ಬೆಳ್ತಂಗಡಿ : ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಇದರ ಆಶ್ರಯದಲ್ಲಿ ಶಿರ್ಲಾಲು ಮತ್ತು ಬಳೆಂಜ ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು ರೂ. 8.86 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಅವರು ಅ. 11ರಂದು ನೆರವೇರಿಸಿದರು.
ನಂತರ ಶಿರ್ಲಾಲು ಗ್ರಾ.ಪಂ ವಠಾರದಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕನಾಗಿ ತಾಲೂಕಿನ 81 ಗ್ರಾಮಗಳಲ್ಲೂ ಅಭಿವೃದ್ಧಿ ಕಾರ್ಯವನ್ನು ನಡೆಸಿದ್ದೇನೆ. ರಸ್ತೆ ಸೇತುವೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಗ್ರಾಮದ ಮೂಲಭೂತ ಸೌಲಭ್ಯಗಳನ್ನು ಈಡೇರಿಸಿದ್ದೇನೆ. ಇಂದು ಶಿರ್ಲಾಲು ಮತ್ತು ಬಳೆಂಜ ಗ್ರಾ.ಪಂ.ನಲ್ಲಿ 8.86 ಕೋಟಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ನೆರವೇರಿಸಿದ್ದೇನೆ ಎಂದರು.
ಬೆಳ್ತಂಗಡಿ ತಾಲೂಕಿನಲ್ಲಿ ವಿದ್ಯುತ್ ಅಭಿವೃದ್ಧಿಗಾಗಿ ಈಗಾಗಲೇ 18ಕೋಟಿ ಮಂಜೂರಾಗಿದ್ದು, ಟಿ.ಸಿ ಹಾಕುವ ಕೆಲಸಗಳು ನಡೆಯಲಿದೆ. 94ಸಿಯಲ್ಲಿ 16 ಸಾವಿರ ಮಂದಿಗೆ ಹಕ್ಕು ಪತ್ರ ನೀಡಿದ್ದೇನೆ. ಇನ್ನು 6 ತಿಂಗಳ ಅವಧಿ ಇದೆ. ಎಲ್ಲರಿಗೂ ಹಕ್ಕು ಪತ್ರ ಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ ಬೆಳ್ತಂಗಡಿ ಕ್ಷೇತ್ರದ ಶಾಸಕರು ತಾಲೂಕಿನಲ್ಲಿ ಬಹಳಷ್ಟು ಕಾರ್ಯಗಳನ್ನು ಮಾಡಿದ್ದು, ಮುಂದೆಯೂ ಅವರೇ ಈ ಕ್ಷೇತ್ರದ ಶಾಸಕರಾಗಿ ಬರಬೇಕು ಎಂದರು.
ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ ರಾಜ್ಯದಲ್ಲೇ ಭೌಗೋಳಿಕವಾಗಿ ಬೆಳ್ತಂಗಡಿ ತಾಲೂಕು 6ನೇ ದೊಡ್ಡ ತಾಲೂಕು ಆಗಿದ್ದು, ಪ.ಜಾತಿ-ಪಂಗಡದ 700 ರಸ್ತೆಗಳು ಕಾಂಕ್ರಿಟೀಕರಣವಾಗಿರುವುದು ರಾಜ್ಯದ ಇತಿಹಾಸದಲ್ಲೇ ಪ್ರಥಮವಾಗಿದೆ ಎಂದರು. ಲೋಕೋಪಯೋಗಿ ಇಲಾಖೆಯ ಸ.ಕಾ ಅಭಿಯಂತರ ಶಿವಪ್ರಸಾದ್ ಅವರು ಮಂಜೂರಾದ ಕಾಮಗಾರಿಗಳ ವಿವರ ನೀಡಿ, ಕಾಮಗಾರಿ ಅನುಷ್ಠಾನ ವೇಳೆ ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಶಿಕಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ ಉಪಾಧ್ಯಕ್ಷೆ ವೇದಾವತಿ, ತಾ.ಪಂ ಸದಸ್ಯರಾದ ಶ್ರೀಮತಿ ಕೆ. ಜಯಶೀಲಾ, ಶ್ರೀಮತಿ ಸುಶೀಲ, ಶ್ರೀಮತಿ ವಿನೂಷಪ್ರಕಾಶ್, ಬಳೆಂಜ ಗ್ರಾ.ಪಂ ಅಧ್ಯಕ್ಷೆ ದೇವಕಿ, ಅಳದಂಗಡಿ ಗ್ರಾ.ಪಂ ಅಧ್ಯಕ್ಷ ಸತೀಶ್ ಮಿತ್ತಮಾರು, ನ.ಪಂ ಉಪಾಧ್ಯಕ್ಷ ಜಗದೀಶ್ ಡಿ., ಎಪಿಎಂಸಿ ಸದಸ್ಯ ಚಿದಾನಂದ ಪೂಜಾರಿ ಎಲ್ದಡ್ಕ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆ.ಎಸ್ ಯೋಗೀಶ್ ಕುಮಾರ್ ನಡಕ್ಕರ, ಮಾಜಿ ತಾ.ಪಂ ಸದಸ್ಯ ಧರ್ಣಪ್ಪ ಪೂಜಾರಿ, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಸಹಾಯಕ ಅಭಿಯಂತರ ಗುರುಪ್ರಸಾದ್, ಗುಣಮ್ಮ ಜೈನ್, ಗ್ರಾ.ಪಂ ಉಪಾಧ್ಯಕ್ಷ ಸಂಜೀವ ದೇವಾಡಿಗ, ಕಿಶೋರ್ ಹೆಗ್ಡೆ ಎರ್ಮೊತ್ತೋಡಿ, ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಕಿಣಿ, ನಾರಾಯಣ ರಾವ್, ಮಾಜಿ ಅಧ್ಯಕ್ಷ ಪುಷ್ಪರಾಜ್, ಇಸುಬು ಶಾಫಿ, ಶ್ರೀಮತಿ ಶೀಲಾ, ನವೀನ್ ಸಾಮಾನಿ, ಸುಬ್ರಹ್ಮಣ್ಯ ಭಟ್, ಸುಪ್ರಿಯ, ಅರುಣ್ ಕುಮಾರ್, ಕುಶಾಲಪ್ಪ ಗೌಡ, ಸರೋಜಿನಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ ಸದಸ್ಯೆ ಜಯಾಶೀಲ, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಇವರನ್ನು ಅಭಿನಂದಿಸಲಾಯಿತು. ಶಾಸಕ ಕೆ. ವಸಂತ ಬಂಗೇರರನ್ನು ಊರವರು, ಸ್ಥಳೀಯ ಮಸೀದಿಯವರು ಹಾಗೂ ಊರಿನ ಗಣ್ಯರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಶಿರ್ಲಾಲು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶೇಖರ್ ಸ್ವಾಗತಿಸಿದರು. ಶಿರ್ಲಾಲು ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿತ್ಯಾನಂದ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ವಿಮಲ ಹೆಗ್ಡೆ ಧನ್ಯವಾದವಿತ್ತರು.