ಆಲೆಟ್ಟಿ ನಾರ್ಕೋಡು ಕನ್ನಡ ರಾಜ್ಯೋತ್ಸವ ಮತ್ತು ಹುಟ್ಟುಹಬ್ಬ ಆಚರಣೆ

ಆಲೆಟ್ಟಿ ಗ್ರಾಮ ಸ.ಹಿ.ಪ್ರಾ. ಶಾಲೆ ನಾರ್ಕೋಡಿನಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಹಾಗೂ ಆಲೆಟ್ಟಿಯ ನವಮಿ ಟ್ರೇಡಿಂಗ್‌ನ ಮಾಲಕರಾದ ರಮೇಶ್ ಪೂಜಾರಿ ಮೊರಂಗಲ್ಲು ಇವರ 60ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

Narkodu kannada rajyotsava 1 copy

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ರಾಜ್ಯೋತ್ಸವದ ಕುರಿತು ಭಾಷಣ ಕಾರ್ಯಕ್ರಮ ನಡೆಯಿತು. ರಮೇಶ್ ರವರ ಹುಟ್ಟಹಬ್ಬವನ್ನು, ಕೇಕ್ ಕತ್ತರಿಸುವ ಮೂಲಕ ಆಚರಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಆಲೆಟ್ಟಿ ಅಂಚೆ ಕಚೇರಿಯ ಅಂಚೆಪಾಲಕ ವೇಣುಗೋಪಾಲ್ ಕುಡೆಕಲ್ಲು, ಪ್ರಗತಿಪರ ಕೃಷಿಕ ಉದಯ ಕುಡೆಕಲ್ಲು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪದ್ಮ ರಂಗನಾಥ್‌ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸುಮಿತ್ರ ಇಂಜಿನಿಯರ್ ಸುಳ್ಯ, ಪಕೀರಪ್ಪ ಸಂಪಾಜೆ, ಮೋನಪ್ಪ ಪೂಜಾರಿ, ವಸಂತ ಬೆಳ್ತಂಗಡಿ, ಆನಂದ ಅಡ್ಪಂಗಾಯ, ವಾಸುದೇವ ಕುಡೆಕಲ್ಲು, ಶ್ರೀಮತಿ ಇಂದಿರಾ, ಮಧುಕುಮಾರ್, ಶಾಂತರಾಮ ಎಲಿಕಳ, ರೋಹಿತಾಶ್ವ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಜ್ಯೋತಿ ಬೆಳಗುವ ಸಂದರ್ಭದಲ್ಲಿ ಸಂಧ್ಯಾ ಮಂಡೆಕೋಲು ನಾಡಗೀತೆಯನ್ನು ಹಾಡಿದರು. ಕೆ.ಸಿ. ಪೂಜಾರಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕವೃಂದದವರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.

narkodu kannada rajyotsava copy

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.