ಹಿರಿಯರ ಕ್ರೀಡಾಕೂಟದಲ್ಲಿ ಜಯಚಂದ್ರ ಪೆರುವಾಜೆ ರಾಷ್ಟ್ರ ಮಟ್ಟಕ್ಕೆ

jayachandra rastramattakke

ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಡಿಸೆಂಬರ್ ೧೨ ಮತ್ತು ೧೩ ರಂದು ನಡೆದ ಹಿರಿಯರ ಕ್ರೀಡಾ ಕೂಟದಲ್ಲಿ ಪುರುಷರ ೩೫ ವರ್ಷದ ವಿಭಾಗದಲ್ಲಿ ಮಂಗಳೂರಿನ ಶ್ರೀನಿವಾಸ ಸಮೂಹ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಜಯಚಂದ್ರ 200 ಮೀ. ಓಟ ಪ್ರಥಮ, 100 ಮೀಟರ್  ಓಟ ದ್ವೀತಿಯ ಹಾಗೂ ಗುಂಡು ಎಸೆತದಲ್ಲಿ ದ್ವೀತಿಯ ಸ್ಥಾನವನ್ನು  ಪಡೆದಿದ್ದಾರೆ. ಮಾರ್ಚ್ ತಿಂಗಳಲ್ಲಿ ಲಕ್ನೋದಲ್ಲಿ ನಡೆಯಲಿರುವ ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ  ಇವರು ಆಯ್ಕೆಯಾಗಿದ್ದಾರೆ. ಇವರು ಪೆರುವಾಜೆ ಗೋಪಾಲ ಆಚಾರಿ ಮತ್ತು ಸುಂದರಿ ದಂಪತಿಗಳ ಪುತ್ರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.