ತಾಲೂಕು ಯುವ ಜನತಾದಳ: ನೂತನ ಅಧ್ಯಕ್ಷರಾಗಿ ಸೂರಜ್ ವಳಂಬ್ರ ನೇಮಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

suraj valambraಬೆಳ್ತಂಗಡಿ : ಜನತಾದಳ (ಜಾತ್ಯತೀತ) ಇದರ ತಾಲೂಕು ಯುವ ವಿಭಾಗದ ನೂತನ ಅಧ್ಯಕ್ಷರಾಗಿ, ಪಕ್ಷದ ಅಧ್ಯಕ್ಷರಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ, ತಾ.ಪಂ ಅಧ್ಯಕ್ಷರಾಗಿ ಬೆಳ್ತಂಗಡಿಯಿಂದ ಬೆಂಗಳೂರುವರೆಗೂ ಕಾರ್ಯನಿರ್ವಹಿಸಿದ್ದ ವಳಂಬ್ರ ನಾರಾಯಣ ಗೌಡ ಅವರ ಪುತ್ರ, ಯುವ ಉದ್ಯಮಿ ಸೂರಜ್ ವಳಂಬ್ರ ಅವರನ್ನು ನೇಮಿಸಿ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ ಆದೇಶ ಹೊರಡಿಸಿದ್ದಾರೆ.
ಪಕ್ಷದ ತಾಲೂಕು ಅಧ್ಯಕ್ಷ ಪ್ರವೀಣ್ಚಂದ್ರ ಜೈನ್, ಜಿಲ್ಲಾ ಉಪಾಧ್ಯಕ್ಷ ಜಗನ್ನಾಥ ಗೌಡ ಅಡ್ಕಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಸಿಂದೂದೇವಿ ಅವರ ಶಿಫಾರಸ್ಸಿನ ಮೇರೆಗೆ ಜಿಲ್ಲಾಧ್ಯಕ್ಷರು ಈ ಆದೇಶ ಹೊರಡಿಸಿದ್ದಾರೆ.
ಸೂರಜ್ ವಳಂಬ್ರ ಅವರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪದವಿವರೆಗೆ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿನ ಕ್ಯಾಡ್‌ಸೆಂಟರ್‌ನಲ್ಲಿ 12 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇದೀಗ ಉಜಿರೆಯಲ್ಲಿ ಇಂಟೀರಿಯರ್ ಡಿಸೈನಿಂಗ್ ಡೆಕೋರೇಷನ್ ಉದ್ಯಮ ಮುನ್ನಡೆಸುತ್ತಿದ್ದಾರೆ. ಪ್ರಾರಂಭದಿಂದಲೂ ತಂದೆಯ ಹಾದಿಯಂತೆ ಜನತಾದಳ ಪಕ್ಷದ ಕಡೆಗೆ ಒಲವು ಹೊಂದಿದ್ದ ಅವರು ಕುಮಾರ ಸ್ವಾಮಿಯವರ ಜೊತೆ, ಪ್ರಜ್ವಲ್ ರೇವಣ್ಣ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.