ಮಡಂತ್ಯಾರು: ಮಂಗಳೂರು ಧರ್ಮ ಪ್ರಾಂತ್ಯದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಸೆಲೆಸ್ಟಿನ್ ಡಿಸೋಜ ಆಯ್ಕೆಯಾಗಿದ್ದಾರೆ.
ಶ್ರೀಮತಿ ಸೆಲೆಸ್ಟಿನ್ ಡಿಸೋಜ ಇವರು ಸಮಾಜ ಸೇವೆಯಲ್ಲಿ ಹೆಸರುವಾಸಿಯಾಗಿದ್ದು, ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರೀಯ ಸದಸ್ಯರಾಗಿ, ಸೇಕ್ರೆಡ್ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಬೆಳ್ತಂಗಡಿ ವಲಯ ಕಥೋಲಿಕ್ ಸಭೆಯ ಸ್ತ್ರೀಹಿತ ಸಂಚಾಲಕರಾಗಿ, ಮಡಂತ್ಯಾರು ಘಟಕದ ಕಥೋಲಿಕ್ ಸಭಾದ ಪ್ರಧಾನ ಕಾರ್ಯದರ್ಶಿಯಾಗಿ, ಎಸ್.ವಿ.ಪಿ. ಸಂಘದ ಉಪಾಧ್ಯಕ್ಷರಾಗಿ, ಮಡಂತ್ಯಾರು ಚರ್ಚಿನ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ನೀಡುತ್ತಿದ್ದಾರೆ.