ಕುದ್ಯಾಡಿ ಬರಾಯ ಶ್ರೀ ದೈವಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಶಿಲಾಮಯ ಗರಡಿಯ ಪಾದುಕಾನ್ಯಾಸ

kudyadi baraya kodamanithaya garadi shilanyasaಕುದ್ಯಾಡಿ: ಕುದ್ಯಾಡಿ ಬರಾಯ ಶ್ರೀ ದೈವಕೊಡಮಣಿ ತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಇದನ್ನು ಜೀರ್ಣೋದ್ಧಾರಗೊಳಿಸಲು ಉದ್ಧೇಶಿಸಿದ್ದು ಆ ಪ್ರಯುಕ್ತ ಶಿಲಾಮಯ ಗರಡಿಯ ಪಾದುಕಾನ್ಯಾಸ ಸಮಾರಂಭ ನ 16 ರಂದು ಕುದ್ಯಾಡಿ ಅಂಗಣದ ಮೇಲು ಎಂಬಲ್ಲಿ ನಡೆಯಿತು.
ಕಂಕನಾಡಿ ಗರಡಿ ಆಡಳಿತ ಮೊಕ್ತೇಸರರು ಮತ್ತು ಗೆಜ್ಜೆಗಿರಿ ನಂದನ ಬಿತ್ತಿಲ್ ಇದರ ಅಧ್ಯಕ್ಷರಾದ ಚಿತ್ತರಂಜನ್ ಪಾದುಕಾನ್ಯಾಸ ನೆರವೇರಿಸಿದರು.
ಸಮಾರಂಭದಲ್ಲಿ ಗೆಜ್ಜೆಗಿರಿ ನಂದನ ಬಿತ್ತಿಲ್ ಇದರ ಕಾರ್‍ಯಧ್ಯಕ್ಷರಾದ ಪಿತಾಂಬರ ಹೇರಾಜೆ, ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರಾದ ಸೋಮನಾಥ ಬಂಗೇರ, ನಿರ್ದೇಶಕರಾದ ಗಂಗಾಧರ ಮಿತ್ತಮಾರು, ನಮದನ ಬಿತ್ತಿಲ್ ಇದರ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಜಲು, ಉಪ್ಪಿನಂಗಡಿ ಗಿರಿಜಾ ಕ್ಲಿನಿಕ್ ದಂತ ವೈದ್ಯರಾದ ಡಾ| ರಾಜಾರಾಮ್, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಉಪಾಧ್ಯಕ್ಷರಾದ ಸಂಜೀವ ಪೂಜಾರಿ ಕೊಡಂಗೆ, ನಾರಾವಿ ಜಿ.ಪಂ.ಸದಸ್ಯರಾದ ಧರಣೇಂದ್ರ ಕುಮಾರ್, ಅಂಡಿಂಜೆ ತಾ.ಪಂ.ಸದಸ್ಯ ಸುಧೀರ್ ಆರ್.ಸುವರ್ಣ, ಅಳದಂಗಡಿ ಗ್ರಾ.ಪಂ.ಅಧ್ಯಕ್ಷೆ ಯಶೋಧ ಬಂಗೇರ, ಕುದ್ಯಾಡಿ ಗ್ರಾ.ಪಂ.ಸದಸ್ಯ ದಿನೇಶ್ ಬಿ, ಅಳದಂಗಡಿ ಪ್ರಾ.ಕೃ.ಪತ್ತಿನ ನಿರ್ದೇಶಕರಾದ ಚಂದ್ರಮೋಹನ್ ಜೈನ್ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕೊಡಿಬಾಳೆ ಕೊರಗಪ್ಪ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಶಿಲ್ಪಿ ಮಹೇಶ್, ಗ್ರಾ.ಪಂ.ಮಜಿ ಸದಸ್ಯ ಲೋಕಯ್ಯ ಪೂಜಾರಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅನಂತ್ರಾಜ ಪೂವಣಿ ಅಂತರಗುತ್ತು, ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ಲಿಂಗಪ್ಪ ಬಂಗೇರ ಕೆಂಪನೊಟ್ಟು, ಅಣ್ಣಿ ಪೂಜಾರಿ, ಶ್ರೀಧರ ಪೂಜಾರಿ, ಧನಂಜಯ ಜೈನ್, ವಸಂತ ಪೂಜಾರಿ, ರತ್ನಾಕರ ಪೂಜಾರಿ, ಅಚ್ಯುತ ಪೂಜಾರಿ, ಶಶಿಕಾಂತ ಜೈನ್, ವಸಂತಿ ಸಿ ಪೂಜಾರಿ, ಪ್ರಾಕಾಶ್ ಹೆಚ್, ಅಶೋಕ ಪೂಜಾರಿ, ರಾಜು ಪೂಜಾರಿ, ಸದ್ಧರ್ಮ ಯುವಕ ಮಂಡಲ ಅಧ್ಯಕ್ಷ ಲಕ್ಷ್ಮಣ ಆಚಾರ್‍ಯ, ಕಾರ್‍ಯದರ್ಶಿ ಶುಭಕರ ಬಂಗೇರ, ಶಿಶುಪಾಲ ಕುದ್ಯಾಡಿ ಭಾಗವಹಿಸಿದ್ದರು.
ಈ ಸಂದರ್ಭ ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಶ್ರೇಯಾ ಮತ್ತು ಶ್ರದ್ಧಾ ಪ್ರಾರ್ಥನೆ ಹಾಡಿದರು. ಸದಾನಂದ ಬಿ.ಕುದ್ಯಾಡಿ ಸ್ವಾಗತಿಸಿದರು. ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಕುದ್ಯಾಡಿ ಪ್ರಸ್ತಾವಿಸಿದರು. ಶಿಕ್ಷಕ ಪ್ರವೀಣ್ ಕಾರ್‍ಯಕ್ರಮ ನಿರೂಪಿಸಿದರು. ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುಂದರ ಆಚಾರ್‍ಯ ಧನ್ಯವಾದ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.