ಮಕ್ಕಳ ಮಂಟಪ-ಶಿಕ್ಷಣದಲ್ಲಿ ಮಾತಿನ ಸುಧಾರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇತ್ತೀಚೆಗೆ ಗಂಭೀರ ವಿಚಾರಗಳ ಬಗ್ಗೆ ಮಾತನಾಡುವುದು, ಬರೆಯು ವುದು, ಓದುವುದುಎಲ್ಲವೂ ಮಹತ್ವದ ಸಂಗತಿಯಾಗಿ ಏನೂ ಉಳಿದಿಲ್ಲ, ಮತ್ತು ಇವೆಲ್ಲವೂ ಮಾತನಾಡಿದಂತೆ ಅಥವಾ ಬರೆದಂತೆಯೂ ಅಲ್ಲ. ಅದಕ್ಕಾಗಿ ಒಂದು ಬದ್ಧತೆ ಅಥವಾ ಪ್ರಾಮಾಣಿಕತೆ ಇವೆಲ್ಲವೂ ಇರಲೇಬೇಕೆಂದೇನೂ ಇಲ್ಲ. ಯಾವುದು ಆಗಬಾರದೆಂದು ಬಯಸುತ್ತೇವೆಯೋ ಅದು ಅಗುತ್ತಲೇ ಇರುವುದು, ಯಾವುದು ಆಗಬೇಕೆಂದು ಆಶಿಸುತ್ತೇವೆಯೋ ಅದು ಆಗದೇ ಇರುವುದು ಎಲ್ಲವೂ ಸರ್ವೇ ಸಾಮಾನ್ಯ ವಿಷಯ. ರಾಜಕೀಯ, ಧರ್ಮ, ಸಂಸ್ಕೃತಿ, ಹೋರಾಟ ಹೀಗೆ ಎಲ್ಲಾ ಕ್ಷೇತ್ರಗಳ ಕತೆಯೂ ಇದೇ ಆಗಿದೆ. ಹಾಗೆಂದು ಇದು ಹತಾಶೆಯ ಮಾತುಗಳೇನೂ ಅಲ್ಲ, ಯಾವುದೂ ಸರಿ ಇಲ್ಲ ಎನ್ನುವ ಅಭಿಪ್ರಾಯವೂ ಅಲ್ಲ. ಆದರೆ ಮನುಷ್ಯನ ಅಭಿ ರುಚಿ, ಆಸಕ್ತಿ, ಧಾರಣಾ ಶಕ್ತಿ ಮತ್ತು ಆಲೋಚನಾ ಕ್ರಮಇವೆಲ್ಲವೂ ವಿಚಿತ್ರವಾಗಿ ಬದಲಾಗುತ್ತಿರುವುದು ಮತ್ತು ಅದುತನ್ನ ನೇರದಲ್ಲೇತನಗೆ ಬೇಕಾದಂತೆ ಬದಲಾಗುತ್ತಿರುವುದು, ಅದೆಲ್ಲವೂ ಉಳಿದ ತಾಂತ್ರಿಕ ನಿರ್ವಹಣೆಯಂತೆ ನಿರ್ವಹಿಸ ಲ್ಪಡುತ್ತಿರುವುದು ಇಂದಿನ ವಾಸ್ತವ ಸತ್ಯ.ಇದು ಶಿಕ್ಷಣ ವ್ಯವಸ್ಥೆಯನ್ನು ಬಿಟ್ಟಿಲ್ಲ. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಅಪನಂಬಿಕೆ, ಅಪ್ರಬುದ್ಧ ತೀರ್ಮಾನ ಮತ್ತು ಅನಗತ್ಯ ಗೊಂದಲ ಒಟ್ಟು ಸಾಮಾಜಿಕ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತಿರು ವುದನ್ನು ನೋಡಬಹುದು.ಶಿಕ್ಷಣದಲ್ಲಿನ ಭಾಷಾ ಮಾಧ್ಯಮದ ಬಗೆಗಿನ ವಿಚಾರ, ಸರಕಾರಿ ಶಾಲೆಗಳ ಬಗೆಗಿನ ನಿರುಪಯುಕ್ತಚರ್ಚೆ, ಗುಣಾತ್ಮಕಕಲಿಕೆಯ ಬಗೆಗಿನ ಹಗಲುಗನಸು, ಸ್ಪರ್ಧೆ, ಅಂಕಗಳ ಬಗೆಗಿನ ವ್ಯಾಮೋಹ ಇತ್ಯಾದಿಗಳೆಲ್ಲವೂ ಕೂಡ ಇಂದು ಪ್ರಬುದ್ಧವಾಗಿ ನಡೆಯುತ್ತಿರುವ ಪ್ರಕ್ರಿಯೆಗಳಲ್ಲ ಮತ್ತು ಇವೆಲ್ಲವುಗಳ ಬಗ್ಗೆ ಚರ್ಚೆ ಮಾಡುತ್ತಿರುವ ಬಹುತೇಕರು ಇವುಗಳನ್ನು ಮೀರಿ ನಿಂತವರೂಅಲ್ಲ. ಅವುಗಳ ಹಿಂದೆಯೇ ನಿಂತು ಮುಂದೆ ಮಾತನಾಡುತ್ತಿರುವುದು, ಬರೆಯುತ್ತಿರು ವುದು. ಹಾಗಾಗಿ ಈ ಚರ್ಚೆಗಳು ಒಂದು ಕಾಲಕ್ಷೇಪ ವಿಚಾರಗಳಾಗುತ್ತಿವೆಯೇ ಹೊರತು ಕಾರ್ಯಾಚರಣೆಯ ಸಂಗತಿಯಾಗುತ್ತಿಲ್ಲ. ಆದ್ದರಿಂದಲೇ ಶಿಕ್ಷಣದ ಬಗ್ಗೆ ನಡೆಯುವ ಮಾತು, ಬರವಣಿಗೆ, ಚರ್ಚೆಗಳೆಲ್ಲವೂ ಲಗಾಮಿಲ್ಲದೇ ಮುಂದುವರಿಯುತ್ತಿರುವುದು.
ಈ ರೀತಿಯ ಕಾಲಕ್ಷೇಪದ ನಡೆಗಳಿಂದಾಗಿಯೇ ನಮ್ಮ ಶಿಕ್ಷಣ ವ್ಯವಸ್ಥೆಮತ್ತೆ ಹಿಂತಿರುಗಲಾರದಷ್ಟು ದೂರಹೋಗಿರುವುದು.ಇನ್ನು ಸ್ಪರ್ಧೆಇಲ್ಲದ, ಅಂಕಗಳಿಲ್ಲದ ಮತ್ತು ಮಾತೃಭಾಷೆಯ ಹಾಗು ಸರಕಾರಿ ವ್ಯವಸ್ಥೆಯ ಶಾಲೆಗಳಿಗೆ ನಮ್ಮ ಸಮಾಜ ಮಾನ್ಯತೆ ನೀಡುತ್ತದೆ ಎನ್ನುವ ಭರವಸೆಯಂತೂ ಇಲ್ಲ. ಅಲ್ಲದೇ ಹೇಳುವು ದರಲ್ಲಿ ಇರುವ ಸುಖ ಪಾಲಿಸುವುದರಲ್ಲಿಇಲ್ಲಎನ್ನುವ ಸತ್ಯ ಬಹುತೇಕ ಹೇಳುವ ವರ್ಗಕ್ಕೂ ಗೊತ್ತಾಗಿದೆ. ಆದ್ದರಿಂದಯಾರು ಕೇಳಲಿ ಬಿಡಲಿ ತಾವು ಬೋಧನೆಯನ್ನು ಮಾಡಿಯೇ ತೀರುತ್ತೇವೆ ಎನ್ನುವುದನ್ನು ಈ ಸಮಾಜ ಅಂಗೀಕರಿಸುತ್ತಿದೆ. ಆದ್ದರಿಂದ ಶಿಕ್ಷಣ ಎನ್ನುವುದು ಅವನವನ ಮೂಗಿನ ನೇರದಲ್ಲಿ ಮುಂದುವರಿಯುತ್ತಿರುವುದು ಸಂಗತಿಯಾಗುತ್ತಿಲ್ಲ. ಸಹಜ ಕಲಿಕೆ ಎನ್ನುವುದೇ ಶಿಕ್ಷಣ ಪ್ರಕ್ರಿಯೆಯ ಮಾನದಂಡವಾಗಿಯೂ ಉಳಿದಿಲ್ಲ. ಆದರೂ ಭವಿಷ್ಯತ್ತಿನ ಹಿನ್ನಲೆಯಲ್ಲಿ ನಮ್ಮ ಮಕ್ಕಳ ಮುಂದೆ ಹತ್ತು ಹಲವು ಸವಾಲುಗಳಿವೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಒಂದುಕಾಲದಲ್ಲಿ ಹಸಿವು ಜಗತ್ತಿನ ಪ್ರಧಾನ ಸಮಸ್ಯೆ, ಭಾರತದಂತಹ ದೇಶಗಳಲ್ಲಿ ಶಿಕ್ಷಣದ ಅವಕಾಶವೂ ಅಷ್ಟೇ ಮೂಲಭೂತ ಸಮಸ್ಯೆ.ಆದರೆಇಂದುಇವೆರಡೂ ಮುಂದುವರಿದ ಮತ್ತು ಮುಂದುವರಿಯುತ್ತಿರುವ ರಾಷ್ಟ್ರಗಳ ಸಮಸ್ಯೆಗಳಲ್ಲ. ಬದಲಾಗಿ ತಿಳುವಳಿಕೆ ಅಥವಾಅರಿವಿನ ವ್ಯಾಪ್ತಿ, ಅದರ ವ್ಯಾಖ್ಯಾನ ಮತ್ತು ಅದರ ಪ್ರತಿ ಫಲನವೇ ಬಹುದೊಡ್ಡ ಸಮಸ್ಯೆ. ಸ್ನಾತಕೋತ್ತರ ಪದವೀಧರರಿಗೇ ದಿನದ ವ್ಯವಹಾರ ಮಾಡಲಾಗದೇ ಇರುವ, ಸಮಾಜದ್ರೋಹಿ ಕಾರ್‍ಯಗಳಲ್ಲಿ ತೊಡಗಿಕೊಳ್ಳುವ ಮತ್ತು ಬಹುತೇಕ ಪದವೀಧರರು ನಿಷ್ಪ್ರಯೋಜಕರಾಗಿ ಸಮಾಜಕ್ಕೆ ಹೊರೆಯಾಗಿ ರುವ ಉತ್ಪನ್ನಗಳಾಗಿ ಹೊರ ಬರುವುದನ್ನು ಗಮನಿಸುತ್ತಿದ್ದೇವೆ. ಇದು ಒಂದು ರೀತಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮತ್ತು ಅದನ್ನು ಪೋಷಿಸುವ ಈ ಸಮಾಜವನ್ನು ಅಣಕಿಸುತ್ತಿದೆ.
ಒಬ್ಬ ವ್ಯಕ್ತಿ ತನ್ನನ್ನು ತಾನೇ ಸ್ವಯಂ ನಿರ್ದೇಶಿಸುವ ಬದಲುಯಾ ವುದೋ ಮೂರನೇ ವ್ಯವಸ್ಥೆಯೊಂದುಆತನನ್ನು ನಿಯಂತ್ರಿಸುತ್ತಾ ಇರುವು ದನ್ನೂ ನಾವಿಂದು ಕಾಣುತ್ತಿದ್ದೇವೆ. ಸಹಜವಾಗಿ ಹುಟ್ಟಿಕೊಳ್ಳುವ ಭಾವನೆಗಳ ಬದಲಾಗಿ ಬಾಹ್ಯ ಸಂಗತಿಗಳು ಪ್ರಭಾವಿಸಲ್ಪಡುತ್ತಿವೆ. ಹೊರ ನೋಟಕ್ಕೆ ಕಾಣುವ ಅಂಶಗಳನ್ನೇ ಒಪ್ಪಕೊಳ್ಳುವ ಮತ್ತು ಅದನ್ನೇ ಸತ್ಯವೆಂದು ನಂಬುವ ಬೌದ್ಧಿಕ ದಾರಿದ್ರ್ಯ ಇಂದಿನ ಶಿಕ್ಷಣ ವ್ಯವಸ್ಥೆಯ ಕೊಡುಗೆಯಾಗುತ್ತಿಯೋಎನ್ನುವ ಸಂಶಯವೂ ಕಾಡುತ್ತಿದೆ. ಇಂತಹಾ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ಮಕ್ಕಳ ಕಲಿಕೆ ಮತ್ತು ಅವರ ಭವಿಷ್ಯದ ಬಗ್ಗೆ ಹಿಂತಿರುಗಿ ನೋಡಬೇಕಾಗಿದೆ. ಭವಿಷ್ಯತ್ತ ನ್ನು ವರ್ತಮಾನದಲ್ಲಿ ನಿಂತು ಭೂತದಲ್ಲಿ ನೋಡುವುದು ಎನ್ನುವುದೇ ಒಂದು ವಿಶೇಷಣ. ಈ ವಿಶೇಷಣವನ್ನು ನಮ್ಮ ಜನಪದರು ಮಾಡಿದ್ದರು. ಅವರ ಕಲಿಕೆ ಅಕ್ಷರರೂಪದಲ್ಲದಿದ್ದರು ಅನುಭವರೂಪದ್ದಾಗಿತ್ತು. ಇವತ್ತಿಗೂ ಅನುಭವರೂಪದ ಕಲಿಕೆ ಮತ್ತು ಪಠ್ಯಗಳ ಅಗತ್ಯ ನಮ್ಮ ಮಕ್ಕಳಿಗೆ ಬೇಕಾಗಿದೆ. ಸಹಜವಾದ ಕಲಿಕಾ ಪರಿಸರ, ಸಮಾಜಮುಖಿಯಾದ ಪಠ್ಯ, ಮಗು ಪ್ರೀತಿಸುವ ಮತ್ತು ಒಪ್ಪಿಕೊಳ್ಳವ ಬೋಧನೆ ಇವೆಲ್ಲವುಗಳ ಮಧ್ಯೆ ಒಂದಷ್ಟು ಪ್ರಾಮಾಣಿಕ ಮತ್ತು ಬದ್ಧತೆಯ ಹಿಮ್ಮಾಹಿತಿಗಳು ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಬೇಕಾಗಿದೆ. ಮಕ್ಕಳ ಕಲಿಕೆಯೊಂದಿಗೆ ಪೋಷಕನ ತಿಳುವಳಿಕೆ ಗಟ್ಟಿಗೊಳ್ಳುತ್ತಾ ಹೋಗುವ ಕಾಲವೊಂದು ನಮ್ಮ ಮುಂದೆ ಸೃಷ್ಟಿಯಾದದ್ದೇ ಆದರೆ ನಮ್ಮ ಶಿಕ್ಷಣ ತನ್ನಿಂದತಾನೇ ಸುಧಾರಣೆಯಾಗುತ್ತದೆ.
ಡಾ.ಸುಂದರ ಕೇನಾಜೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.