ಆರ್.ಟಿ.ಇ. ಅರ್ಜಿ ಪರಿಷ್ಕರಣೆಗೆ ಮೇ.23ರವರೆಗೆ ಅವಕಾಶ: ಸುಳ್ಯ ಪಟ್ಟಣವನ್ನು ಒಂದು ಯುನಿಟ್ ಆಗಿ ಮಾಡಲು ಇಓ ಮನವಿ

Advt_NewsUnder_1
Advt_NewsUnder_1
Advt_NewsUnder_1

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ತಾಲೂಕಿನಲ್ಲಿ 143 ಸೀಟುಗಳು ಲಭ್ಯವಾಗಿದ್ದು, ಅವುಗಳಿಗೆ 213 ಅರ್ಜಿಗಳು ಬಂದಿದ್ದವು. ಆದರೆ ಸರಕಾರದ ನಿಯಮದಿಂದಾಗಿ ಅರ್ಹ ಅಭ್ಯರ್ಥಿಗಳಿಗೆ ಸೀಟು ಪಡೆಯಲು ಅಸಾಧ್ಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿ ಪರಿಶೀಲನೆಗೆ ಮೇ.2೦ರವರೆಗೆ ಅವಕಾಶ ನೀಡಲಾಗಿದ್ದು, ಅದನ್ನು ಮೇ.23ರವರೆಗೆ ವಿಸ್ತರಿಸಲಾಗಿದೆ.
ಮೊದಲನೆಯ ಹಂತದ ಸೀಟು ಹಂಚಿಕೆಯಲ್ಲಿ ಪ್ರವೇಶ ಪಡೆಯದವರು ಎರಡನೇ ಹಂತದ ಲಾಟರಿ ಪ್ರಕ್ರಿಯೆಗೆ ಮತ್ತೊಮ್ಮೆ ಅವಕಾಶ ಪಡೆಯಲು ಮೇ.23ರೊಳಗೆ ಆನ್‌ಲೈನ್ ತಂತ್ರಾಂಶದಲ್ಲಿ ಅರ್ಜಿಗಳ ಮಾಹಿತಿ ಪರಿಷ್ಕರಿಸಿ ಸಲ್ಲಿಸುವಂತೆ ಸೂಚಿಸಲಾಗಿದೆ. ಮೊದಲ ಹಂತದ ಲಾಟರಿ ಪ್ರಕ್ರಿಯೆಯಲ್ಲಿ ಸೀಟು ಹಂಚಿಕೆಯಾಗಿದ್ದರೂ ಶಾಲೆ ಇರುವ ವಾರ್ಡ್ ವ್ಯಾಪ್ತಿಯಿಂದ ಹೊರಗೆ ವಾಸವಾಗಿದ್ದಾರೆಂಬ ಕಾರಣದಿಂದ ಕೆಲವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇದೀಗ ಅರ್ಜಿಗಳನ್ನು ಮಾರ್ಪಡಿಸಲು ಅವಕಾಶ ನೀಡಲಾಗಿದೆ.
ಮೇ.19ರಂದು ಸುಳ್ಯ ತಹಶೀಲ್ದಾರ್ ಉಪಸ್ಥಿತಿಯಲ್ಲಿ ಆರ್.ಟಿ.ಇ. ಯೋಜನೆಗೆ ಅರ್ಹವಾಗಿರುವ ಶಾಲೆಗಳ ಮುಖ್ಯಸ್ಥರ ಸಭೆ ಸುಳ್ಯ ತಾಲೂಕು ಕಛೇರಿಯಲ್ಲಿ ನಡೆಯಿತು. ಅಲ್ಲಿ ಶಿಕ್ಷಣ ಇಲಾಖೆಯ ಪರವಾಗಿ ಡಾ| ಸುಂದರ್ ಕೇನಾಜೆ, ಪದ್ಮನಾಭ ಅತ್ಯಾಡಿ, ಪೃಥ್ವಿಕುಮಾರ್, ಆರ್.ಟಿ.ಇ. ಯೋಜನೆಯ ಕುರಿತು ಮತ್ತು ಸರಕಾರದಿಂದ ಬಂದಿರುವ ಸುತ್ತೋಲೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ತಾಲೂಕಿನ 12 ಶಾಲೆಗಳಿಗೆ 143 ವಿದ್ಯಾರ್ಥಿಗಳು ದಾಖಲಾಗಬೇಕು. ಈ 143 ಸೀಟುಗಳಿಗೆ 213 ಅರ್ಜಿಗಳು ಬಂದಿದ್ದು, 112 ಮಂದಿಗೆ ಆಯ್ಕೆಯಾಗಿರುವ ಮೆಸೇಜುಗಳು ಬಂದಿತ್ತು. ಆದರೆ ಅವರಲ್ಲಿ 3೦ ಮಂದಿ ಮಾತ್ರ ಅರ್ಹರಾಗಿದ್ದರು. ಮೇ.2೦ರಂದು ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ಆರ್.ಟಿ.ಇ. ಕುರಿತು ಸಭೆ ನಡೆಯಿತು. ಅಲ್ಲಿ ನಿಯಮ ತಿದ್ದುಪಡಿಯಾಗಿ ಮೊದಲ ಹಂತದ ಲಾಟರಿ ಪ್ರಕ್ರಿಯೆಯಲ್ಲಿ ಸೀಟು ಹಂಚಿಕೆಯಾಗಿದ್ದು, ನೆರೆ-ಹೊರೆ, ಹೊರಗಿನ ಕಾರಣ ಅಥವಾ ದಾಖಲೆಗಳು ತಾಳೆಯಾಗದ ಕಾರಣ ಅವರು ವಾಸವಾಗಿರುವ ವಾರ್ಡ್ ವ್ಯಾಪ್ತಿಯೊಳಗಿನ ಅನುದಾನ ರಹಿತ ಶಾಲೆಗಳಿಗೆ ಈಗಾಗಲೇ ಸಲ್ಲಿಸಿರುವ ಅರ್ಜಿಯನ್ನು ಶಾಲೆಗಳ ಆದ್ಯತೆಯನ್ನು ಮತ್ತೊಮ್ಮೆ ಮಾರ್ಪಡಿಸಲು ಅವಕಾಶ ಮಾಡಿಕೊಡಲಾಗಿದೆ. ಹಾಗೂ ವಾರ್ಡ್ ವ್ಯಾಪ್ತಿಯ ಹೊರಗಿನ ಶಾಲೆಗಳಿಗೆ ಆರ್.ಟಿ.ಇ. ಅಡಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ಮೊದಲ ಹಂತದಲ್ಲಿ ಸೀಟು ಹಂಚಿಕೆಯಾಗದೆ ಎರಡನೇ ಹಂತದ ಲಾಟರಿ ಪ್ರಕ್ರಿಯೆಗೆ ಅರ್ಹತಾ ಪಟ್ಟಿಯಲ್ಲಿ ಅರ್ಜಿಯನ್ನು ಪರಿಗಣಿಸಲಾಗಿದ್ದರೂ ಸಹ ಅಂತಹ ಪೋಷಕರು ಹಾಲಿ ವಾಸವಿರುವ ಹಾಗೂ ಅಧಿಕೃತ ವಾಸಸ್ಥಳ ದೃಢೀಕರಣ ಪತ್ರ ಹೊಂದಿರುವ ವಾರ್ಡ್ ವ್ಯಾಪ್ತಿಯೊಳಗಿನ ಅನುದಾನ ರಹಿತ ಶಾಲೆಗಳಿಗೆ ಪ್ರವೇಶ ಕೋರಿ ಆದ್ಯತೆಯನ್ನು ಮತ್ತೊಮ್ಮೆ ಮಾರ್ಪಡಿಸಲು ಅವಕಾಶ ಮಾಡಿಕೊಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.