ಅಥ್ಲೆಟಿಕ್: ತಾಲೂಕಿನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ

kalleriಬೆಳ್ತಂಗಡಿ : ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ ಮೀಟ್ 400 x 100 ಮೀಟರ್ ರಿಲೇ ಸ್ಪರ್ಧೆಯಲ್ಲಿ ದ.ಕ. ಜಿಲ್ಲಾ ತಂಡವನ್ನು ಪ್ರತಿನಿಧಿಸಿ ಉತ್ಕೃಷ್ಟ ಪ್ರದರ್ಶನ ತೋರಿದ್ದ ತಾಲೂಕಿನ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಲ್ಲೇರಿ ಸರಕಾರಿ ಶಾಲಾ 7ನೇ ತರಗತಿ ವಿದ್ಯಾರ್ಥಿ, ಕ್ರೀಡಾ ಕ್ಷೇತ್ರದ ಸವ್ಯಸಾಚಿ ಆಟಗಾರ ಯತಿನ್ ನಾಯ್ಕ್ ಮತ್ತು ಗುಡ್‌ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಪಿಲ್ಯ ಇಲ್ಲಿನ 8ನೇ ತರಗತಿ ವಿದ್ಯಾರ್ಥಿ ಇರ್ಫಾನ್ ಅವರೇ ಈ ಸಾಧನೆ ಮೆರೆದಿರುವ ವಿದ್ಯಾರ್ಥಿ ಕ್ರೀಡಾ ಸಾಧಕರು.
ತಾಲೂಕು ಮಟ್ಟ, ವಲಯಮಟ್ಟ, ಜಿಲ್ಲಾ ಮಟ್ಟ, ಹೀಗೆ ಹಂತಹಂತವಾಗಿ ಜಯಗಳಿಸುತ್ತಾ ಮೇಲೇರಿ ಬಂದಿರುವ ಈ ಇಬ್ಬರೂ ವಿದ್ಯಾರ್ಥಿಗಳು ಇದೀಗ ಡಿ.5 ರಂದು ಬೆಂಗಳೂರಿನ ಹೊಸಕೋಟೆಯಲ್ಲಿ ನಡೆದ ಅಥ್ಲೇಟಿಕ್ ಮೀಟ್‌ನಲ್ಲಿ ಅತೀ ವೇಗದ ಓಟ ಪ್ರದರ್ಶಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಕಲ್ಲೇರಿ ನಿವಾಸಿ ರೇವತಿ ಮುಂಡಾಜೆ ಮತ್ತು ಧರ್ಮಣ ನಾಕ್ ದಂಪತಿ ಪುತ್ರರಾಗಿರುವ ಯತಿನ್ ಕುಮಾರ್ ಅವರು ಈಗಾಗಲೇ ಪ್ರಾಥಮಿಕ ವಿಭಾಗದ ಕ್ರೀಡಾಕೂಟದಲ್ಲಿ 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ತಾಲೂಕು ಮಟ್ಟದ ಆಟೋಟ ಸ್ಪರ್ಧೆಯಲ್ಲಿ 100ಮೀ., 200ಮೀ. ಹಾಗೂ 4×100ಮೀ. ರಿಲೆ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟದ ವೈಯುಕ್ತಿಕ ಚಾಂಪ್ಯನ್ ಎನಿಸಿಕೊಂಡಿದ್ದಾರೆ. ಬಳಿಕ ಮೂಡಬಿದ್ರೆ ಸ್ವರಾಜ್ ಮೈದಾನದ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲೂ ಜಯಶಾಲಿಯಾಗಿ ಭವಿಷ್ಯದ ಕ್ರೀಡಾ ಪಟುವಾಗಿ ಮೂಡಿಬಂದಿದ್ದಾರೆ. ಶಾಲಾ ಶಿಕ್ಷಕ ಚೇತನ್ ಕುಮಾರ್ ಅವರು ಯತಿನ್ ಅವರಿಗೆ ಕ್ರೀಡಾ ತರಬೇತಿ ನೀಡುತ್ತಿದ್ದಾರೆ. ಇನ್ನೋರ್ವ ಸಾಧಕ ವಿದ್ಯಾರ್ಥಿ ಇರ್ಫಾನ್ ಅವರು ಬಡಗಕಾರಂದೂರು ಗ್ರಾಮದ ಜನತಾ ಕಾಲನಿ ನಿವಾಸಿ, ದಿನಸಿ ಅಂಗಡಿ ವ್ಯಾಪಾರಿ ಅಶ್ರಫ್ ಮತ್ತು ಮೈಮುನಾ ದಂಪತಿ ಪುತ್ರರಾಗಿದ್ದಾರೆ. ಬಡತನದ ಹಿನ್ನಲೆ ಇದ್ದರೂ ಇರ್ಫಾನ್ ಅವರು ಎಳೆವೆಯಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಲ್ಪಡಬಹುದಾದ ಕ್ರೀಡಾ ಅರ್ಹತೆ ಪಡೆದಿದ್ದರು. ಇದನ್ನು ಗುರುತಿಸಿದ ಶಿಕ್ಷಕವೃಂದ ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಶಿಕ್ಷಕರಾದ ಹರ್ಷ ಅವರು ಪೂರಕ ಕ್ರೀಡಾ ತರಬೇತಿ ನೀಡುತ್ತಿದ್ದಾರೆ. ಈ ಇಬ್ಬರೂ ಅಪ್ಪಟ ಗ್ರಾಮೀಣ ಕ್ರೀಡಾ ವಿದ್ಯಾರ್ಥಿಗಳಿಗೆ ಮೂಲಸೌಕರ್ಯದೊಂದಿಗೆ ಸೂಕ್ತ ಪ್ರಾಯೋಜಕರು ಮತ್ತು ತರಬೇತುಗಳು ದೊರೆತಲ್ಲಿ ಉನ್ನತ ಸಾಧನೆ ಮೆರೆಯುವ ಎಲ್ಲಾ ಲಕ್ಷಣಗಳು ಇವೆ. ಇದೀಗ ಇವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಈ ಕ್ರೀಡಾ ಕೂಟವು ಮಹಾರಾಷ್ಟ್ರ ಔರಂಗಾಬಾದ್ ಪಟ್ಟಣದಲ್ಲಿ ನಡೆಯಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.