ಪೈಪ್ ಕಾಂಪೋಸ್ಟ್ ಅಳವಡಿಸುವ ಕಾರ್ಯ ವಿಧಾನ

  1.  ಕನಿಷ್ಠ 6 ಇಂಚು (ಅರ್ಧ ಅಡಿ) ಗರಿಷ್ಠ 12 ಇಂಚು (ಒಂದು ಅಡಿ) ವ್ಯಾಸ ಮತ್ತುಕನಿಷ್ಠ 5 ಅಡಿ ಗರಿಷ್ಠ 6 ಅಡಿ ಎತ್ತರದ ಸಿಮೆಂಟಿನ ಅಥವಾ ಹೆಂಚಿನ ಪೈಪನ್ನು 1, 1.5 ಅಡಿ ಆಳದಲ್ಲಿ ಹೂತು ಹಾಕಿ ನೆಟ್ಟಗೆ ನಿಲ್ಲಿಸುವುದು. ಸೂಚನೆ : ಪಿ.ವಿ.ಸಿ. ಪೈಪನ್ನು ಬಳಸಬಾರದು.
  2.  ಬಾವಿ, ಬೋರ್‌ವೆಲ್ ಇತ್ಯಾದಿ ನೀರಿನ ಮೂಲದಿಂದ ದೂರ ಅಥವಾ ವಿರುದ್ಧ ದಿಕ್ಕಿನಲ್ಲಿ, ಹಿತ್ತಲಿನ ಬದಿಯಲ್ಲಿ ಮನೆಯವರಿಗೆ ದಿನ ನಿತ್ಯ ಕಸ ಹಾಕಲು ಅನುಕೂಲವಾಗುವ ಸ್ಥಳದಲ್ಲಿ ಅಳವಡಿಸಬೇಕು.
  3. ಒಂದು ಕೆ.ಜಿ. ಬೆಲ್ಲವನ್ನು ಸ್ವಲ್ಪ ನೀರಿನಲ್ಲಿ ಕರಗಿಸಿ, ಒಂದು ಕೆ.ಜಿ.ಯಷ್ಟು ಸೆಗಣಿಯೊಂದಿಗೆ ಬೆರೆಸಿ, ಪೈಪಿನಒಳಗೆ ಹಾಕಬೇಕು.
  4. ಭೂಮಿಯಲ್ಲಿ ಕರಗುವ ಯಾವುದೇ ರೀತಿಯ ಕಸವನ್ನು ಅದರೊಳಗೆ ಸಣ್ಣ ಗಾತ್ರಕ್ಕೆ ಕತ್ತರಿಸಿ ಹಾಕಬೇಕು. ಉದಾ: ಅಡುಗೆ ಮನೆ ತ್ಯಾಜ್ಯ, ಮೀನು ಮೊಟ್ಟೆ, ಮಾಂಸದ ತ್ಯಾಜ್ಯ, ತರಕಾರಿ,ಹಣ್ಣು ಹಂಪಲು ತ್ಯಾಜ್ಯ, ತರಗೆಲೆ, ಕಾಗದದ ಚೂರು, ಇತ್ಯಾದಿ.
  5. ಯಾವುದೇ ಪ್ರಾಣಿಗಳು ಒಳಹೋಗದಂತೆ ಮತ್ತು ಮಳೆ ನೀರು ಬೀಳದಂತೆ ಸ್ವಲ್ಪ ಪ್ರಮಾಣದಲ್ಲಿ ಗಾಳಿಯಾಡುವಂತೆ ಮುಚ್ಚಿಡಬೇಕು.
  6. ವಾರಕ್ಕೊಮ್ಮೆ ಒಂದು ಹಿಡಿ ಮಣ್ಣು ಮತ್ತು ಅರ್ಧ ಮಗ್ಗು ನೀರು ಹಾಕುತ್ತಿರಬೇಕು. ಅಂದರೆ 4೦-45 ಡಿಗ್ರಿ ತೇವಾಂಶವಿರಬೇಕು.
  7. ಒಂದು ಮನೆಗೆ ಒಂದು ಪೈಪು 4-6 ತಿಂಗಳ ಅವಧಿವರೆಗೆ ಬಳಸಬಹುದು. ಪೈಪ್‌ನಲ್ಲಿ ಕಸ ತುಂಬಿದ ನಂತರ ಎರಡನೇ ಪೈಪನ್ನು ಅಳಡಿಸಿ,ಇದೇ ರೀತಿ ಉಪಯೋಗಿಸಬೇಕು. ಒಂದನೇ ಪೈಪ್ ನಲ್ಲಿದ್ದ ಕಸ ಒಂದು ತಿಂಗಳೊಳಗೆ ಹುಡಿ ಹುಡಿಯಾದ ಗೊಬ್ಬರವಾಗಿರುತ್ತದೆ.
  8.  ಪೈಪನ್ನು ನಿಧಾನವಾಗಿ ಕಿತ್ತು ತೆಗೆದು,ಅದರ ಗೊಬ್ಬರ ಒಂದು ಬುಟ್ಟಿಯೊಳಗೆ ಬೀಳುವಾಗೆ ಮಾಡಿ, ಮನೆಯಲ್ಲೇ ಸಾವಯವ ಗೊಬ್ಬರದಿಂದ ತರಕಾರಿ ಬೆಳೆಸಿ, ಆರೋಗ್ಯ ಕಾಪಾಡಿರಿ.
  9.  ಸೆಂಟ್ಸ್ ಕಾಲೋನಿಗಳಲ್ಲಿ, ಘನ ತ್ಯಾಜ್ಯ ಘಟಕ ನಿರ್ಮಾಣ ಆಗದಿರುವ ಗ್ರಾಮ ಪಂಚಾಯತುಗಳ ವ್ಯಾಪ್ತಿಯಲ್ಲಿರುವ ಹಸಿಕಸ ಉತ್ಪತ್ತಿಯಾಗುವ ಅಂಗಡಿಗಳಲ್ಲಿ ಪೈಪ್ ಕಾಂಪೋಸ್ಟ್ ಅತೀ ಸರಳ ಮತ್ತು ಕಡಿಮೆ ವಚ್ಚದ ತಂತ್ರಜ್ಞಾನವಾಗಿರುತ್ತದೆ.

ಉಳಿದ ಕಡೆಗಳಲ್ಲಿ ತಿಪ್ಪೆಗುಂಡಿ, ಬಯೋಬಿನ್, ಎರೆಹುಳು ಗೊಬ್ಬರ ಅಥವಾ ಪೈಪ್ ಕಾಂಪೋಸ್ಟ್ ಪದ್ಧತಿ ಅಳವಡಿಸಿ, ಹಸಿಕಸವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲು, ಮತ್ತು ಪ್ಲಾಸ್ಟಿಕ್ ಕಸಗಳನ್ನು ಶುಚಿಗೊಳಿಸಿ, ಒಣಗಿಸಿ, ಕ್ರಮವಾಗಿ ಜೋಡಿಸಿ ಸಂಗ್ರಹಿಸಿ ಇಡಲು ಮಾಹಿತಿಯನ್ನು ನಿರಂತರವಾಗಿ ನೀಡುವ ಮೂಲಕ ಜನಜಾಗೃತಿ ಮೂಡಿಸಬೇಕು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.