ವಿಮುಕ್ತಿ -ದಯಾ ವಿಶೇಷ ಶಾಲೆಗೆ ಸ್ಕೂಲ್ ಬಸ್

Vumukti sbi vehicle picಬೆಳ್ತಂಗಡಿ : ಕಪುಚಿನ್ ಕೃಷಿಕ್ ಸೇವಾ ಕೇಂದ್ರ ದಯಾಳ್‌ಬಾಗ್ ಗ್ರಾಮಭಿವೃದ್ಧಿ ಯೋಜನೆ ವಿಮುಕ್ತಿ ಲಾಯಿಲ, ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ, ಬೆಳ್ತಂಗಡಿ ಇದರ ವತಿಯಿಂದ ಅ. 29ರಂದು ವಿಮುಕ್ತಿ ದಯಾ ವಿಶೇಷ ಮಕ್ಕಳ ಸಂಚಾರಕ್ಕೆ ಅನುಕೂಲವಾಗಲು ಸ್ಕೂಲ್ ಬಸ್ಸನ್ನು ಒದಗಿಸಲಾಯಿತು. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಇದರ ಎಂ.ಡಿ. ಪ್ರವೀಣ್ ಕುಮಾರ್ ಗುಪ್ತ ಹಾಗೂ ಬ್ಯಾಂಕಿನ ಪ್ರಮುಖರಾದ ಫಾರುಕ್ ಶಹಾಬ್ ಇವರು ಬಸ್ಸಿನ ಕೀಲಿ ಕೈಯನ್ನು ವಿಮುಕ್ತಿ ಸಂಸ್ಧೆಯ ನಿರ್ದೇಶಕರಾದ ವಂ.ಫಾ ವಿನೋದ್ ಮಸ್ಕರೇನ್ಹಸ್, ಸಹ ನಿರ್ದೇಶಕರಾದ ವಂ.ಫಾ ರೋಹನ್ ಲೋಬೋ ಹಾಗೂ ದಯಾಳ್‌ಬಾಗ್‌ನ ಸಹಗುರುಗಳಿಗೆ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಬೆಳ್ತಂಗಡಿ ಶಾಖೆಯ ಪ್ರಬಂಧಕರು ಮತ್ತು ಸಿಬ್ಬಂದಿಗಳು ಹಾಗೂ ವಿಮುಕ್ತಿ ಸಂಸ್ಧೆಯ ಸಿಬ್ಬಂದಿಗಳು ಮತ್ತು ವಿಶೇಷ ಮಕ್ಕಳು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.