ಸುದ್ದಿ ವಾರ ಭವಿಷ್ಯ

ಸುದ್ದಿ ವಾರ ಭವಿಷ್ಯ: ಒ.08-10-2020 ರಿಂದ  ಒ. 14-10-2020 ರವರೆಗೆ

 • ಮೇಷ :

  ಕೋರ್ಟು ಕಛೇರಿ ವ್ಯವಹಾರಗಳಲ್ಲಿ ನಷ್ಟ ಸಾಧ್ಯ. ಮನೆಯಲ್ಲಿ ಪುತ್ರನಿಂದ ಸುಖವನ್ನು ಆನಂದಿಸುವಿರಿ. ಲಾಭಕ್ಕಾಗಿ ಬುದ್ಧಿವಂತಿಕೆಯ ಕೆಲಸದಿಂದ ಅನಿಷ್ಟ ಎದುರಿಸಬೇಕಾದೀತು. ಭಯ ಪಡದಿರಿ.

 •    ವೃಷಭ
  ಅಸ್ಥಿರ ಯೋಚನೆಗಳಿಂದ ತಲೆನೋವು ಸಾಧ್ಯ. ಕೆಲಸಗಳಲ್ಲಿ ವಿಘ್ನಗಳು ಬಾರದಂತೆ ಜಾಗ್ರತೆ ವಹಿಸಿ. ಅಧಿಕಾರ ಸುಖ ಇರುವುದು. ಪಾಲು ವ್ಯಾಪಾರದಲ್ಲಿ ಕಲಹಕ್ಕೆ ಅವಕಾಶ ನೀಡದಿರಿ.

  ಮಿಥುನ :

  ವಸ್ತ್ರಾಭರಣಗಳ ಸುಖ ಅನುಭವಿಸುವಿರಿ. ಧಾರ್ಮಿಕ ವಿಷಯದಿಂದ ಪುತ್ರನೊಂದಿಗೆ ಕಲಹ ಬಾರದಂತಿರಲಿ. ಉದ್ಯೋಗದಲ್ಲಿ ಪ್ರಗತಿ. ಭೂಮಿ, ಮನೆ, ವಸ್ತ್ರಾಭರಣಗಳ ಬಗ್ಗೆ ಜಾಗ್ರತೆ ಅಗತ್ಯ.

   

 • ಕರ್ಕಾಟಕ : 

  ಸಂತತಿ, ಧನ ಲಾಭ, ಕುಟುಂಬದಲ್ಲಿ ಅಭಿವೃದ್ಧಿ. ಮಾನಸಿಕವಾಗಿ ಭಯದಿಂದ ದೂರವಿದ್ದು ಶಾಂತಿಯಿಂದ ವ್ಯವಹರಿಸಿ. ಸುಖದ ಸಾಧನಗಳಿಗಾಗಿ ಖರ್ಚು ವೆಚ್ಚಗಳು ಸಾಧ್ಯ.

 • ಸಿಂಹ : 

  ಮಿತ್ರ ಲಾಭ, ಶತ್ರು ಭಯ, ಸಂಬಂಧಿಕರೊಂದಿಗೆ ಕಲಹಕ್ಕೆ ಅವಕಾಶ ನೀಡದಿರಿ. ವಾಹನದಿಂದ ನಷ್ಟವಾಗದಂತೆ ಜಾಗ್ರತೆವಹಿಸಿ. ಕಲಹ ರಹಿತವಾಗಿ ವ್ಯವಹಾರದಿಂದ ಯಶಸ್ಸು.

 • ಕನ್ಯಾ : 

  ತೀರ್ಥಯಾತ್ರೆ, ಗೃಹದಲ್ಲಿ ಸಮಾರಂಭ, ಧನ ಸಂಪತ್ತಿನ ವಿಷಯದಲ್ಲಿ ಇಷ್ಟ ಸಿದ್ಧಿ. ಆಭರಣ, ಧನ ಆಗಮನಗಳಿದ್ದರೂ ಅಧಿಕ ಖರ್ಚುಗಳೂ ಸಂಭವ.

  ತುಲಾ  :

 • ದುಷ್ಟರಿಂದ ಹಾನಿ ಅಥವಾ ಬಾಧೆಯಿಂದ ರಕ್ಷಿಸಿಕೊಳ್ಳಿ. ಆರ್ಥಿಕ ವ್ಯವಸ್ಥೆ ಹಾನಿಯಾಗದಂತೆ ಪ್ರಯತ್ನಿಸಿ. ಆಕಸ್ಮಿಕ ಧನ ಪ್ರಾಪ್ತಿ ಆದರೂ ಆರೋಗ್ಯದ ಬಗ್ಗೆ ಜಾಗ್ರತೆ ಅಗತ್ಯ.

 • ವೃಶ್ಚಿಕ :

  ಯೋಜನೆಯಲ್ಲಿ ತಡೆಗಳು ಬಾರದಂತೆ ಎಚ್ಚರ ಅಗತ್ಯ. ವ್ಯಾಪಾರದಲ್ಲಿ ಪ್ರಗತಿ, ದಾಂಪತ್ಯದಲ್ಲಿ ವಿರಸವನ್ನು ತಾಳದೆ ಆಕಸ್ಮಿಕ ಅಪಾಯಗಳಿಂದ ರಕ್ಷಿಸಿಕೊಳ್ಳಿ. ಅವಮಾನವಾಗದಂತೆ ಎಚ್ಚರ ಅಗತ್ಯ.

 • ಧನು : 

  ಆರ್ಥಿಕ ಅಭಿವೃದ್ದಿ, ವಾಹನ ಸುಖ, ಧಾರ್ಮಿಕ ಕಾರ್ಯ, ತೃಪ್ತಿ ಸಂತೋಷಗಳೊಂದಿಗೆ ಜ್ಞಾನ ಪ್ರಾಪ್ತಿ, ಸತ್ಕಾರ್ಯಗಳು, ಸಂಚಾರಗಳು ಸಾಧ್ಯ.

 • ಮಕರ : 

  ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದರ ವ್ಯಾಧಿ, ವಿತ್ತಲಾಭ, ಶತ್ರುನಾಶ, ಶುಭಕಾರ್ಯ, ಮಿತ್ರ ಸುಖ, ಧನ ಲಾಭ, ಜಾಮೀನು ವ್ಯವಹಾರದಿಂದ ಹಾನಿ ಸಾಧ್ಯ.

 • ಕುಂಭ : 

  ಗೃಹ ಕಲಹ, ಸಂಪತ್ತಿನ ಅವನತಿ, ಪ್ರಯಾಣದಲ್ಲಿ ವಿಘ್ನ, ರೋಗದ ಕಿರಿಕಿರಿ, ಕೈಗೊಂಡಕಾರ್ಯ ಹಾನಿ, ನೂತನ ಅವಿಷ್ಕಾರ, ಸಂಶೋಧನೆ ಸಾಧ್ಯ.

 • ಮೀನ  :

  ಕೈಗೊಂಡ ಕಾರ್ಯದಲ್ಲಿ ಜಯ, ಅವಿಶ್ವಾಸ, ಭಯ, ಪರಾಭವ, ಆರೋಗ್ಯ ಹಾನಿ, ಭೂ ವಾಹನ ಸಂಬಂಧ ವ್ಯಯದಿಂದ ಲಾಭ, ಹಿರಿಯರ ಅನಾರೋಗ್ಯ ಸಾಧ್ಯ.

Copy Protected by Chetan's WP-Copyprotect.