ವಿವಿಧ ಕಾರಣಗಳಿಂದ ಶಾಲೆ ಮುಂದುವರಿಸಲಾಗದ (ಹೈಸ್ಕೂಲಿನಲ್ಲಿ ಅನುತ್ತೀರ್ಣಗೊಂಡ) ವಿದ್ಯಾರ್ಥಿಗಳು ಅಲ್ಪಾವಧಿಯಲ್ಲಿ ವೃತ್ತಿ ತರಬೇತಿ (ಇಲೆಕ್ಟ್ರೀಶಿಯನ್, ಮೋಟಾರ್ ವೈಂಡಿಂಗ್, ಟೈಲರಿಂಗ್, ವೆಲ್ಡಿಂಗ್ ಹಾಗೂ ಯಾವುದೇ ಆಸಕ್ತಿ ಇರುವ ವೃತ್ತಿ) ಪಡೆದು ಸಂಪಾದಿಸುವಂತಾಗಲು ಪಕ್ಷಿಕೆರೆಯ ರುಸೆಂಪ್ ಸಂಸ್ಥೆಯು ಒಂದು ವರ್ಷದ ಅವಧಿಯ ತರಬೇತಿಯನ್ನು ನೀಡುತ್ತದೆ. ತರಬೇತಿ ಬಳಿಕ ಸ್ವ-ಉದ್ಯೋಗ ಕೈಗೊಳ್ಳಲು ಅಥವಾ ಉದ್ಯೋಗ ಪಡೆಯಲು ಸಹಕಾರ ನೀಡಲಾಗುವುದು.
ಅರ್ಜಿ ಸಲ್ಲಿಸಲು ಜೂ.15 ಕೊನೆಯ ದಿನವಾಗಿದೆ. ಅಸಕ್ತ ಅಭ್ಯರ್ಥಿಗಳು ರುಸೆಂಪ್ ಕಮ್ಯೂನಿಟಿ ಕಾಲೇಜು, ಪಕ್ಷಿಕೆರೆ, ಕೆಮ್ರಾಲ್ ಪೋಸ್ಟ್, ವಯಾ ಹಳೆಯಂಗಡಿ, ಮಂಗಳೂರು ದ.ಕ.-574 146. ಫೋನ್: 0824-2283203, ಜೋಸೆಫ್: 9845043142, ರೋಹಿತಾಕ್ಷ: 9945936063 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.