ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆ/ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪುತ್ತೂರು: ಪುತ್ತೂರು ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ
ಕಾರ್ಯಕರ್ತೆ/ಸಹಾಯಕಿ ಹುದ್ದೆಯನ್ನು ಭರ್ತಿಗೊಳಿಸುವ ಬಗ್ಗೆ 18ರಿಂದ 35 ವರ್ಷದ, ಸ್ಥಳೀಯ ಸಾಮಾನ್ಯ
ವರ್ಗದ ಬಡತನ ರೇಖೆಗಿಂತ ಕೆಳಗಿರುವ ಕಾರ್ಯಕರ್ತೆಗೆ 10ನೇ ತರಗತಿ ಉತ್ತೀರ್ಣ ಮತ್ತು ಸಹಾಯಕಿಗೆ ಕನಿಷ್ಠ
4ನೇ ತರಗತಿಯಿಂದ ಗರಿಷ್ಠ 9ನೇ ತರಗತಿಯ ವಿದ್ಯಾರ್ಹತೆಯುಳ್ಳ, ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ
ಗಳನ್ನು ಆಹ್ವಾನಿಸಲಾಗಿದೆ.  ಶಿರಾಡಿ ಗ್ರಾಮದ ಪದಂಬಳ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ, ಕಬಕ
ಗ್ರಾಮದ ಪೆರಿಯತ್ತೋಡಿ, ಕೊಣಾಲು ಗ್ರಾಮದ ತಿರ್ಲೆ, ಕಡಬ ಗ್ರಾಮದ ಬೇರಿಕೆ, ಶಿರಾಡಿ ಗ್ರಾಮದ ಉದನೆಕಳಪ್ಪಾರು,
ಬಡಗನ್ನೂರು ಗ್ರಾಮದ ಕುಕ್ಕಾಜೆ, ಉಪ್ಪಿನಂಗಡಿ ಗ್ರಾಮದ ಕೊಪ್ಪಳ, 34 ನೆಕ್ಕಿಲಾಡಿ ಗ್ರಾಮದ ಕರೆವೇಲು, ಕೊಡಿಪ್ಪಾಡಿ
ಗ್ರಾಮದ ಪಳ್ಳತ್ತಾರು, ಬಜತ್ತೂರು ಗ್ರಾಮದ ನಾಗೋಜಿ, ಮುಂಡೂರು ಗ್ರಾಮದ ಪಾಪೆತ್ತಡ್ಕ, ಉಪ್ಪಿನಂಗಡಿ ಗ್ರಾಮದ
ಉಪ್ಪಿನಂಗಡಿ ಪೇಟೆ, ಸರ್ವೆ ಗ್ರಾಮದ ಸೊರಕೆ ಅಂಗನವಾಡಿ ಕೇಂದ್ರಕ್ಕೆ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುವುದಿಲ್ಲ. ಇಲಾಖಾ ಮಾರ್ಗ ಸೂಚಿಯ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯ ಮೂಲಕ ನೇರ ನೇಮಕಾತಿ ಮಾಡಲಾಗುವುದು. ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಆಯ್ಕೆ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಅರ್ಜಿ ಸಲ್ಲಿಸಲು ಜು.7 ಕೊನೆಯ ದಿನವಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.