HomePage_Banner_
HomePage_Banner_

ಪದ್ಮುಂಜ ರಸ್ತೆಗಳ ಡಾಮರೀಕರಣಕ್ಕೆ ಶಂಕು ಸ್ಥಾಪನೆ

padmuja rasthe

padmunja rasthe 1ಪದ್ಮುಂಜ : ಇಲ್ಲಿಯ ಕಣಿಯೂರು ಗ್ರಾಮದ ಪದ್ಮುಂಜ ಪುದ್ದೊಟ್ಟು ರಸ್ತೆಗೆ 75ಲಕ್ಷ, ಗಾಡಕೋಡಿ ಅಡೆಂಜ ರಸ್ತೆಗೆ 75ಲಕ್ಷ ರೂ. ಡಾಮರೀಕರಣಕ್ಕಾಗಿ ಶಾಸಕ ಹಾಗೂ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರರವರು ಸರ್ಕಾರದಿಂದ ಮಂಜೂರು ಮಾಡಿಸಿದ್ದು, ಇದರ ಶಂಕು ಸ್ಥಾಪನಾ ಕಾರ್ಯಕ್ರಮ ಅ. 21ರಂದು ಪದ್ಮುಂಜದಲ್ಲಿ ನಡೆಯಿತು.
ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಬಂಗೇರರು ನನ್ನ ನಾಲ್ಕೂವರೆ ವರ್ಷದ ಅವಧಿಯಲ್ಲಿ ತಾಲೂಕಿಗೆ ೧೭ಸೇತುವೆಗಳನ್ನು ಮಂಜೂರು ಮಾಡಿದ್ದು, 1 ಸಾವಿರ ಕೋಟಿ ರೂ. ಮೇಲ್ಪಟ್ಟು ಅಭಿವೃದ್ಧಿ ಕಾರ್ಯಗಳನ್ನು ನನ್ನ ಕ್ಷೇತ್ರದಲ್ಲಿ ಮಾಡಿಸಿದ್ದೇನೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ಹಲವಾರು ರಸ್ತೆಗಳ ಅಭಿವೃದ್ಧಿ ಪಡಿಸುವ ಬೇಡಿಕೆಗಳು ಬಂದಿದ್ದು, ಮುಂದಿನ ಅವಧಿಯಲ್ಲಿ ಹಂತ ಹಂತವಾಗಿ ನೆರವೇರಿಸಿ ಕೊಡಲಾಗುವುದು ಎಂದರು. ಜಿ.ಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕರಾಯರವರು ಮಾತನಾಡಿ ನುಡಿದಂತೆ ನಡೆಯುವ ನಿಷ್ಕಳಂಕ ಶಾಸಕರು ನಮ್ಮ ಶಾಸಕರು ಆಗಿದ್ದು, ಮುಂದಿನ ಅವಧಿಯಲ್ಲಿ ಸಚಿವರಾಗಿ ಬರುವುದೇ ಮತದಾರರ ಆಕಾಂಕ್ಷೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಸುನೀಲ್ ಸಾಲ್ಯಾನ್, ಉಪಾಧ್ಯಕ್ಷೆ ಆಶಾ, ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಈಶ್ವರ ಭಟ್ ಮಾಯಿಲ್ತೋಡಿ, ಎ.ಪಿ.ಎಂ.ಸಿ ಉಪಾಧ್ಯಕ್ಷ ಗಣೇಶ್ ಕೆರ್ಮುಣ್ಣಾಯ, ಪಂಚಾಯತ್ ಸದಸ್ಯರುಗಳಾದ ಸೀತಾರಾಮ ಮಡಿವಾಳ ಯಶೋಧರ ಶೆಟ್ಟಿ, ಸೋಮಯ್ಯ ನಾಯ್ಕ, ಕೃಷ್ಣ, ಪ್ರಮೀಳಾ, ಲಲಿತಾ, ತಣ್ಣಿರುಪಂತ ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ್, ಸದಸ್ಯರುಗಳಾದ ಅಯೂಬ್, ಅಬ್ದುಲ್ ರೆಹಮಾನ್, ಕಣಿಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಶೆಟ್ಟಿ, ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ್ ಅಜಿಲ, ಇಂಜಿನಿಯರ್ ತೌಸೀಫ್ ಅಹ್ಮದ್, ಗುರುಪ್ರಸಾದ್, ಸ್ಥಳೀಯರಾದ ಉದಯ ಕುಮಾರ್ ಮೇಲಾಂಟ, ಅಬೂಬಕ್ಕರ್ ಹಾಜಿ, ಹರಿಶ್ಚಂದ್ರ ಪೂಜಾರಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಊರ ನಾಗರಿಕರು ಉಪಸ್ಥಿತರಿದ್ದರು. ಡಾಮರೀಕರಣಕ್ಕಾಗಿ ಶ್ರಮಿಸಿದ ದಿನೇಶ್ ಶೆಟ್ಟಿ ಅಂಬಡ್ಕ ಸ್ವಾಗತಿಸಿ, ಪಂಚಾಯತ್ ಸದಸ್ಯ ಸೀತಾರಾಮ ಮಡಿವಾಳ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.