ಧರ್ಮಸ್ಥಳ ದೇಂತಾಜೆಯಲ್ಲಿ ದರೋಡೆ ಮನೆ ಮಾಲಿಕರನ್ನು ಹಗ್ಗದಿಂದ ಕಟ್ಟಿಹಾಕಿ ನಗ, ನಗದು ಅಪಹರಣ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ದೇಂತಾಜೆ ಎಂಬಲ್ಲಿ ಅಪರಿಚತ ಮೂರು ಅಥವಾ ನಾಲ್ಕು ಮಂದಿಯ ತಂಡ ರಾತ್ರಿ ಬಂದು ಮನೆ ಮಾಲಿಕನನ್ನೇ ಕಟ್ಟಿಹಾಕಿ ನಗ ನಗದು ದರೋಡೆಗೈದ ಪ್ರಕರಣ ನ.28ರಂದು ವರದಿಯಾಗಿದೆ.
ನಾರಾಯಣ ನೂರಿತ್ತಾಯ ಅವರ ಪುತ್ರ ನಾಗೇಂದ್ರ ಪ್ರಸಾದ್ ಅವರೇ ಈ ರೀತಿ ದರೋಡೆಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾರೆ.
ನ. 28 ರಂದು ರಾತ್ರಿ 10.30ರ ವೇಳೆಗೆ ನಾಗೇಂದ್ರ ಪ್ರಸಾದ್(38ವ.) ಅವರ ಮನೆಗೆ ಬಂದು ಯಾರೋ ಕೂಗಿ ಕರೆದಾಗ ಅವರು ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಮನೆಯೊಳಗೆ ನುಗ್ಗಿದ ಅಪರಿಚತರ ತಂಡ ಅವರನ್ನು ಹಗ್ಗದಿಂದ ಕಟ್ಟಿ ಕೋಣೆಯೊಳಗೆ ಕೂಡಿಹಾಕಿ ಜೀವಬೆದರಿಯೊಡ್ಡಿದ್ದಲ್ಲದೆ ಅವರು ಮೈ ಮೇಲೆ ಧರಿಸಿದ್ದ ಸುಮಾರು 60 ಸಾವಿರ ರೂ ಮೌಲ್ಯದ ಚಿನ್ನಾಭರಣ ಮತ್ತು 40 ಸಾವಿರ ರೂ. ನಗದು ದರೋಡೆಗೈದಿದ್ದಾರೆ. ಸಾಲದೆಂಬುದಕ್ಕೆ ಅವರ ಬೇರೆ ಬೇರೆ ಬ್ಯಾಂಕ್‌ಗಳ 3 ಎಟಿಎಂ ಕಾರ್ಡ್, ಒಂದು ಮೊಬೈಲ್ ಫೋನ್ ಅನ್ನೂ ದರೋಡೆಗೈದಿದ್ದಾರೆ.
ಬಳಿಕ ಅವರನ್ನು ಕೋಣೆಯೊಳಗಡೆ ದೂಡಿಹಾಕಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ದೇಂತಾಜೆ ಪ್ರದೇಶ ಧರ್ಮಸ್ಥಳದಿಂದ ಪಟ್ರಮೆ ರಸ್ತೆಯಲ್ಲಿ ಬರುತ್ತಿದ್ದು ಇಲ್ಲಿ ನಾಗೇಂದ್ರ ಪ್ರಸಾದ್ ಅವರ ಮನೆ ಒಂಟಿಯಾಗಿದೆ. ಆದುದರಿಂದ ತಕ್ಷಣಕ್ಕೆ ಈ ಮಾಹಿತಿ ಯಾರಿಗೂ ತಿಳಿದಿಲ್ಲ. ಘಟನೆಯ ನಂತರ ಕಷ್ಟಪಟ್ಟು ಹಗ್ಗ ಬಿಚ್ಚಿಸಿಕೊಂಡ ನಾಗೇಂದ್ರ ಪ್ರಸಾದ್ ಅವರು ಮೊಬೈಲ್ ಕೂಡ ಕಳಕೊಂಡಿದ್ದರಿಂದ
ಸಂಪರ್ಕ ಸಾಧಿಸಲು ಅನಾನುಕೂಲವಾಗಿ ಬೆಳಗ್ಗಿನ ಜಾವಾ 4 ಗಂಟೆ ವೇಳೆಗೆ ಧರ್ಮಸ್ಥಳ ಠಾಣೆಗೆ ಬಂದು ದೂರು ನೀಡಿದ್ದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಾರಂಭವಾಗಿದೆ. ಸ್ಥಳಕ್ಕೆ ಬಂಟ್ವಾಳ ಎ.ಎಸ್.ಪಿ ಡಾ. ಅರುಣ್ ಕುಮಾರ್ ಐಪಿಎಸ್, ಧರ್ಮಸ್ಥಳ ಠಾಣಾಧಿಕಾರಿ ಕೊರಗಪ್ಪ ನಾಯ್ಕ ಮತ್ತು ಸಿಬಂದಿಗಳು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಸ್ಥಳಕ್ಕೆ ಬೆಳರಚ್ಚು ತಂಜ್ಞರನ್ನು ಕರೆಸಲಾಗಿದ್ದು ತನಿಖೆಗೆ ಪೂರಕ ಮಾಹಿತಿ ಸಂಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.