ವಾರ ಭವಿಷ್ಯ

ಡಿ.05ರಿಂದ  ಡಿ.11 ರವರೆಗೆ

 • ಮೇಷ :

  ಮಕ್ಕಳಿಂದಾಗಿ ಸಂತೋಷ ಹಾಗೂ ತೃಪ್ತಿಯನ್ನು ಅನುಭವಿಸುವಿರಿ. ಇಷ್ಟಾರ್ಥ ಸಿದ್ಧಿಸುವುದು. ಶುಭ ಕಾರ್ಯಗಳು ಸಾಧ್ಯ. ಧರ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಿರಿ. ದುಃಖದ ವಾರ್ತೆಯೂ ಸಾಧ್ಯ.

 •    ವೃಷಭ
  ಮಾತಿನಲ್ಲಿ ಪ್ರೀತಿ, ಆಕರ್ಷಣೆ, ಸ್ಪಷ್ಟತೆ ಕಲಹಬಾರದಂತೆ ಶುಭ ನುಡಿಗಳಿಂದ ಕೂಡಿರಲಿ. ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆ ಈಡೇರುವುದಕ್ಕಾಗಿ ಆಸಕ್ತಿಯ ಅಧ್ಯಯನ ಅಗತ್ಯ. ವಿವಾಹ ಸಮಾರಂಭದ ಬಗ್ಗೆ ಹಿಂಜರಿಯದಿರಿ. ಸಂಪತ್ತು ಕೂಡಿಬರುವುದು. ಪ್ರಯಾಣದಲ್ಲಿ ಜಾಗ್ರತೆ ಅಗತ್ಯ.

  ಮಿಥುನ :

  ಧರ್ಮಕಾರ್ಯದಲ್ಲಿ ಲೋಭತನದಿಂದ ಅವಮಾನ, ಅಪಕೀರ್ತಿಯಾಗದಂತೆ ಜಾಗ್ರತೆ. ಮನೆ, ಭೂಮಿ, ಧನ ವ್ಯವಹಾರದ ವ್ಯಾಜ್ಯದಲ್ಲಿ ಜಯ ಸಾಧಿಸುವಿರಿ. ಶುಭಕಾರ್ಯದಲ್ಲಿ ಸ್ತ್ರೀಯಿಂದ ವಿಘ್ನಗಳು ಸಾಧ್ಯ. ದೃಢ ಚಿತ್ತದಿಂದ ಶಾಂತವಾಗಿ ಸಮಸ್ಯೆಯನ್ನು ಎದುರಿಸಿ ಇಷ್ಟಾರ್ಥ ಸಿದ್ಧಿಸುವುದು.

 • ಕರ್ಕಾಟಕ : 

  ಮಕ್ಕಳಲ್ಲಿ ಕಲಹಕ್ಕೆ ಅವಕಾಶ ನೀಡದಿರಿ. ವಿವಾಹ ಸಂಬಂಧ ಜವಾಬ್ದಾರಿಯಿಂದ ವ್ಯವಹರಿಸಿ. ಸೋಲು, ವಿಪತ್ತುಗಳಿಗೆ ಅವಕಾಶ ಇಲ್ಲದಿರಲಿ. ಆರೋಗ್ಯದ ಬಗ್ಗೆ ಶಿಸ್ತು ಅಗತ್ಯ. ಅಪಾಯವಿರುವ ವಸ್ತುವನ್ನು ತಜ್ಞರ ನಿರ್ದೆಶನದಂತೆ ಬಳಸಿ.

 • ಸಿಂಹ : 

  ಸಂತಾನ ಸುಖವನ್ನನುಭವಿಸುವಿರಿ ಶತ್ರುಗಳಿಂದ, ಮಿತ್ರರಿಂದ, ಮರೆವಿನಿಂದ, ಮೋಸಹೋಗುವುದರಿಂದ ಧನ ನಷ್ಟವಾದೀತು. ಎಚ್ಚರ ಅನಿಷ್ಟವಾಗದಂತೆ ಬುದ್ಧಿ ಜಾಗೃತವಾಗಿರಲಿ.

 • ಕನ್ಯಾ : 

  ಸೇವಾ ವೃತ್ತಿಯಲ್ಲಿ ಶತ್ರುಭಯವಿರುವುದು. ಅಧಿಕಾರದ ಬಯಕೆಯಿಂದ ಮಾಡಿದ ವ್ಯಯ ದುಃಖ ನೀಡುವುದು. ಊಹಾಪೋಹ ಸಂಶಯಗಳಿಂದ ಕಲಹಕ್ಕೆ ಅಣಿಯಾಗದಿರಿ.

  ತುಲಾ  :

 • ವಿದ್ಯಾಸಕ್ತಿ, ಸಂಪತ್ತು ಅಭಿವೃದ್ದಿ, ಮನೆ, ವಾಹನ, ಭೂಸಂಪತ್ತು, ವಸ್ತ್ರಭರಣ ವ್ಯವಹಾರದಲ್ಲಿ ಅಭಿವೃದ್ಧಿ, ಸಂಶೋಧನಾ ರಂಗದವರಿಗೆ ಧನಲಾಭ. ಸಾಧಕರಿಗೆ ಇಷ್ಟಾರ್ಥಸಿದ್ಧಿ. ಉದ್ಯೋಗ ವಲಯದ ಶತ್ರುತ್ವ ನಿವಾರಣೆ, ದುಃಖದ ಸುದ್ಧಿ ಸಾಧ್ಯ.

 • ವೃಶ್ಚಿಕ :

  ಮನೆ, ವಾಹನ, ಭೂಮಿ, ವಸ್ತ್ರಾಭರಣಗಳಿಗೆ ಈಗ ಸಾಲಮಾಡಿ ವ್ಯವಹರಿಸದಿರಿ. ಉದ್ಯೋಗದ ಬಗ್ಗೆ ಚಿಂತಿಸುವುದು ಅಗತ್ಯವಿಲ್ಲ. ಸಾಮಾನ್ಯ ಅವಕಾಶಗಳನ್ನು ನಿರ್ಲಕ್ಷಿಸದಿರಿ. ಮುಂದೆ ಭವಿಷ್ಯ ಉತ್ತಮವಾಗುವುದು. ವಿವಾಹ ಸಂಬಂಧಗಳು ಕೂಡಿಬರುವುದು. ಇಷ್ಟಸಿದ್ಧಿಸುವುದು, ಧರ್ಮಕಾರ್ಯಗಳಿಂದ ಆಕಸ್ಮಿಕ ಅಪಾಯದಿಂದ ಪಾರಾಗಿ.

 • ಧನು : 

  ಮನದಿಚ್ಚೆಯಂತೆ ಶುಭಕಾರ್ಯಗಳು ನಡೆದಾವು. ದುಶ್ಚಟಗಳಿಂದ ದೂರವಿರುವುದು ಅಗತ್ಯ. ಶಿಸ್ತಿನ ಜೀವನದಿಂದ ಸಂಶಯ ಬಗೆಹರಿಯುವುದು. ಅಪರಿಚಿತನ ಸ್ನೇಹದಿಂದ ಮೋಸಹೋಗುವಿರಿ. ಮಿತ್ರ/ ಪತಿ-ಪತ್ನಿ ಪರಸ್ಪರ ಗೌರವದಿಂದ ಇರುವುದು ಅಗತ್ಯ.

 • ಮಕರ : 

  ಪತಿ-ಪತ್ನಿ ಪರಸ್ಪರ ಸಹಾಯದಿಂದ ಅಭಿವೃದ್ಧಿ ಸುಖ. ಸಂಶಯ ನಿವಾರಣೆ, ಸಾಧನೆಯಿಂದ ಧನಾಭಿವೃದ್ಧಿ. ವಿವಾಹ ಸಂಬಂಧ ಪ್ರಗತಿ ಲಾಭ. ಆರೋಗ್ಯದ ಬಗ್ಗೆ ಚಿಂತಿಸುವುದು ಅಗತ್ಯವಿಲ್ಲ. ಇಷ್ಟಾರ್ಥ ಸಿದ್ಧಿಸುವುದು.

 • ಕುಂಭ : 

  ಶತ್ರುತ್ವಕ್ಕೆ ಅವಕಾಶ ಬಾರದಂತಿರಲಿ. ಯೋಚನೆ ಗಳೆಲ್ಲ ಶುಭವಾಗಿರಲಿ. ಸಂಸಾರದಲ್ಲಿ ಆರೋಗ್ಯ ಸುಖ ಉಂಟಾಗುವುದು. ಇಷ್ಟಾರ್ಥ ಸಿದ್ಧಿಸುವುದು. ಶುಭಕಾರ್ಯಗಳು ಪ್ರಗತಿಗೊಳ್ಳುವುದು, ಇಷ್ಟಾರ್ಥ ನೆರವೇರುವುದು.

 • ಮೀನ  :

  ಮಹತ್ವಾಕಾಂಕ್ಷೆಯ ಯೋಜನೆಯ ಸುಖದ ಫಲವನ್ನನುಭವಿಸುವಿರಿ. ಕಳ್ಳರು, ಮೋಸಗಾರರಿಂದ ಅಪಾಯದ ಸಮಸ್ಯೆಗಳಿಂದ ದೂರವಿರುವುದು ಅಗತ್ಯ. ಗೃಹಕಾರ್ಯದಲ್ಲಿ ವಿಘ್ನಗಳು ಬಾರದಂತೆ ಎಚ್ಚರ. ವಿವಾಹ ಸಂಬಂಧ ಕಲಹಗಳು ಬಾರದಂತೆ ಜಾಗೃತೆ ಅಗತ್ಯ. ಸಂಶಯದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನೇರ ವ್ಯವಹಾರದಿಂದ ಶುಭ.

Copy Protected by Chetan's WP-Copyprotect.