ಗೇರುಕಟ್ಟೆ-ನಾಳ-ಹೈಮಾಸ್ಕ್ ವಿದ್ಯುತ್ ದೀಪ ಹಾಗೂ ನಾಳ ಬಿಳಿಬೈಲು ರಸ್ತೆ ಡಾಮರೀಕರಣ

Advt_NewsUnder_1
Advt_NewsUnder_1
Advt_NewsUnder_1

gerukatteಕಳಿಯ:  ಗೇರುಕಟ್ಟೆ ಪೇಟೆ ಬಳಿ ಹೈಮಾಸ್ಕ್ ವಿದ್ಯುತ್ ದೀಪಗಳನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಮತ ಎಂ. ಶೆಟ್ಟಿಯವರು ಉದ್ಘಾಟಿಸಿದರು.  ವಿಶೇಷ ರಸ್ತೆ ಅನುದಾನ ಸುರಕ್ಷದಲ್ಲಿ ಸುಮಾರು(2.50) ಎರಡುವರೆ ಲಕ್ಷ ಅನುದಾನವನ್ನು ಕಳಿಯ ಪಂಚಾಯತ್ ವ್ಯಾಪ್ತಿಗೆ ನೀಡುವುದರ ಮೂಲಕ  ಬಹಳ ವರ್ಷಗಳ ಬೇಡಿಕೆಯನ್ನು ಈಡೇರಿಸಿರುತ್ತಾರೆ. ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ನಾಳ-ಬಿಳಿಬೈಲು ರಸ್ತೆಗೆ ಡಾಮಾರೀಕರಣಕ್ಕೆ 5 ಲಕ್ಷ ಅನುದಾನವನ್ನು ನೀಡಿದರು. ನಾಳ ಬಿಳಿಬೈಲು ರಸ್ತೆಗೆ ಡಾಮರೀಕರಣಕ್ಕೆ ಕಳಿಯ ಗುದ್ಧಲಿ ಪೂಜೆಯನ್ನು ಕಳಿಯ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿಯವರು ನೆರವೇರಿಸಿದರು. ಕಳಿಯ ಪಂಚಾಯತ್ ವತಿಯಿಂದ 50 ಸಾವಿರ ರೂಪಾಯಿ ಮೊತ್ತದ ಮೋರಿಯನ್ನು ನಾಳ ಬಿಳಿಬೈಲು ರಸ್ತೆ ನೀಡುವುದಾಗಿ ತಿಳಿಸಿದರು. ಕಳಿಯ ಪಂಚಾಯತ್‌ಗೆ ಶ್ರೀಮತಿ. ಮಮತ ಎಂ. ಶೆಟ್ಟಿಯವರು ಅನುದಾನ ನೀಡಿರುವುದಕ್ಕೆ ಪಂಚಾಯತ್ ಅಧ್ಯಕ್ಷರು ಅಭಿನಂದನೆ ಸಲ್ಲಿಸುವುದರೊಂದಿಗೆ ಜಾರಿಗೆ ಬೈಲು ಹತ್ತಿರ ಹೈಮಾಸ್ಕ್ ದೀಪದ ಅಗತ್ಯವಿದೆ ತಾವುಗಳು ಒದಗಿಸಿಕೊಡಬೇಕೆಂದು ವಿನಂತಿಸಿದರು. ನಾಳ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವಸಂತ ಮಜಲುರವರು ಮಾತನಾಡುತ್ತಾ ದೇವಸ್ಥಾನ ಹತ್ತಿರ ಹೈಮಾಸ್ಕ್ ದೀಪದ ಅವಶ್ಯಕತೆಯನ್ನು ಮನಗೊಂಡು ಸಹಕರಿಸಿದ ಜಿ.ಪಂ. ಸದಸ್ಯೆ ಶ್ರೀಮತಿ ಮಮತ ಶೆಟ್ಟಿಯವರಿಗೆ  ನಾಳ ದೇವಸ್ಥಾನ ಸಮಿತಿಯ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಳಿಯ ಪಂಚಾಯತ್ ಸದಸ್ಯರಾದ ತುಕರಾಮ ಪೂಜಾರಿ, ದಿವಾಕರ ಎಂ., ಸುಧಾಕರ ಮಜಲು, ಪ್ರದೀಪ್ ಕುಮಾರ್ ಪೆರಾಜೆ, ಕೆ.ಎಂ.ಅಬ್ದುಲ್ ಕರೀಂ, ವಿಶ್ವನಾಥ ಪೂಜಾರಿ ಮುರತ್ತಮೇಲು, ಶ್ರೀಮತಿ ವಿಜಯ ಹೆಚ್. ಪ್ರಸಾದ್,. ಶ್ರೀಮತಿ ಪುಷ್ಪ, ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ್ಯ ವಿಜಯಕುಮಾರ್ ಕಲಾಯಿತೊಟ್ಟು, ಕಳಿಯ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶೇಖರ ನಾಯ್ಕ್, ರತ್ನಾಕರ ಪೂಜಾರಿ ಬಳ್ಳಿದಡ್ಡ, ನಾಳ ದೇವಸ್ಥಾನದ ಮ್ಯಾನೇಜರ್ ಗಿರೀಶ್ ಶೆಟ್ಟಿ, ರಿಕ್ಷಾ-ಚಾಲಕರ ಮಾಲಕರ ಸಂಘದ ಅಧ್ಯಕ್ಷ ಪದ್ಮನಾಭ, ಸುದ್ದಿಪತ್ರಿಕೆ ಪ್ರತಿನಿಧಿ ಉದಯ ಕುಮಾರ್ ನಾಳ, ವಸಂತ ಶೆಟ್ಟಿ ಮಠ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಳಿಯ ಪಂಚಾಯತ್ ಕಾರ್ಯದರ್ಶಿ ಕುಂಞ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಪೆಂರ್ಬುಡ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.