ದೇಶ ಪ್ರೇಮಿಗಳ ಸರಳ ಜೀವನ ಎಲ್ಲರಿಗೂ ಮಾರ್ಗದರ್ಶನವಾಗಲಿ – ಡಾ ಚಂದ್ರಶೇಖರ ದಾಮ್ಲೆ

ಗಾಂಧೀಜಿ ಹಾಗೂ ಶಾಸ್ತ್ರೀಜಿ, ಇಬ್ಬರು ಅಪ್ಪಟ ದೇಶಪ್ರೇಮಿಗಳು, ಇವರಿಗೆ ಬಡವರ ಬಗ್ಗೆ ಕರುಣೆ, ನಮ್ಮ ಪರಂಪರೆಯ ಬಗ್ಗೆ ಗೌರವ, ಎಲ್ಲರ ಏಳ್ಗೆಯ ಹಂಬಲವಿತ್ತು. ಸ್ವಯಂ ಕೆಲಸ ಮಾಡುವುದರ ಮೂಲಕ ಎಲ್ಲರಿಗೂ ಮಾರ್ಗದರ್ಶಕರು ಎಂದು ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.

ಅವರು ಸ್ನೇಹ ಶಾಲೆಯಲ್ಲಿ ನಡೆದ ಗಾಂಧೀಜಿ ಹಾಗೂ ಶಾಸ್ತ್ರೀಜೀಯವರ ಜಯಂತಿ ಆಚರಣೆಯ ಸಭಾ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಮಾತನಾಡಿ ಇಬ್ಬರು ವ್ಯಕ್ತಿಗಳು ನಮಗೆ ಪ್ರಾತಃ ಸ್ಮರಣೀಯರು. ಇವರ ದೇಶಭಕ್ತಿ, ಸರಳಜೀವನ, ಕರ್ತವ್ಯ ಪ್ರಜ್ಞೆ ಇವುಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳೋಣ ಎಂದರು. ಶಾಸ್ತ್ರೀಜಿಯವರ ಕುರಿತು ಶಿಕ್ಷಕ ರಘುರಾಮ ಸಿ ಭಟ್ ಮಾತನಾಡಿ ಶಾಸ್ತ್ರೀಜೀ ಶಾಂತಿಯ ಹರಿಕಾರ, ಅವರ ಸಾಧನೆ, ಕೆಲಸದ ಸಮರ್ಥ ನಿರ್ವಹಣೆ ಬಗ್ಗೆ ತಿಳಿಸಿದರು. ಹಾಗೆಯೇ ಗಾಂಧೀಜಿಯವರ ಕುರಿತು ಶಿಕ್ಷಕ ದೇವಿಪ್ರಸಾದ್ ಜೆ.ಸಿ ಮಾತನಾಡಿ ಗಾಂಧೀಜಿಯವರ ಚಿಂತನೆ, ಸಮಯಪಾಲನೆ, ಸ್ವಚ್ಛತೆ, ಸರಳಜೀವನ, ಅಹಿಂಸಾವೃತ, ಒಗಟ್ಟು ಸರಳ ಸಜ್ಜನಿಕೆಗಳನ್ನು ತಿಳಿಸಿದರು. ಕಾರ್ಯಕ್ರಮವು ಅನಘಾ ಆರ್ ಯು ಇವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಿಕ್ಷಕಿ ಸವಿತಾ ಯಂ ಸ್ವಾಗತಿಸಿ, ನಿರೂಪಿಸಿದರು, ಶಿಕ್ಷಕಿ ಕು ದಿವ್ಯಾ ಕೆ. ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.