ನ.19-2೦ರಂದು ಮಂಗಳೂರಿನಲ್ಲಿ ಉದ್ಯೋಗಮೇಳ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಂಗಳೂರಿನ ಬೆಂಜನಪದವಿನಲ್ಲಿರುವ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನ.19 ಮತ್ತು 2೦ರಂದು ಮಂಗಳೂರು ಉದ್ಯೋಗಮೇಳ-2015 ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸುಳ್ಯ ತಹಶೀಲ್ದಾರ್ ಅನಂತಶಂಕರ್ ಹಾಗೂ ಇಒ ಮಲ್ಲೇಶಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಉದ್ಯೋಗಮೇಳದಲ್ಲಿ ಪದವಿ ಮೇಲ್ಪಟ್ಟು ಹಾಗೂ ಅನಕ್ಷರಸ್ಥರು, ಉದ್ಯೋಗ ಇಲ್ಲದವರು ಎಲ್ಲರೂ ಭಾಗವಹಿಸಬಹುದು. ಇದಕ್ಕಾಗಿ ನ.7, 8ರಂದು ಸುಳ್ಯದ ಸೈಂಟ್ ಬ್ರಜಿಡ್ಸ್ ಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ನ.19 ಮತ್ತು 2೦ರಂದು ಮಂಗಳೂರಿನಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ಅದರ ಪೂರ್ವಭಾವಿ ಸಭೆಗೆ ಬಂದು ಮಾಹಿತಿ ಪಡೆಯಬಹುದು. ವಿದೇಶದ 33 ಕಂಪೆನಿಗಳು, ರಾಜ್ಯದ 95 ವಿವಿಧ ಕಂಪೆನಿಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದು, 11,೦೦೦ಕ್ಕೂ ಮೇಲ್ಪಟ್ಟು ಉದ್ಯೋಗ ಇರುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ರಪ್ರಭಾ ಚಿಲ್ತಡ್ಕ ಮಾತನಾಡಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ರಮಾನಾಥ ರೈಯವರ ಕನಸು ಇದು. ಅದಕ್ಕಾಗಿ ಮಂಗಳೂರಿನಲ್ಲಿ ಅವರು ಉದ್ಯೋಗಮೇಳವನ್ನು ಆಯೋಜಿಸಿದ್ದಾರೆ ಎಂದು ಹೇಳಿದರು. ಸೋಮಶೇಖರ ಕೊಂಗಾಜೆ, ಸತ್ಯಕುಮಾರ್ ಆಡಿಂಜ, ತಿರುಮಲೇಶ್ವರಿ ಜಾಲ್ಸೂರು, ಜಯಲತಾ ಅರಂಬೂರು ಪತ್ರಿಕಾಗೋಷ್ಠಿಯಲ್ಲಿದ್ದರು.

nov 19-20 mangalorenalli udyogamela (1) nov 19-20 mangalorenalli udyogamela (2)

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.