ಮೂಢನಂಬಿಕೆ ತ್ಯಜಿಸಿ ಹೊರಬನ್ನಿ…

ಸಮಾಜದಲ್ಲಿ ತಲೆಮಾರುಗಳಿಂದ ಬಂದಂತಹ ಮೂಢನಂಬಿಕೆಗಳು ಹೆಚ್ಚಾಗಿ ಒಳ ಗೊಳ್ಳುವುದು ಸ್ತ್ರೀಯರನ್ನು. ಅನಾದಿಕಾಲದಿಂ ದಲೂ ನಡೆದು ಬಂದ ಈ ಮೂಢನಂಬಿಕೆ ಗಳಿಗೆ ಬಹುತೇಕ ಸಂದರ್ಭಗಳಲ್ಲಿ ಬಲಿಪಶುವಾಗುತ್ತಿರು ವುದು ಮಹಿಳೆಯೆನ್ನುವುದು ನಿಜಕ್ಕೂ ಶೋಚ
ನೀಯ ಸಂಗತಿ. 

ತಾನು ಬಲಿಪಶುವಾಗುವ ಮೂಢನಂಬಿಕೆ ಗಳನ್ನು ನಿರಾಕರಿಸುವ ಪ್ರತಿಭಟಿಸುವ ಬದಲು ಹೆಣ್ಣೇ ಅದನ್ನು ಪಾಲಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಈ ಸಮಾಜದಲ್ಲಿದೆ. ಉಡುಗೆ ತೊಡುಗೆ, ನೀತಿ, ನಿಯಮಗಳೆಲ್ಲ ಮಹಿಳೆಯರಿಗೆ ಹೊರತು ಪುರುಷರಿಗಿಲ್ಲ ಎಂಬಂತಾಗಿದೆ. ಹಿಂದಿನ ಕಾಲ ದಿಂದಲೂ ಸ್ತ್ರೀಯರನ್ನು ಈ ಪುರುಷ ಪ್ರಧಾನ ಸಮಾಜ ಕಡೆಗಣಿಸುತ್ತಾ ಬಂದಿರುವುದಕ್ಕೆ ಹಲವು ಉದಾಹರಣೆಗಳು ಚರಿತ್ರೆಗಳಲ್ಲಿ, ಜನಪದ ಕಾವ್ಯಗಳಲ್ಲಿ ನಾವು ಕಾಣಬಹುದು.
ಶತಮಾನಗಳಿಂದಲೂ ಸ್ತ್ರೀಯರನ್ನು ಹೆರುವ ಯಂತ್ರಗಳಾಗಿಯೇ ಈ ಸಮಾಜ ನಡೆಸಿಕೊಂಡು ಬಂದಿದೆ. ಮಹಿಳೆಯರು ರಜಸ್ವಾಲೆಯರಾದಾಗ(ಮುಟ್ಟಾದಾಗ)ಅವರನ್ನು ಬೇರೆಯೇ ಕೂರಿಸುವಂತಹ ಪದ್ಧತಿ ಇನ್ನೂ ಆಚರಣೆಯಲ್ಲಿದೆ. ಧಾರ್ಮಿಕ ಕಾರ್ಯಗಳಲ್ಲಿ, ಮದುವೆ ಇನ್ನಿತರ ಸಮಾರಂಭದಲ್ಲಿ ಆಕೆಯ ನೆರಳು ಕೂಡಾ ಸೋಕಬಾರದು, ಸೋಕಿದರೆ ಅಶುದ್ದವಾಗುತ್ತದೆ. ಮಾಡಿದ ಯಾವುದೇ ಕಾರ್ಯಗಳು ಫಲಕೊಡುವುದಿಲ್ಲವೆಂದು ಮಹಿಳೆಯನ್ನು ಒಂದು ವಾರದ ಕಾಲ ಮನೆಯ ಹೊರಗಿನ ಕೋಣೆಯಲ್ಲಿ ಕೂರಿಸುವ ಪದ್ದತಿ ಇನ್ನೂ ಸಮಾಜದಲ್ಲಿದೆ. ಮುಟ್ಟು ಎಂಬುದು ಒಂದು ಸಹಜವಾದ ನೈಸರ್ಗಿಕ ಪ್ರಕ್ರಿಯೆ. ಅದರಲ್ಲಿ ಯಾವುದೇ ಅಶುದ್ಧತೆಯಾಗಲಿ ಇಲ್ಲ. ಹಾಗೆಯೇ ಜನನದ ವೇಳೆಯಲ್ಲಿ ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಬೇಕು. ಆದರೆ ೧೬ ದಿವಸಗಳ ಸೂತಕದ ವಾತಾವರಣ!!!. ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸು ವಂತಿಲ್ಲ ಎಂಬುದನ್ನು ನೋಡಿದಾಗ ನಿಜಕ್ಕೂ ಎಂತಹ ಮೂಢನಂಬಿಕೆಗೆ ನಾವು ತುತ್ತಾಗಿದ್ದೇವೆ ಎಂದೆನಿಸುತ್ತದೆಯಲ್ಲವೇ?? ಈ ಅನಿಷ್ಟ ಪದ್ದತಿಗಳಿಗೆ ಕಡಿವಾಣ ಹಾಕಿ ಅವು ಸಮಾಜದಿಂದ ಮರೆಯಾದಾಗ ಮಾತ್ರ ಸಮಾಜ ಅಭಿವೃದ್ದಿ ಹೊಂದಲು ಸಾಧ್ಯ.

ಹಿಂದೆ ಸ್ತ್ರೀ ವಿಧವೆಯಾದಾಗ ಅವಳ ಹಣೆಯಿಂದ ಕುಂಕುಮವನ್ನು ಅಳಿಸಿ, ತಲೆ ಬೋಳಿಸಿ, ಬಳೆ ಒಡೆದು ವಿಕೃತತೆ ಯಿಂದ ಸಮಾಜ ಅವಳನ್ನು ನಡೆಸಿಕೊಳ್ಳುತ್ತಿತ್ತು. ಆದರೆ ಇಂದೂ ಕೂಡಾ ವಿಧವೆಯರ ಬಾಳಲ್ಲಿ ಸಂಪೂರ್ಣ ಬದಲಾವಣೆಯಾಗಿಲ್ಲ. ಮಡಿವಂತಿಕೆ, ಸಂಪ್ರದಾಯವೆಂದು ಮೆರೆಯುವವರ ಮನೆಯಲ್ಲಿ ನಡೆಯುವ ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗಳಲ್ಲಿ ವಿಧವೆಯರೇ ದೂರ ಉಳಿಯುತ್ತಾರೆ. ಆಕೆಗೆ ಆಗುತ್ತಿರುವ ಅವಮಾನ, ತಿರಸ್ಕಾರ ವನ್ನು ಆಕೆ ಮೌನವಾಗಿಯೇ ಅನುಭವಿಸುತ್ತಾಳೆ.
ಮಹಿಳೆಯರ ಮೇಲೆ ಅತ್ಯಂತ ಕ್ರೂರವಾದ, ಸಮಾಜ ವಿರೋಧಿಯಾದ, ಸಹಿಸಲಾರದ ಅನೇಕ ಮೂಢನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿದೆ. ಇವನ್ನೆಲ್ಲಾ ತೊಡೆದು ಹಾಕಬೇ ಕಾದ ಅಗತ್ಯ ಖಂಡಿತಾ ಇದೆ. ಆದರೆ ಜನಜಾಗೃತಿಯ ಮೂಲಕ ತೊಡೆದು ಹಾಕುವುದು ಸೂಕ್ತ. ಪರಿವರ್ತನೆ ಜಗದ ನಿಯಮ. ಪರಿವರ್ತನೆಯಾಗಲೇಬೇಕು. ಮಹಿಳೆಯರ ಮೇಲಿರುವ ಮೂಢನಂಬಿಕೆಗಳು ತೊಲಗಬೇಕು. ಈ ಎಲ್ಲಾ ಪರಿಧಿಯಿಂದ ಇಂದು ಸ್ತ್ರೀ ಹೊರಬರಲೇ ಬೇಕು. ಸಮಾಜ ವನ್ನು ತಿದ್ದಿ, ತೀಡಬಲ್ಲ ಶಕ್ತಿ ಆಕೆಗಿದೆ. ಹೆಣ್ಣಿನ ವಿಚಾರವಾ ಗಿರುವ ಅವೈಜ್ಞಾನಿಕ ಧೋರಣೆಗಳನ್ನು ಸಮಾಜ ಕೈಬಿಡಬೇಕು. ಆವಳ ಆಸೆ, ಆಲೋಚನೆ, ಕನಸುಗಳಿಗೆ ಸಮಾಜ ಪೂರಕವಾಗಬೇಕೆ ಹೊರತು ಮಾರಕವಾಗಬಾರದು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೂ ಸಮಾನವಾದ ಆದ್ಯತೆ ಇದೆ. ಹೆಣ್ಣಿನ ಬಗೆಗಿನ ದೃಷ್ಟಿಕೋನವನ್ನು ಈ ಸಮಾಜ ಮೊದಲು ಬದಲಾಯಿಸಬೇಕು. ಸ್ವತಹಃ ಮಹಿಳೆಯರೇ ಮೂಢನಂಬಿಕೆಗಳೆಂಬ ಅನಿಷ್ಟ ಪದ್ದತಿಯಿಂದ ಹೊರಬರುವ ಧೈರ್ಯವನ್ನು ತೋರಿಸಬೇಕಿದೆ.
ಶರ್ಮಿಳಾ ಊರುಬೈಲು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.