ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್ ಸೌಮ್ಯಲತಾಗೆ ಡಿವೈಎಸ್‌ಪಿಯಾಗಿ ಪದೋನ್ನತಿ

0

ಬೆಳ್ತಂಗಡಿ: ಮಂಗಳೂರು ಉಪವಿಭಾಗ-೨ರ ಅಬಕಾರಿ ಇಲಾಖೆಯ ಡಿವೈಎಸ್‌ಪಿಯಾಗಿ ಸೌಮ್ಯಲತಾ ಎನ್. ಪದೋನ್ನತಿಗೊಂಡಿದ್ದಾರೆ. ಬೆಳ್ತಂಗಡಿ ಅಬಕಾರಿ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಭಡ್ತಿ ಪಡೆದಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ೨೦೦೬ರಲ್ಲಿ ಬೆಳ್ತಂಗಡಿ ಅಬಕಾರಿ ನಿರೀಕ್ಷಕರಾಗಿ ಸೇವೆಗೆ ಹಾಜರಾದ ಇವರು ಬಳಿಕ ವಿವಿಧ ಜಿಲ್ಲೆಗಳಿಗೆ ವರ್ಗಾವಣೆಯಾಗಿದ್ದರು. ಬೆಳ್ತಂಗಡಿಯಲ್ಲಿ ೨೦೦೫ರ ಮೇ ೨೫ರಿಂದ ಜೂನ್ ೩ರವರೆಗೆ, ೨೦೦೭ರಿಂದ ೨೦೦೮, ೨೦೧೫ರಿಂದ ೨೦೧೮, ೨೦೧೮ರಿಂದ ೨೦೧೯, ೨೦೧೯ರಿಂದ ೨೦೨೧ರಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ೨೦೨೩ರ ಸೆಪ್ಟೆಂಬರ್ ೧೧ರಿಂದ ಅಬಕಾರಿ ನಿರೀಕ್ಷಕರಾಗಿ ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಡಿವೈಎಸ್‌ಪಿಯಾಗಿ ಪದೋನ್ನತಿ ಪಡೆದಿದ್ದಾರೆ.

ಈ ಹಿಂದೆ ಅಬಕಾರಿ ನಿರೀಕ್ಷಕರಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ವಲಯ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಲಯ, ಉಡುಪಿ, ಬಂಟ್ವಾಳ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಉಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಮಂಗಳೂರು-ಉಡುಪಿ-ಶಿವಮೊಗ್ಗ-ಉತ್ತರಕರ್ನಾಟಕ-ಕೊಡಗು ಜಿಲ್ಲೆ ವ್ಯಾಪ್ತಿಗೆ ಸೇರಿದ ಮಂಗಳೂರು ಉಪವಿಭಾಗ ಮಟ್ಟದಲ್ಲಿ ಅತ್ಯುತ್ತಮ ಅಬಕಾರಿ ನಿರೀಕ್ಷರ ಪ್ರಶಸ್ತಿಗೆ ಭಾಜನರಾಗಿದ್ದ ಇವರು ಬೆಳ್ತಂಗಡಿ ತಾಲೂಕು ಲಾಯಿಲದಲ್ಲಿ ನೋಟರಿ ವಕೀಲರಾಗಿರುವ ಪತಿ ಸಂತೋಷ್ ಕುಮಾರ್, ಮಕ್ಕಳಾದ ಸಮೀಕ್ಷಾ ಹಾಗೂ ಸಂಪ್ರೀತ್‌ರವರೊಂದಿಗೆ ವಾಸವಾಗಿದ್ದಾರೆ.

ಈ ಹಿಂದೆ ಬೆಳ್ತಂಗಡಿ ವಲಯ ಅಬಕಾರಿ ಇನ್ಸ್‌ಪೆಕ್ಟರ್ ಆಗಿದ್ದ ನವೀನ್ ಕುಮಾರ್ ಅವರು ಮತ್ತೆ ಬೆಳ್ತಂಗಡಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here