ಹೆಗ್ಗಡೆಯವರ ಜನ್ಮ ದಿನಾಚಾರಣೆ : ಅಭಿನಂದನೆಗಳ ಮಹಾಪೂರ

Heggade huttuhabba

heggade huttuhabba1 copyಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನಾಚರಣೆಯನ್ನು ನ. 25 ರಂದು ಸರಳವಾಗಿ ಆಚರಿಸಲಾಯಿತು.
ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಅಲೋಶೀಯಸ್ ಪಾವ್ಲ್ ಡಿಸೋಜಾ ಬೀಡಿಗೆ ಬಂದು ಹೆಗ್ಗಡೆಯವರ ಬಹುಮುಖಿ ಸಮಾಜ ಸೇವಾ ಕಾರ್ಯಗಳನ್ನು ಶ್ಲಾಘಿಸಿ ಜನ್ಮ ದಿನದ ಶುಭಾಶಯ ಸಲ್ಲಿಸಿದರು.
ಮಡಂತ್ಯಾರು ಚರ್ಚ್‌ನ ಧರ್ಮಗುರು ಬಾಸಿಲ್ ವಾಸ್, ಉಜಿರೆ ಸಂತ ಅಂತೋನಿ ಚರ್ಚ್‌ನ ಧರ್ಮಗುರು ಜೋಸೇಫ್ ಮಸ್ಕರೇನ್ಹಸ್, ಬೆಳ್ತಂಗಡಿ ಚರ್ಚ್‌ನ ಧರ್ಮಗುರು ಬೊನವೆಂಚರ್ ನಜ್ರತ್, ಉಜಿರೆ ಅನುಗ್ರಹ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯ ಫೆರ್ನಾಂಡಿಸ್, ಸಿಸ್ಟರ್ ಡೋರಾ ಮೊದಲಾದವರು ಉಪಸ್ಥಿತರಿದ್ದರು.
ದೇವಳದ ನೌಕರರು, ಭಕ್ತರು, ಅಭಿಮಾನಿಗಳು ಹೆಗ್ಗಡೆಯವರಿಗೆ ಭಕ್ತಿ ಪೂರ್ವಕ ನಮನಗಳೊಂದಿಗೆ ಶುಭಾಶಯ ಅರ್ಪಿಸಿದರು.
ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಮೂಡಬಿದ್ರೆಯ ದಿನೇಶ್ ಕುಮಾರ್ ಆನಡ್ಕ, ಪಾದೂರು ಸುದರ್ಶನ ಇಂದ್ರ ಮೊದಲಾದ ಗಣ್ಯರು ಶುಭಾಶಯ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.