರಿಷತ್‌ನ ಕೋಶಾಧಿಕಾರಿ ದಯಾನಂದ ಆಳ್ವ, ಎಂ.ವಿ.ಗಿರಿಜಾ ವೇದಿಕೆಯಲಿ ಉಪಸ್ಥಿತರಿದ್ದರು.
ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ ಸ್ವಾಗತಿಸಿದರು. ಸಿ.ಕೆ.ಕೇಶವ ಕಾರ್ಯಕ್ರಮ ನಿರೂಪಿಸಿದರು.
ಪ್ರಕಾಶ್ ಮೂಡಿತ್ತಾಯ, ರಾಕೇಶ್ ಕುಮಾರ್ ಕಮ್ಮಜೆ, ಡಾ.ವೀಣಾ, ಕವಿತಾ ಅಡೂರು ಅವರಿಂದ ಕನ್ನಡಕ್ಕಾಗಿ ಹೋರಾಟ- ಹರಟೆ ಕಾರ್ಯಕ್ರಮ ನಡೆಯಿತು. ವೆಂಕಟರಾಮ್ ಭಟ್ ಸಮನ್ವಯಕಾರರಾಗಿದ್ದರು. ಮಮತಾ ಮೂಡಿತ್ತಾಯ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.