ಮಡಂತ್ಯಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ, ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು, ಸೇಕ್ರೆಡ್ ಹಾರ್ಟ್ ಕೃಷಿ ಅಭಿವೃದ್ಧಿ ಸಮಿತಿ, ಕಥೋಲಿಕ್ ಸಭಾ ಮಡಂತ್ಯಾರು ಘಟಕ, ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಡಂತ್ಯಾರು ವಲಯ ಇವರ ಸಹಯೋಗದೊಂದಿಗೆ ಸೇಕ್ರೆಡ್ ಹಾರ್ಟ್ ಸಮುದಾಯ ಭವನ ಮಡಂತ್ಯಾರಿನಲ್ಲಿ ನ. 5 ರಂದು ಕೃಷಿ ವಿಚಾರ ಸಂಕಿರಣವನ್ನು ಸೇಕ್ರೆಡ್ ಹಾರ್ಟ್ ಚರ್ಚ್ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ| ಬೇಸಿಲ್ ವಾಸ್ ಉದ್ಘಾಟಿಸಿ. ಸಭೆಯ ಅಧ್ಯಕ್ಷತೆಯಿಂದ ಆಶೀರ್ವಚನ ನೀಡಿದರು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ, ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ. ಜೆರೋಮ್ ಡಿಸೋಜಾ ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಕೆ, ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ ಕೆ, ಜಿ.ಪಂ ಸದಸ್ಯೆ ಮಮತಾ ಎಂ. ಶೆಟ್ಟಿ ಶುಭ ಕೋರಿದರು. ವೇದಿಕೆಯಲ್ಲಿ ಚರ್ಚ್ನ ಸಹಾಯಕ ಧರ್ಮಗುರುಗಳಾದ ಆಲ್ವಿನ್ ಡಿಸೋಜಾ, ಕಥೋಲಿಕ್ ಸಭಾ ಬೆಳ್ತಂಗಡಿ ಅಧ್ಯಕ್ಷ ವಿಲಿಯಂ ಕೊಡ್ದೆರೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋನಾಲ್ಡ್ ಸಿಕ್ವೇರಾ, ತಾ.ಪಂ ಸದಸ್ಯೆ ವಸಂತಿ ಲಕ್ಷ್ಮಣ್, ಚರ್ಚ್ ಕಾರ್ಯದರ್ಶಿ ಲಿಯೋ ರೊಡ್ರಿಗಸ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಹೆಗ್ಡೆ, ಗ್ರಾ. ಯೋಜನೆಯ ಕೃಷಿ ಮೇಲ್ವಿಚಾರಕ ಉಮೇಶ್ ಉಪಸ್ಥಿತರಿದ್ದರು.
ಕೃಷಿ ಕ್ಷೇತ್ರದಲ್ಲಿ ಅತ್ಯಪೂರ್ವ ಸಾಧನೆ, ಮಿಶ್ರ ಬೇಸಾಯದ ಮೂಲಕ ಕೃಷಿ ಲಾಭದಾಯಕ ಎಂದು ತೋರಿಸಿಕೊಟ್ಟು ಈಗಿನ ಪೀಳಿಗೆಗೆ ಕೃಷಿ ಮತ್ತು ಹೈನುಗಾರಿಕೆಯ ಮೇಲೆ ವಿಶ್ವಾಸ ಬರುವಂತೆ ಮಾಡಿರುವ ಸಾಧಕರಾದ ಲಿಂಗಪ್ಪ ಗೌಡ, ರೊನಾಲ್ಡ್ ಸಿಕ್ವೇರಾ, ಲಿಗೋರಿ ಲೋಬೋ ಮತ್ತು ಥೋಮಸ್ ವೇಗಸ್ ಇವರನ್ನು ಸನ್ಮಾನಿಸಲಾಯಿತು.
ಜನಜಾಗೃತಿ ವೇದಿಕೆ ರಾಜ್ಯ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಕಾರ್ಯಕ್ರಮ ನಿರೂಪಿಸಿದರು. ಸೇಕ್ರೆಡ್ ಹಾರ್ಟ್ ಕೃಷಿ ಅಭಿವೃದ್ಧಿ ಸಮಿತಿ ಸಂಚಾಲಕ ಐವನ್ ಸಿಕ್ವೇರಾ ಸ್ವಾಗತಿಸಿದರು. ಎಪಿಎಂಸಿ ನಿರ್ದೇಶಕಿ ಸೆಲೆಸ್ಟಿನ್ ಡಿಸೋಜಾ ವಂದಿಸಿದರು.