ಬಿಎಮ್‌ಟಿಸಿ ಮಾಜಿ ಅಧ್ಯಕ್ಷ ನಾಭಿರಾಜ್ ಪುತ್ರಿಯ ವಿವಾಹ ಸಮಾರಂಭದ ತಾಳಿಬಂಧಿ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

siddramayyaಬೆಳ್ತಂಗಡಿ: ಬಿಎಮ್‌ಟಿಸಿ ಮಾಜಿ ಅಧ್ಯಕ್ಷರಾಗಿರುವ ಕಾಂಗ್ರೆಸ್ ಪಕ್ಷದ ಮುಖಂಡ, ಉದ್ಯಮಿ ನಾಭಿರಾಜ್ ಜೈನ್ ಅವರ ಪುತ್ರಿಯ ವಿವಾಹ ಪ್ರಯುಕ್ತ ನ.12 ರಂದು ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಕಲ್ಯಾಣ ಮಂಟಪದಲ್ಲಿ ಗೋಧೋಳಿ ಲಗ್ನದಲ್ಲಿ ನಡೆದ ತಾಳಿಬಂಧಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗಮಿಸಿ ನೂತನ ವಧುವಿಗೆ ಶುಭ ಕೋರಿದರು.
ವಿಶೇಷ ವಿಮಾನದ ಮೂಲಕ ಬಜ್ಪೆ ಏರ್‌ಪೋರ್ಟ್‌ಗೆ ಆಗಮಿಸಿದ ಅವರು ರಸ್ತೆ ಮಾರ್ಗವಾಗಿ ಬೆಳ್ತಂಗಡಿಗೆ ಆಗಮಿಸಿ ನೇರವಾಗಿ ತಾಳಿಬಂಧಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಸಂದರ್ಭ ಅವರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ವಸಂತ ಬಂಗೇರ ಅವರೂ ಕೂಡ ನೂತನ ವಧುವಿಗೆ ಶುಭ ಕೋರಿದರು.
ಮುಖ್ಯಮಂತ್ರಿಗಳು ಆಗಮಿಸುತ್ತಿ ದ್ದಂತೆ ನಾಭಿರಾಜ್ ಜೈನ್ ಅವರ ಕುಟುಂಬ ವರ್ಗದವರು ಸಭಾಂಗಣದ ಹೊರಗಡೆ ಅವರನ್ನು ಬರಮಾಡಿಕೊಂಡರು. ಈ ವೇಳೇ ಮಾಧ್ಯಮದ ಮಂದಿಯನ್ನು ಕಂಡು, ಮದುವೆ ಮನೆಯಲ್ಲಿ ಏನೂ ಮಾತನಾಡಲ್ಲ ಎಂದು ಕೈ ಸನ್ನೆ ಮಾಡಿ ನಯವಾಗಿಯೇ ತಿರಸ್ಕರಿಸಿದರು.
ಶುಭಕೋರಿ ಸಭಾಂಗಣದಿಂದ ಹೊರಬರುವ ವೇಳೆ ಶಾಸಕ ವಸಂತ ಬಂಗೇರರೇ ಕೇಳಿಕೊಂಡರೂ ಮಾತುಕತೆಗೆ ನಿರಾಕರಿಸಿದರು.
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಪುತ್ತೂರು ವಿಭಾಗದ ಎ.ಸಿ. ರಘುನಂದನ್ ಮೂರ್ತಿ, ತಹಶೀಲ್ದಾರ್ ಮುಹಮ್ಮದ್ ಇಸಾಕ್, ಆರೋಗ್ಯಾಧಿ ಕಾರಿ ಡಾ| ಕಲಾಮಧು ಶೆಟ್ಟಿ, ಸಹಿತ ಇತರ ಇಲಾಖೆಗಳ ಅಧಿಕಾರಿಗಳು ನಿಯಮದಂತೆ ಉಪಸ್ಥಿತರಿದ್ದು ಅವರನ್ನು ಗೌರವಿಸಿದರು.
ಈ ಸಂದರ್ಭ ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್, ಮಾಜಿ ಸಚಿವೆ ಸುಮಾ ವಸಂತ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಗೇರು ನಿಗಮದ ನಿರ್ದೇಶಕ ಚಂದು ಎಲ್, ಡಿಎಸ್‌ಎಸ್ ಮುಖಂಡ ವಸಂತ ಬಿ.ಕೆ, ಜಿ.ಪಂ. ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಅಬ್ದುಲ್ ರಹಿಮಾನ್ ಪಡ್ಪು, ಸಂತೋಷ್ ಕುಮಾರ್ ಜೈನ್, ಶರತ್ ಕುಮಾರ್ ಶೆಟ್ಟಿ, ಕೆ.ಎಮ್. ಅಬ್ದುಲ್ ಕರೀಂ, ತಾ.ಪಂ. ಸದಸ್ಯ ಪ್ರದೀಪ್ ಕುಮಾರ್, ಮೊದಲಾದವರು ಉಪಸ್ಥಿತರಿ ದ್ದರು. ಕೇವಲ 20 ನಿಮಿಷಗಳಷ್ಟು ಕಾಲ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ಧರಾಮಯ್ಯ ಅವರು ಮತ್ತೆ ರಸ್ತೆ ಮೂಲಕವಾಗಿ ಮಂಗಳೂರಿಗೆ ನಿರ್ಗಮಿಸಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದರು. ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಅವರ ಜೊತೆ ಶಾಸಕ ಬಂಗೇರ ಅವರೂ ಕೂಡ ಇದೇ ವಿಮಾನದಲ್ಲಿ ಸಿಎಂ ಜೊತೆ ಬೆಂಗಳೂರಿಗೆ ಪ್ರಯಾಣಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.