ನ.9, 10ರಂದು ರಾಘವೇಶ್ವರ ಶ್ರೀ ಸೌತಡ್ಕ, ಧರ್ಮಸ್ಥಳ ಭೇಟಿ

raghaveshwara swameejiಸೌತಡ್ಕ: ಹೊಸನಗರ ಶ್ರೀ ರಾಮಚಂದ್ರಾಪುರ ಸ್ವಾಮೀಯವರು ಶ್ರೀ ಕ್ಷೇತ್ರ ಸೌತಡ್ಕಕ್ಕೆ ನ.9ರಂದು ಸಂಜೆ 4.30ಕ್ಕೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ ಉಜಿರೆ ಹವ್ಯಕ ವಲಯದ ವತಿಯಿಂದ ರಂಗಪೂಜೆ ನೆರವೇರಲಿದೆ.
ನಂತರ ಅಲ್ಲಿಂದ ಕೊಕ್ಕಡ ಹಿತ್ತಿಲು ಶ್ರೀರಾಮ ಭಟ್ಟರ ಮನೆಗೆ ತೆರಳಲಿದ್ದು ಮರುದಿನ ನ.10ರಂದು ಶ್ರೀಕರಾರ್ಚಿತ ರಾಜರಾಜೇಶ್ವರಿ, ಚಂದ್ರಮೌಳೀಶ್ವರ ಪೂಜೆ ನೆರವೇರಲಿದ್ದು, ಮಧ್ಯಾಹ್ನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಈ ಹಿನ್ನಲೆಯಲ್ಲಿ ಬೆಳಿಗ್ಗೆ ಸುಮಾರು 250ಕ್ಕೂ ಅಧೀಕ ಹವ್ಯಕ ಬಾಂಧವರು ರುದ್ರ ಪಠಣಗೈಯಲ್ಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.