ಧರ್ಮಸ್ಥಳ : 40ನೇ ವರ್ಷದ ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

dharmasthala vastu pradarsana udhgataneಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವದ ಪ್ರಯುಕ್ತ ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ಆವರಣದಲ್ಲಿ ವಸ್ತುಪ್ರದರ್ಶನ ಸಮಿತಿ ವತಿಯಿಂದ ಏರ್ಪಡಿಸಲಾದ 40ನೇ ವರ್ಷದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಮತ್ತು ಸ್ವಾಗತ ಸಮಿತಿ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್ ನ.13ರಂದು ಸಂಜೆ ಉದ್ಘಾಟಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಬಿ.ಆರ್. ಹಿರೇಮಠ್, ಮಂಗಳೂರು ವಲಯದ ವಲಯ ಮಹಾಪ್ರಬಂಧಕ ಎಂ.ಎಸ್. ಸೋಮಯಾಜಿ, ಡಿ.ಎಂ.ಸಿ. ಮನೇಜರ್ ಗೋಪಾಲ ಮೆನನ್, ವಸ್ತುಪ್ರದರ್ಶನ ಸಮಿತಿಯ ಕಾಶ್ಮೀರ್ ಮೆನೇಜಸ್ ಮತ್ತು ಎಂ.ಜಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ. ವಸತಿ ಪ.ಪೂ. ಕಾಲೇಜು ಹಿಂದಿ ಉಪನ್ಯಾಸಕ ಸುನಿಲ್ ಪಂಡಿತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಹರ್ಷೇಂದ್ರ ಕುಮಾರ್ ವ್ಯಾಪಾರ ಮಳಿಗೆಗಳನ್ನು ಉದ್ಘಾಟಿಸಿ ಶುಭಕೋರಿದರು. ರಾತ್ರಿ ಹೊಸಕಟ್ಟೆ ಉತ್ಸವದೊಂದಿಗೆ ಶ್ರೀ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ ಪ್ರಾರಂಭಗೊಂಡಿತು.
ನ. 13 ರಿಂದ 17ರ ವರೆಗೆ ಪೂರ್ವಾಹ್ನ 9 ರಿಂದ ರಾತ್ರಿ 10ರ ವರೆಗೆ ವಸ್ತುಪ್ರದರ್ಶನ ಮಳಿಗೆಗಳು ತೆರೆದಿದ್ದು ಈ ಬಾರಿ 197 ಮಳಿಗೆಗಳು ವ್ಯಾಪಾರ ವ್ಯವಹಾರದಲ್ಲಿ ತೊಡಗಿವೆ. ರತ್ನಮಾನಸದ ಪಾಲಕ ಕೃಷ್ಣ ಶೆಟ್ಟಿ ವಸ್ತುಪ್ರದರ್ಶನ ಮಳಿಗೆಗಳನ್ನು ಸಂಯೋಜಿಸಿದ್ದರು. ವಸ್ತುಪ್ರದರ್ಶನ ಮಳಿಗೆಗಳಲ್ಲಿ ಸರಕಾರಿ ಇಲಾಖೆ, ಬ್ಯಾಂಕ್‌ಗಳು, ಜೀವವಿಮೆ, ಶಿಕ್ಷಣ ಸಂಸ್ಥೆಗಳು, ಅಂಚೆ ಇಲಾಖೆ, ಇಲೆಕ್ಟ್ರಾನಿಕ್ ವಸ್ತುಗಳು, ಸೆಲ್ಕೋ ಪೌಂಡೇಶನ್, ಪುಸ್ತಕಗಳು, ನರ್ಸರಿ/ಹನಿನೀರಾವರಿ ಉಪಕರಣಗಳು, ರಬ್ಬರ್ ಉತ್ಪನ್ನಗಳು, ಸಾವಯವ ಕೃಷಿ ಉತ್ಪನ್ನಗಳು, ಆಯುರ್ವೇದಿಕ್ ಔಷಧಿಗಳು, ರುಡ್‌ಸೆಟ್ ಬಜಾರ್, ಗ್ರಾಮಾಭಿವೃದ್ಧಿ ಯೋಜನೆ ಮಳಿಗೆ, ತಿಂಡಿ ತಿನಿಸುಗಳ ಮಳಿಗೆ, ವಸ್ತ್ರ ಮಳಿಗೆಗಳು, ಗೋಬರ್ ಗ್ಯಾಸ್, ಕೆಂಪು ಕಲ್ಲಿನ ಬ್ಲಾಕ್, ಹೊಲಿಗೆ ಯಂತ್ರ, ನಾಟಿ ಔಷಧಿ, ತರಕಾರಿ ಬೀಜಗಳು, ಸಿರಿ ಉತ್ಪನ್ನಗಳು, ಫೈಬರ್ ಮೂರ್ತಿಗಳು, ಮಂಜುವಾಣಿ, ನಂದಿನಿ, ಕಾರುಗಳು, ಕಂಪೆನಿ ಮೊದಲಾದ ವೈವಿಧ್ಯಮಯ ವಸ್ತುವಿಷಯಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಗೊಳಿಸಲಾಗಿದೆ. 5 ದಿನಗಳ ಕಾಲ ನಾಡು ಹೊರನಾಡುಗಳಿಂದ ಲಕ್ಷಾಂತರ ಪ್ರವಾಸಿಗರು, ಭಕ್ತಾಧಿಗಳು ಹಾಗೂ ಸಾರ್ವಜನಿಕರು ವಸ್ತುಪ್ರದರ್ಶನವನ್ನು ವೀಕ್ಷಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಐದು ದಿನವೂ ವಸ್ತುಪ್ರದರ್ಶನ ಮಂಟಪದಲ್ಲಿ ನಾಡಿನ ಖ್ಯಾತ ಕಲಾವಿದರಿಂದ ಜಾದೂ ಪ್ರದರ್ಶನ, ಸುಗಮ ಸಂಗೀತ, ಯಕ್ಷಗಾನ, ರಸಮಂಜರಿ, ಹಾಸ್ಯನಾಟಕ, ಶಾಸ್ತ್ರೀಯ ಸಂಗೀತ, ನೃತ್ಯರೂಪಕ, ಭರತನಾಟ್ಯ, ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ಕಲಾಭಿಮಾನಿಗಳ ಮನತಣಿಸುತ್ತಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.