ಗಾಂಧಿನಗರ :ಸಮುದಾಯದತ್ತ ಶಾಲಾ ಕಾರ್ಯಕ್ರಮ

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಇಲ್ಲಿ2016-17 ನೇ ಸಾಲಿನ ಮೊದಲನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಅಬ್ದುಲ್ ಅಝೀಜ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನಗರ ಪಂಚಾಯತ್ ಸದಸ್ಯರಾದ ಎನ್.ಎ.ರಾಮಚಂದ್ರ ಸಮುದಾಯದತ್ತ ಕಾರ್ಯಕ್ರಮದ ಕುರಿತಾಗಿ ಮಾಹಿತಿ ನೀಡಿದರು.
gandhinagara samudayadatta shale2 ನೋಡೆಲ್ ಅಧಿಕಾರಿಯಾಗಿ ಸುಳ್ಯ ಸ.ಪ.ಪೂ.ಕಾಲೇಜಿನ ಶಿಕ್ಷಕಿ ಯಮುನಾ ಎನ್.ಜಿ. ಭಾಗವಹಿಸಿದ್ದರು. ನಿವೃತ ಶಿಕ್ಷಕ ಮದುವೆಗದ್ದೆ ಸೇಸಪ್ಪ ಮಾಸ್ತರ್, ಸಂಸ್ಥೆಯ ಮುಖ್ಯ ಶಿಕ್ಷಕ ಕೋಟಿಯಪ್ಪ ಪೂಜಾರಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಭವಾನಿ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಭವಾನಿ ಎ.ಜಿ., ದೇವಮ್ಮ, ದಮಯಂತಿ ಎಂ., ಪುಷ್ಪಾವತಿ ಸಹಕರಿಸಿದರು. ಈ ಸಂದರ್ಭದಲ್ಲಿ ಪೋಷಕರು, ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದಿವ್ಯಾ ಪ್ರಾರ್ಥಿಸಿ, ಶಿಕ್ಷಕಿ ಜಯಶ್ರೀ ಎಂ., ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿ ವಂದಿಸಿದರು. ಶಿಕ್ಷಕಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.