ಜಾಲ್ಸೂರಿನ ಚಿನ್ನಪ್ಪ ನಿರ್ದೇಶನದ”ಹಲಗಲಿ” ನಾಟಕ ರಾಷ್ಟ್ರಮಟ್ಟಕ್ಕೆ

shambooru shala makkalida nataka (1) shambooru shala makkalida nataka (2) copy shambooru shala makkalida nataka (3) copy shambooru shala makkalida nataka (4) copy

ಜಾಲ್ಸೂರಿನ ಚಿನ್ನಪ್ಪ ರವ ನಿರ್ದೇಶನದಲ್ಲಿ  ಮೂಡಿಬಂದ ಹಲಗಲಿ ಬೇಡರು ಎಂಬ ನಾಟಕವು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನವದೆಹಲಿ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಸಮಿತಿ ಕರ್ನಾಟಕ  ಇದರ ವತಿಯಿಂದ ನ.5 ಮತ್ತು 6 ರಂದು ಬೆಂಗಳೂರಿನ ಮಲ್ಲತ್ ಹಳ್ಳಿಯ ಕಲಾಗ್ರಾಮದಲ್ಲಿ ನಡೆದ ರಾಜ್ಯ ಮಟ್ಟದ ಕಲಾ ಉತ್ಸವದ ನಾಟಕ ಸ್ಪರ್ಧೆಯಲ್ಲಿ  ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ ಶಂಭೂರು ಇಲ್ಲಿಯ ಮಕ್ಕಳು ಪ್ರದರ್ಶಿಸಿದ  “ಹಲಗಲಿ ಬೇಡರು” ರಾಷ್ಟ್ರ ಮಟ್ಟದ ಸ್ಪರ್ಧೆಗೆ  ಅರ್ಹತೆಯನ್ನು ಪಡೆದಿದೆ. ಚಿನ್ನಪ್ಪರವರು ಹತ್ತನೆ ತರಗತಿಯ ಕನ್ನಡ ಪಠ್ಯದ ಲಾವಣಿ ಹಾಡನ್ನು ನಾಟಕಕ್ಕೆ ರೂಪಾಂತರಿಸಿ ವಿಭಿನ್ನ ಶೈಲಿಯಲ್ಲಿ ವಿನ್ಯಾಸ ಗೊಳಿಸಿ ನಿರ್ದೇಶನ ಮಾಡಿದ್ದಾರೆ.
ಮಕ್ಕಳ ರಂಗಭೂಮಿಗೆ ಸಂಬಂಧಿಸಿ ಹಲವು ನಾಟಕಗಳನ್ನು ರಚಿಸಿ ನಿರ್ದೇಶಿಸಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡ ಚಿನ್ನಪ್ಪರವರು ಮೂಲತಹಃ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕದಿಕಡ್ಕ ಗ್ರಾಮದವರು. ಪ್ರಸ್ತುತ ಸರಕಾರಿ ಪ್ರೌಢ ಶಾಲೆ ಬಂಟ್ವಾಳದ ಶಂಭೂರಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.