ಕನ್ನಡಿಗರ ಮೇಲಿನ ಅನ್ಯಭಾಷಿಗರ ಆಕ್ರಮಣ ತಡೆಯುವಲ್ಲಿ 18 ವರ್ಷಗಳಿಂದ ಹೋರಾಟ : ಕರವೇ ಜಿಲ್ಲಾಧ್ಯಕ್ಷ ಲ| ಅನಿಲ್‌ದಾಸ್

Advt_NewsUnder_1
Advt_NewsUnder_1

ka ra ve karyakramaನಮ್ಮ ನಿಯತ್ತು ನಮ್ಮನ್ನು ಕಾಪಾಡುತ್ತದೆ : ಕರವೇ ಅಧ್ಯಕ್ಷ ಶ್ರೀನಿವಾಸ ಗೌಡ
ಈ ಭೂಮಿಯ ಮೇಲೆ ಎಲ್ಲರೂ ಒಂದೇ, ಇಲ್ಲಿ ಯಾವ ಜಾತಿ, ಯಾವ ಧರ್ಮ? ನಮ್ಮ ನಿಯತ್ತು ಸರಿ ಇದ್ದರೆ ಅದೇ ನಮ್ಮನ್ನು ಕಾಪಾಡುತ್ತದೆ. ನಮ್ಮ ಉಪಚಾರ ಹೇಗಿರುತ್ತದೋ ಅದೇ ರೀತಿ ಸಮಾಜ ನಮ್ಮನ್ನೂ ಉಪಚರಿಸುತ್ತದೆ. ಕರ್ನಾಟಕದ ಮಣ್ಣಲ್ಲಿ ಹುಟ್ಟಿದ ಬಳಿಕ ಈ ಕನ್ನಡ ತಾಯಿ ಭುವನೇಶ್ವರಿಯ ಋಣ ತೀರಿಸುವ ಉದ್ಧೇಶದಿಂದ ಈ ಘಟಕದ ತಾ| ಅಧ್ಯಕ್ಷತೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ, ಎಲ್ಲರೂ ಒಟ್ಟಿಗೆ ಸೇರಿ ಈ ಕೆಲಸ ಮಾಡೋಣ. ಈ ಕಾರ್ಯಕ್ರಮಕ್ಕೆ ನಮಗೆ ಅನೇಕರು ಕೈ ಜೋಡಿಸಿದ್ದಾರೆ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ ಹೇಳಿದರು.

ಗಣ್ಯರ ಅನಿಸಿಕೆಗಳು:
ದ.ಕ. ಜಿಲ್ಲೆಯ ೫ ಸಾವಿರಕ್ಕೂ ಅಧಿಕ ಮಂದಿ ಬೇರೆ ಬೇರೆ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿದ್ದು ಅವರ ರಕ್ಷಣೆಯನ್ನು ಟಿ.ಎ. ನಾರಾಯಣ ಗೌಡ ನೇತೃತ್ವದ ಕರವೇ ಮಾಡುತ್ತಿದೆ, ಕನ್ನಡ ಭಾಷೆಗೆ, ಕನ್ನಡಿಗರಿಗೆ ಅನ್ಯಾಯವಾದರೆ ನಾವು ಹೇಗೆ ಒಗ್ಗಟ್ಟು ಸಾಧಿಸುತ್ತೇವೋ ಭಾರತ ಮಾತೆಗೆ ಅನ್ಯಾಯ ವಾದಾಗ ಭಾರತೀಯರಾದ ನಾವು ಒಗ್ಗಟ್ಟಾಗೋಣ. -ಹರೀಶ್ ಪೂಂಜ, ಜಿಲ್ಲಾಧ್ಯಕ್ಷರು ಬಿಜೆಪಿ ಯುವಮೋರ್ಚಾ
ಕರವೇ ಇಂದು ಜಾತಿ ಧರ್ಮದ ಭೇದವಿಲ್ಲದೆ ಕೆಲಸ ಮಾಡುತ್ತಿದೆ, ನಾವು ಇತರ ಭಾಷಿಗರ ವಿರೋಧಿಗಳಲ್ಲ, ಆದರೆ ಇತರ ಭಾಷಿಗರು ನಮ್ಮ ಮೇಲೇರಿ ಬರುವುದನ್ನು ಸಹಿಸುವುದಿಲ್ಲ. -ಕರವೇ ಮಂಗಳೂರು ತಾ| ಅಧ್ಯಕ್ಷ ಮಧುಸೂಧನ ಗೌಡ
ನೇತ್ರಾವತಿ ನದಿ ತಿರುವು ಯೋಜನೆ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ವೀರಪ್ಪ ಮೊಲಿ, ಕರಾವಳಿ ಭಾಗದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಅತ್ತ ಜನರಿಗೆ ಕುಡಿಯುವ ನೀರು ಬೇಕು, ಇತ್ತ ಕರಾವಳಿಯ ಜೀವನದಿ ನೇತ್ರಾವತಿ, ಪಶ್ಚಿಮ ಘಟ್ಟ ಉಳಿಯಬೇಕು ಎಂಬುದು ಕರವೇ ನೀತಿ.-ತೇಗೂರು ಜಗದೀಶ್ ಅರಸ್. ಉಡುಪಿ-ಮಂಗಳೂರು ಕರವೇ ಉಸ್ತುವಾರಿ.

ಉಜಿರೆ : ಕರ್ನಾಟಕ ರಕ್ಷಣಾ ವೇದಿಕೆ ಕಳೆದ 18 ವರ್ಷಗಳಿಂದ ನಿರಂತರವಾಗಿ ರಾಜ್ಯದಲ್ಲಿ ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಕನ್ನಡದ ಸೇವೆಯ ಜೊತೆಗೆ ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲೆ ಇತರ ಭಾಷಿಗರಿಂದ ಆಗುತ್ತಿರುವ ಆಕ್ರಮಣವನ್ನು ತಡೆದು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಲ| ಅನಿಲ್‌ದಾಸ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ನ. 11 ರಂದು ಉಜಿರೆ ಅರಿಪ್ಪಾಡಿ ಮಠ ಮೈದಾನದಲ್ಲಿ ಆಯೋಜಿಸಿದ್ದ 62ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣೆ ಹಾಗೂ ತಾಲೂಕು ಸಮಿತಿಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಘಟಕದ ನೂತನ ಅಧ್ಯಕ್ಷ, ಉದ್ಯಮಿ ಶ್ರೀನಿವಾಸ ಗೌಡ ಪಟ್ರಮೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅರಿಪ್ಪಾಡಿ ಮಠದ ಮುಖ್ಯಸ್ಥ ಬಾಲಕೃಷ್ಣ ಅರಿಪ್ಪಡಿತ್ತಾಯ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರವೀಣ್ಚಂದ್ರ ಜೈನ್ ಪಡಂಗಡಿ, ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ. ಸುವರ್ಣ, ಮಂಗಳೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಲತಾ ಸಾಲ್ಯಾನ್, ವಸ್ತ್ರಂ ಉಜಿರೆ ಮಾಲಕ ಸುಧಾಕರ ಗೌಡ ಧರ್ಮಸ್ಥಳ, ಗಣೇಶ್ ಪ್ರಸಾದ್ ಮೋಟಾರ್ ಲಿಂಕ್ಸ್ ಮಾಲಕ ಬಿ. ಪಾಂಡುರಂಗ ಭಂಡಾರ್ಕರ್, ಮಂಗಳೂರು ನಗರ ಘಟಕದ ಅಧ್ಯಕ್ಷ ಮುಹಮ್ಮದ್ ರಝಾಕ್, ಕರ್ನಾಟಕ ಕಾರ್ಮಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಲಕ್ಷ್ಮಣ ಗೌಡ, ಉರಗ ಪ್ರೇಮಿ ಸ್ನೇಕ್ ಜೋಯ್, ಬಿ.ಎಂ. ಗ್ರೂಪ್ಸ್‌ನ ಮಾಲಕ ಹನೀಫ್ ಬಿ.ಎಮ್, ಸಿಂಧೂ ಇಲೆಕ್ಟ್ರಿಕಲ್ಸ್ ಮಾಲಕ ಜನಾರ್ದನ, ಉದ್ಯಮಿ ಶ್ರೀಕಾಂತ್ ಸಂಪಿಗೆತ್ತಾಯ, ಮಂಗಳೂರಿನ ಉದ್ಯಮಿ ಶಮೀರ್ ನಾಳ, ಜಲೀಲ್ ಬಾಬಾ ಬೆಳ್ತಂಗಡಿ, ಗಿರೀಶ್ ಪ್ರಭು ಉಜಿರೆ, ವಿಶ್ವನಾಥ ಗೌಡ ಶಾರದಾ ಫ್ಯಾನ್ಸಿ ಉಜಿರೆ, ಫಝಲ್ ರಹಿಮಾನ್ ಕೋಯ ಎರ್ನೋಡಿ ಉಜಿರೆ, ಯು.ಕೆ. ಮುಹಮ್ಮದ್ ಹನೀಫ್ ಕಾಶಿಬೆಟ್ಟು, ಆಸಿಫ್ ಮಂಗಳೂರು ಇವರುಗಳು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ :
ಸಮಾರಂಭದಲ್ಲಿ ತಾಲೂಕಿನ ಸಾಧಕ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಕೆ. ಬಾಲಭಾಸ್ಕರ್, ಸಮಾಜ ಸೇವಕ ರಾಮಚಂದ್ರ ಶೆಟ್ಟಿ ಉಜಿರೆ, ಮಂಗಳೂರು ನ್ಯಾಷನಲ್ ಟ್ಯುಟೋರಿಯಲ್ ಕಾಲೇಜು ಪ್ರಾಂಶುಪಾಲ ಯು.ಎಚ್. ಖಾಲಿದ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದೇವಿಪ್ರಸಾದ್, ಝೀ ಕನ್ನಡ ಕಾಮಿಡಿ ಕಿಲಾಡಿ ಕಲಾವಿದ ಅನೀಶ್ ಅಮೀನ್, ಸ್ವಾರ್ ಸುವರ್ಣ ವಾಹಿನಿ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತ ಮಾಸ್ಟರ್ ತೌಶೀರ್ ಎಂ. ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಝೀ ಕನ್ನಡದ ಕಾಮಿಡಿ ಕಿಲಾಡಿ ಕಲಾವಿದ ಹಿತೇಶ್ ಕಾಪಿನಡ್ಕ ಅವರ ಪರವಾಗಿ ಅವರ ತಂದೆ ಸನ್ಮಾನ ಸ್ವೀಕರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಆಬಿದ್ ಅಲಿ (ಅಭಿ) ಉಜಿರೆ, ಜೊತೆ ಕಾರ್ಯದರ್ಶಿಗಳಾದ ಶಾಹಿದ್ ಪಾದೆ ಮತ್ತು ಸಿದ್ದೀಕ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ಪಡೀಲ್ ಮುಂಡಾಜೆ, ಸಂಘಟನಾ ಜೊತೆ ಕಾರ್ಯದರ್ಶಿ ನಿತಿನ್ ಕುಮಾರ್ ಹರ್ಷ ಎಂಟರ್‌ಪ್ರೈಸಸ್, ಸಂಚಾಲಕ ಹರೀಶ್ ಸುವರ್ಣ ಕನ್ಯಾಡಿ, ಮತ್ತು ಅನೀಷ್ ಬೆಡ್‌ಮಾರ್ಟ್ ಹಾಗೂ ಎಲ್ಲಾ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಘಟಕದ ಸದಸ್ಯ ಹರೀಶ್ ಬಳೆಂಜ ಸ್ವಾಗತಿಸಿದರು. ಇರ್ಪಾನ್ ಎಂ.ಡಿ. ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಪ್ರ. ಕಾರ್ಯದರ್ಶಿ ಶಾಹುಲ್ ಹಮೀದ್ ಕ್ಯೂಟಿಎಫ್ ಧನ್ಯವಾದವಿತ್ತರು. ಶಮಿತಾ ಪ್ರಾರ್ಥನೆ ಹಾಡಿದರು. ಶ್ರೀನಿವಾಸ್ ಗೌಡರ ಪತ್ನಿ ಪುಷ್ಪಾ ಶ್ರೀನಿವಾಸ್ ಸಹಿತ ಎಲ್ಲಾ ಮಹಿಳಾ ಸದಸ್ಯರುಗಳೂ ಕೂಡ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅಕ್ಷತಾ ಮತ್ತು ಮಂಜು ಆರ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.