ಐ.ಟಿ.ಐ, ಡಿಪ್ಲೊಮಾ, ಪಿ.ಯು.ಸಿ ಅಭ್ಯರ್ಥಿಗಳಿಗೆ ದರ್ಬೆ ಅನಿಕೇತನದಲ್ಲಿ ಉದ್ಯೋಗ ಮೇಳ

Advt_NewsUnder_1
Advt_NewsUnder_1

ಅನಿಕೇತನ ಎಜುಕೇಶನಲ್ ಟ್ರಸ್ಟ್ ಪುತ್ತೂರು ಇದರ ಆಶ್ರಯದಲ್ಲಿ ಐ.ಟಿ.ಐ, ಡಿಪ್ಲೊಮಾ ಮತ್ತು ಪಿಯುಸಿ ವಿದ್ಯಾರ್ಹತೆಯುಳ್ಳ ಉದ್ಯೋಗಾಕಾಂಕ್ಷಿಗಳಿಗೆ ಪುತ್ತೂರು ದರ್ಬೆ ಪ್ರೀತಿ ಆರ್ಕೇಡ್‌ನ ಅನಿಕೇತನ ಎಜುಕೇಶನಲ್ ಟ್ರಸ್ಟ್ ನಲ್ಲಿ ಜೂ. 6ರಿಂದ 8ರವರೆಗೆ ಉದ್ಯೋಗ ಮೇಳ ನಡೆಯಲಿದೆ.  ಜೂ. 6ರಂದು ಪೂರ್ವಾಹ್ನದಿಂದ ಸಂಜೆವರೆಗೆ ಐ,ಟಿ.ಐ. ಅಭ್ಯರ್ಥಿಗಳಿಗೆ, ಜೂ. 7ರಂದು ಡಿಪ್ಲೊಮಾ ಅಭ್ಯರ್ಥಿಗಳಿಗೆ, ಜೂ. 8ರಂದು ಪಿಯುಸಿ ಅಭ್ಯರ್ಥಿಗಳಿಗೆ ಉದ್ಯೋಗ ಮೇಳ ನಡೆಯಲಿದೆ.

ಮಂಗಳೂರು, ಉಡುಪಿ, ಮೈಸೂರು ಮತ್ತು ಬೆಂಗಳೂರು ಮೂಲದ ವಿವಿಧ ಕಂಪನಿಗಳ ಆಯ್ದ ಹುದ್ದೆಗಳಿಗಾಗಿ ನಡೆಯುವ ಈ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತರಿರುವ ಅಭ್ಯರ್ಥಿಗಳು ತಮ್ಮ ಬಯೊಡಾಟಾ – 2 ಪ್ರತಿ, ವಿದ್ಯಾರ್ಹತೆಯ ಪ್ರಮಾಣ ಪತ್ರಗಳ 2 ಪ್ರತಿ, ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಪ್ರತಿ ಮತ್ತು 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಪ್ರಥಮ ಹಂತದ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಅನಿಕೇತನ ಎಜುಕೇಶನಲ್ ಟ್ರಸ್ಟ್‌ನ ಪ್ಲೇಸ್‌ಮೆಂಟ್ ವಿಭಾಗದ ಅಧಿಕಾರಿಯಾದ ಜಯಾನಂದ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: 9686479482, 8277300222 ಮೂಲಕ ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.