ಗುರುವಾಯನಕೆರೆ : ಕೆನರಾ ಬ್ಯಾಂಕ್ ಸ್ಥಳಾಂತರಗೊಂಡು ಕೃಷ್ಣ ಪ್ಲಾಜಾದಲ್ಲಿ ಶುಭಾರಂಭ

guruvayankere canara bank udhgataneಗುರುವಾಯನಕೆರೆ : ಕಳೆದ 8 ತಿಂಗಳ ಹಿಂದೆ ಕೃಷ್ಣ ಕ್ಲಾಸಿಕ್ ಕಾಂಪ್ಲೇಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆನರಾ ಬ್ಯಾಂಕ್ ಇದೀಗ ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆಯಲ್ಲಿರುವ ಕೃಷ್ಣಪ್ಲಾಜಾ ಕಾಂಪ್ಲೇಕ್ಸ್‌ಗೆ ಸ್ಥಳಾಂತರಗೊಂಡು ನ.29 ರಂದು ಶುಭಾರಂಭಗೊಂಡಿತು.
ಸ್ಥಳಾಂತರಗೊಂಡ ಬ್ಯಾಂಕ್‌ನ್ನು ಮಾಜಿ ಸಚಿವರೂ, ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರೂ ಆದ ಕೆ. ಗಂಗಾಧರ ಗೌಡ ಉದ್ಘಾಟಿಸಿ ಕೆನರಾ ಬ್ಯಾಂಕ್ ದೇಶದಲ್ಲಿಯೇ ಅತ್ಯಂತ ಪ್ರಾಮಾಣಿಕ ಸೇವೆ ಮಾಡುವ ಬ್ಯಾಂಕ್ ಆಗಿದ್ದು ರಾಷ್ಟ್ರೀಕೃತ ಆದ ನಂತರ ಗ್ರಾಹಕರಿಗೆ ಹತ್ತು ಹಲವು ರೀತಿಯಲ್ಲಿ ಸೌಲಭ್ಯ ನೀಡಿದೆ. ಗುರುವಾಯನಕೆರೆ ಶಾಖೆಯು ಜನರಿಗೆ ಪ್ರಾಮಾಣಿಕ ಸಾಲ ಸೌಲಭ್ಯ ನೀಡುವುದರೊಂದಿಗೆ ಜನರ ಬೆಳವಣಿಗೆಗೆ ಕಾರಣವಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ಪ್ರಭಾಕರ ಬಂಗೇರ ಮಾತನಾಡಿ ನಮ್ಮ ಗುರುವಾಯನಕೆರೆ ಪರಿಸರದಲ್ಲಿ ಹಲವು ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದು ಕೆನರಾ ಬ್ಯಾಂಕ್‌ನಿಂದ ಜನ ಸಾಮಾನ್ಯರಿಗೆ ಕೂಡ ಸಾಲ ಸೌಲಭ್ಯ ನೀಡುವುರೊಂ ದಿಗೆ ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದರು. ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ ಸಾಧನಾ ಮಾತನಾಡಿ ದೇಶದಲ್ಲಿಯೇ ಬ್ಯಾಂಕಿಂಗ್ ಕ್ಷೇತ್ರಕ್ಕೆ ನಮ್ಮ ಜಿಲ್ಲೆಯ ಕೊಡುಗೆ ಅಪಾರವಾದದ್ದು, ನಮ್ಮವರು ವ್ಯವಹಾರ ಚತುರರು, ಕೆನರಾ ಬ್ಯಾಂಕ್ ರಾಷ್ಟ್ರದಲ್ಲಿಯೇ ಉತ್ತಮ ಸೇವೆ ನೀಡುವ ಸಂಸ್ಥೆಯಾಗಿ ಬೆಳೆದು ಬರಲಿ ಎಂದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ಮಹಾ ಪ್ರಬಂಧಕ ವಸಂತ ಶೆಟ್ಟಿ, ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ರಂಜನ್ ಜಿ.ಗೌಡ, ಜಿ.ಪಂ ಸದಸ್ಯೆ ಮಮತಾ ಶೆಟ್ಟಿ, ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಬಿಲ್ಡಿಂಗ್ ಮಾಲಕರಾದ ಗಾಯತ್ರಿ ಕಿಣಿ ಮತ್ತು ವಿಶ್ವೇಶ್ ಕಿಣಿ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕೆನರಾ ಬ್ಯಾಂಕಿನ ಬೆಳ್ತಂಗಡಿ ಮ್ಯಾನೇಜರ್ ಕೃಷ್ಣ ನಾಯ್ಕ, ಉಜಿರೆ ಮ್ಯಾನೇಜರ್ ಬಾಲಕೃಷ್ಣ ನಾಯ್ಕ ಉಪಸ್ಥಿತರಿದ್ದರು. ಕೆನರಾ ಬ್ಯಾಂಕಿನ ರಮೇಶ್ ಕಾರ್ಯಕ್ರಮ ನಿರೂಪಿಸಿ, ಗುರುವಾಯನಕೆರೆ ಶಾಖೆಯ ಮ್ಯಾನೇಜರ್ ಎಬಿನ್ ಜೋಸ್ ಅಗಸ್ಟಿನ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.