ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನದ 85ನೇ ಅಧಿವೇಶನ

Advt_NewsUnder_1
Advt_NewsUnder_1

sammelana2

sammelana

sammelana1ಉಜಿರೆ : ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಸರ್ವಧರ್ಮ ಸಮ್ಮೇಳನದ 85ನೇ ಅಧಿವೇಶನವನ್ನು ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಿ, ಮಾತನಾಡಿದ ಅವರು ಸಮಾಜದ ಒಳಿತಿಗಾಗಿ ಧರ್ಮದ ಆಚರಣೆಯ ಅವಶ್ಯಕತೆ ಇದೆ. ನಮ್ಮ ಜೀವನದಲ್ಲಿ ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಎಲೆಗೂ, ಮರಕ್ಕೂ ಇರುವ ಅವಿನಾಭಾವ ಸಂಬಂಧ ನಮಗೂ ಧರ್ಮಕ್ಕೂ ಇದೆ. ನಮ್ಮಿಂದ ಧರ್ಮ, ಧರ್ಮದಿಂದ ನಾವು ಎಂಬ ಭಾವನೆ ಇದ್ದಾಗ ಧರ್ಮ ಜಾಗೃತಿಯಾಗುತ್ತದೆ. ಧರ್ಮ ಜಾಗೃತಿ ಮತ್ತು ಧರ್ಮದ ಅನುಷ್ಠಾನದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಜೈನ ಧರ್ಮದಲ್ಲಿ ಸಮನ್ವಯ ಎಂಬ ವಿಷಯದ ಬಗ್ಗೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಉಡುಪಿಯ ಅಕ್ಬರ್ ಅಲಿ ಇಸ್ಲಾಂ ಧರ್ಮದಲ್ಲಿ ಸಮನ್ವಯ ದೃಷ್ಟಿ ಎಂಬ ವಿಷಯದ ಬಗ್ಗೆ, ಕ್ರೈಸ್ತ ಧರ್ಮದ ಬಗ್ಗೆ ಬೆಂಗಳೂರಿನ ಸ್ವಾಮಿ ಅಂತೋನಿರಾಜ್ ಮಾತನಾಡಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವೆಲ್ಲೂರಿನ ಶ್ರೀ ನಾರಾಯಣಿ ಪೀಠಂ ನ ಶ್ರೀಶಕ್ತಿ ಅಮ್ಮ ವಹಿಸಿದ್ದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಕಾಮತ್ ಧನ್ಯವಾದವಿತ್ತರು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಮತ್ತು ಪ್ರೊ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.