ವಾರ ಭವಿಷ್ಯ

 .ಆ.22ರಿಂದ ಆ .28ರವರೆಗೆ

 • ಮೇಷ :

  ಸಾಹಸ ಗುಣಗಳಿಂದ ಆರೋಗ್ಯ ಸುಖ, ಕೃಷಿ ಅಭಿವೃದ್ಧಿಯ ಬಗ್ಗೆ ಹೆದರಿಕೆ, ಸಂತಾನ ಸುಖ, ಮನೆಯ ಚಿಂತೆ, ಉದ್ಯೋಗದ ಬಗ್ಗೆ ಉದಾಸೀನ ಬೇಡ. ಸಂಶೋಧನಾ ಗುಣ ಇರಲಿ.

 •    ವೃಷಭ
  ದೇವತಾ ಕಾರ್ಯ, ಕೃಷಿ, ಮಕ್ಕಳಿಂದ ಸುಖ. ಅತಿಯಾದ ಭೋಗ ಸುಖಗಳಿಂದ ಆರೋಗ್ಯ ಹಾನಿ, ನಿಶ್ಯಕ್ತಿ, ದುಃಖ. ಧರ್ಮ ಕಾರ್ಯದಿಂದ ತೃಪ್ತಿ.

  ಮಿಥುನ :

  ಮಕ್ಕಳ ಯಶಸ್ಸಿನ ಕೀರ್ತಿ, ಕೃಷಿಗಾಗಿ ಅಧಿಕ ವ್ಯಯ, ಲಾಭದ ಭಯ, ಉದ್ಯೋಗದಿಂದ ಸಂಪತ್ತು ಅಭಿವೃದ್ಧಿ, ಆರೋಗ್ಯ ಸುಖ, ತನ್ನ ತಪ್ಪಿನಿಂದ ಮಿತ್ರನೇ ಶತ್ರುವಾಗುವನು. ಹಿರಿಯರ ಬಗ್ಗೆ ಚಿಂತೆ ಬೇಡ.

 • ಕರ್ಕಾಟಕ : 

  ಮಿತ್ರನಿಂದ ಧನನಾಶ, ಉತ್ಪಾದನಾ ಘಟಕದಲ್ಲಿ ನಷ್ಟ, ಹಿರಿಯರ ವಿಷಯದಲ್ಲಿ ಒತ್ತಡಕ್ಕೆ ಒಳಗಾಗಬೇಡಿ. ಅಪಾಯದ ಘಲಗಳಿರುವುದು, ತೀಥ ಯಾತ್ರೆಯಿಂದ ಶುಭ. ಮಿತ್ರ/ಪತ್ನಿಯ ವಿಚಾರದಲ್ಲಿ ದುಃಖ. ಮನೆಯ ಕಾರ್ಯದಲ್ಲಿ ಜಯ.

 • ಸಿಂಹ : 

  ಉದ್ಯೋಗದ ಒತ್ತಡ, ಕಲಾಶಕ್ತಿ, ಅಪಾಯದ ಸಮಯ ಜಾಗ್ರತೆ. ಬಂಧುಕ್ಲೇಶ, ಮಿತ್ರ/ಪತ್ನಿಯ ಆರೋಗ್ಯದ ಚಿಂತೆ, ಆಕಸ್ಮಿಕ ಕೀರ್ತಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ.

 • ಕನ್ಯಾ : 

  ಸ್ಥಾನ ಕಳೆದ ಕೊಳ್ಳುವ ಕಾರ್ಯಕ್ಕೆ ಕೈಹಾಕಬೇಡಿ. ಮಾನಹಾನಿಯಾದೀತು, ಆರೋಗ್ಯದ ನಿಗಾವಹಿಸಿ. ಅಪಾಯದ ಕಾರ್ಯಕ್ಕೆ ಕೈಹಾಕಬೇಡಿ, ಕೃಷಿ ಕ್ಷೇತ್ರ ಅಥವಾ ಉತ್ಪಾದನಾ ಘಟಕದ ದರ್ಶನ ಸಾಧ್ಯ. ಲಾಭದ ಫಲಗಳಿದ್ದರೂ ಧನ ನಾಶದ ಫಲಗಳೂ ಇರುವುದು.

 • ತುಲಾ : ಪೂರ್ವಪುಣ್ಯದ ಫಲದಿಂದ ಧನಲಾಭ ವಾಗುವುದು. ಭಾಗ್ಯಕೂಡುವುದು, ಸುಖದ ಫಲಗಳಿರುವುದು. ಸಂತಾಪ ದುಃಖ ಸಾಧ್ಯ. ಮನೆಯ ಕೆಲಸದಲ್ಲಿ ಸುಖ, ಕೀರ್ತಿ ಅಭಿವೃದ್ಧಿ ಇಷ್ಟಾರ್ಥ ಸಿದ್ಧಿ.

 • ವೃಶ್ಚಿಕ :

  ಸಾಹಸ ಕಾರ್ಯದಿಂದ ದುಃಖ. ಮನೆ, ವಾಹನ, ಭೂಮಿ ವಸ್ತ್ರಾಭರಣಗಳ ಸುಖದ ಸೊತ್ತುಗಳ ವಿಷಯದಲ್ಲಿ ಜಾಗ್ರತೆ, ಲಾಭದ ಪ್ರಯತ್ನಕ್ಕೆ ವಿಘ್ನಗಳು ಸಾಧ್ಯ. ಉದ್ಯೊಗ ಸುಖ, ಮಿತ್ರ/ಪತ್ನಿಕಲಹ.

 • ಧನು : 

  ಗುಪ್ತ ಲಾಭದ ಯೋಚನೆಯ ಪ್ರಯತ್ನ ನಿಷ್ಪಲ, ದುಃಖ, ಪುತ್ರ ಸುಖ, ವ್ಯಸನದ ದಾಸರಾಗಬೇಡಿ, ಅತಿಕಾಮದಿಂದ ಆರೋಗ್ಯ ಹಾನಿ, ಕುಟುಂಬದವರಿಂದ ನಷ್ಟ ದುಃಖ

 • ಮಕರ : 

  ಅಲಂಕಾರಿಕ ವಸ್ತುಗಳ ಮೋಹದಿಂದ ವಿತ್ತನಾಶ ದುಃಖ ಮನೆಯ ಕಾರ್ಯದಿಂದ ಸುಖ, ಶತ್ರುವಿನೊಂದಿಗೆ ಸ್ನೇಹದ ಮಾತುಕತೆ ಸಾಧ್ಯ. ಕೃಷಿಯಲ್ಲಿ ರೋಗಬಾಧೆ, ಉದ್ಯೋಗದಲ್ಲಿ ಪ್ರಾಮಾಣಿಕ ಆಸಕ್ತಿ ವಹಿಸದಿದ್ದಲ್ಲಿ ಸರ್ವನಾಶ.

 • ಕುಂಭ : 

  ಶತ್ರುಗಳಿಂದ ಭೀತಿ ದುಃಖ, ಉತ್ಪಾದನಾ ಘಟಕ ಅಥವಾ ಕೃಷಿಯಿಂದ ನಷ್ಟ, ಸ್ತ್ರಿಪೀಡೆ, ಪತ್ನಿಕಲಹ, ಲಾಭದ ಯೋಚನೆಯಿಂದ ಧನನಾಶ.

   

 • ಮೀನ  :

  ಆಕಸ್ಮಿಕ ಮರೆವಿನಿಂದ ಅಲಂಕಾರಿಕ ವಸ್ತುಗಳ ನಾಶ. ಮಾತಿನಿಂದ ಅವಮಾನ ಲಾಭದ ಯೋಚನೆಯಿಂದ ಪುತ್ರ ಕಲಹ. ಕೃಷಿಯಿಂದ ಸುಖ. ಅಶುಭ ಆಸಕ್ತಿಗಳಿಂದ ವಿಪತು. ಧೈರ್ಯ ಪ್ರಯತ್ನಗಳಿಂದ ಲಾಭ, ಚಿಂತೆಯಿಂದ ಆರೋಗ್ಯ ಹಾನಿ.

Copy Protected by Chetan's WP-Copyprotect.