ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘ – ಸಹಕಾರಿ ಸಪ್ತಾಹದಲ್ಲಿ ವಿಶಿಷ್ಟ ಕಾರ್ಯ ಯೋಜನೆ

Advt_NewsUnder_1
Advt_NewsUnder_1

kokkada sahakari sapthahaಕೊಕ್ಕಡ : 64 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನಮ್ಮ ನಡಿಗೆ ಸದಸ್ಯರ ಮನೆ ಕಡೆಗೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಗೌಡ ನುಡಿದರು.
ಸಹಕಾರಿ ಸಪ್ತಾಹದ ಆರಂಭದ ದಿನವಾದ ನ.14 ರಂದು ಕೊಕ್ಕಡ ಸಂಘದ ಆವರಣದಲ್ಲಿ ಸಹಕಾರಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಸಂಘದ ವ್ಯಾಪ್ತಿಗೆ ಒಳಪಟ್ಟ ಪ್ರತೀ ಸದಸ್ಯರ ಮನೆಗಳಿಗೂ ಸಂಘದ ನಿರ್ದೇಶಕರುಗಳು ಮತ್ತು ಸಿಬ್ಬಂದಿಗಳ ಸಹಯೋಗದಲ್ಲಿ ಸಹಕಾರಿ ಸಪ್ತಾಹದ ಆರಂಭದ ದಿನ ನಮ್ಮ ನಡಿಗೆ ಸದಸ್ಯರ ಮನೆ ಕಡೆಗೆ ಅನ್ನುವ ಧ್ಯೇಯವಾಕ್ಯದಡಿಯಲ್ಲಿ ಭೇಟಿ ನೀಡಲಿದ್ದು ಈ ಭೇಟಿಯನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮುಂದುವರೆಸಿ ವರ್ಷದೊಳಗೆ ಎಲ್ಲಾ ಸದಸ್ಯರ ಮನೆಗಳ ಭೇಟಿಯನ್ನು ಮುಗಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಭೇಟಿಯ ಸಂದರ್ಭ ಪ್ರತೀ ಸಂಘದ ಸದಸ್ಯರ ಮನೆಗಳಲ್ಲೂ ಬಾಕಿಯುಳಿದವರನ್ನು ಸದಸ್ಯರನ್ನಾಗಿಸುವುದು, ಸಂಘದಲ್ಲಿ ಉಳಿತಾಯ ಖಾತೆ ಹೊಂದದವರಿಗೆ ಹೊಸ ಖಾತೆಯನ್ನು ತೆರೆಯಲು ಬೇಕಾದ ದಾಖಲೆಗಳ ಮಾಹಿತಿ ನೀಡಿ ಖಾತೆಯನ್ನು ತೆರೆಯುವುದು, ಯಶಸ್ವಿನಿ ಯೋಜನೆ, ಸಂಘದಲ್ಲಿ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ ನೀಡುವುದು. ಸಂಘದ ವ್ಯವಹಾರಗಳ ಬಗ್ಗೆ ಸದಸ್ಯರ ಅಭಿಪ್ರಾಯಗಳನ್ನು ಪಡೆಯುವುದು, ಎಲ್ಲಾ ಸದಸ್ಯರ ಸಲಹೆ ಸೂಚನೆಗಳನ್ನು ಪಡೆದು ಸಂಘವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಜಿಲ್ಲೆಯಲ್ಲಿಯೇ ಪ್ರಥಮವಾಗಿ ವಿಶಿಷ್ಟವಾದ ಈ ಕಾರ್ಯಯೋಜನೆಯನ್ನು ಕೊಕ್ಕಡದ ಸಂಘದಲ್ಲಿ ಆರಂಭಿಸಲಾಗುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ಎಮ್. ಲಕ್ಷ್ಮೀನಾರಾಯಣ ಶಬರಾಯ , ನಿರ್ದೇಶಕರುಗಳಾದ ಮಹಾಬಲ ನಾಯ್ಕ, ಸೀತಮ್ಮ, ಭವಾನಿ, ಸಂಘದ ಹಿರಿಯ ಸದಸ್ಯರುಗಳಾದ ಎಲ್ಲಿಕ್ಕಳ ಸೂರ್ಯನಾರಾಯಣ ಶರ್ಮ, ಶಂಕರ ಜೋಷಿ, ಭೂಪ ಗೌಡ,ಬದಿಜಾಲು ತಿಮ್ಮಪ್ಪ ಗೌಡ, ಚೋಮ ಬಡೆಕ್ಕರ, ಸುಂದರ ನಾಯ್ಕ, ವರ್ಗೀಸ್, ಕೃಷ್ಣ ನಾಯ್ಕ, ಮಗ್ಗಿ, ಸುಗುಣ, ಪದ್ಮಾವತಿ, ವೆಂಕಪ್ಪ ಗೌಡ ಮತ್ತು ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರಿ ಸ್ವಾಗತಿಸಿದರು. ನವೀನ್ ಕಜೆ ವಂದಿಸಿದರು. ಬಾಲಮುರಳಿಕೃಷ್ಣ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.