ಮಂಗಳೂರು ವಿಶ್ವವಿದ್ಯಾಲಯವು ನಡೆಸಿದ ಪರೀಕ್ಷೆಯಲ್ಲಿ ಮೂಡಬಿದಿರೆಯ ಅಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಮಂಜುಶ್ರೀಯವರು ಬಿ.ಎ.ಹೆಚ್.ಆರ್.ಡಿಯಲ್ಲಿ ತೃತೀಯ ರ್ಯಾಂಕ್ ನ್ನು ಗಳಿಸಿದ್ದಾರೆ. ಇವರು ಪೈಚಾರಿನ ಪುರುಷೋತ್ತಮ ಗೌಡ ಮತ್ತು ವೇದಾವತಿ ದಂಪತಿಗಳ ಪುತ್ರಿ. ಪ್ರಸ್ತುತ ಇವರು ಕೆ.ವಿ.ಜಿ.ಮೆಡಿಕಲ್ ಕಾಲೇಜಿನಲ್ಲಿ ಆಫೀಸ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.