HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

263 ಅಪೂರ್ಣ ಶಾದಿಮಹಲ್ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು 113 ಕೋಟಿ ರೂ. ಬಿಡುಗಡೆ: ವಕ್ಫ್ ಸಚಿವ ತನ್ವೀರ್ ಸೇಠ್

shadhi mahalಗುರುವಾಯನಕೆರೆ : ಶಾದಿಮಹಲ್ ನಿರ್ಮಾಣಕ್ಕೆ ಈ ಹಿಂದೆ ಸರಕಾರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ನಿಗಧಿಪಡಿಸಿದ್ದ ಗ್ರಾಮೀಣ ಪ್ರದೇಶದಲ್ಲಿ 50 ಲಕ್ಷ ರೂ ಇದ್ದುದನ್ನು 1 ಕೋಟಿಗೆ ಮತ್ತು ಪಟ್ಟಣಕ್ಕೆ 1 ಕೋಟಿಯಿಂದ 2 ಕೋಟಿ ರೂ. ಗಳಿಗೆ ದ್ವಿಗುಣಗೊಳಿಸಲಾಗಿದೆ. ಅಲ್ಲದೆ ನಾನು ಅಧಿಕಾರಕ್ಕೆ ಬಂದ 15 ತಿಂಗಳ ಅಂತರದಲ್ಲಿ ಅಪೂರ್ಣಾವಸ್ಥೆಯಲ್ಲಿದ್ದ ಶಾದಿಮಹಲ್ ಕಟ್ಟಡಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ 113 ಕೋಟಿ ರೂ. ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಕರ್ನಾಟಕ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ತನ್ವೀರ್ ಸೇಠ್ ಹೇಳಿದರು.
ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾಶರೀಫ್ ಮತ್ತು ಜುಮ್ಮಾ ಮಸೀದಿ ಇದರ ವತಿಯಿಂದ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ ಶಾದಿಮಹಲ್ ಸಭಾಭವನವನ್ನು ಅ. 10 ರಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸೌಲಭ್ಯಗಳನ್ನು ಪಡೆಯುವಲ್ಲಿ ಜಿಲ್ಲಾ ಮಟ್ಟದಲ್ಲಿ ಕೆಲವೊಂದು ನಿಯಮಾವಳಿಗಳು ಕಠಿಣವಾಗಿದ್ದು ಅವುಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಿದಲ್ಲಿ ಸಮುದಾಯಕ್ಕೆ ಇನ್ನಷ್ಟು ಅನುಕೂಲತೆ ದೊರೆಯಲಿದೆ. ನಮ್ಮ ಜಿಲ್ಲೆಯಲ್ಲಿ ಯಾವತ್ತೂ ಸರಿಕಾರಿ ಅನುದಾನದ ದುರುಪಯೋಗ ನಡೆಯುವುದಿಲ್ಲ. ಈ ಬಗ್ಗೆ ನಿಮಗೆ ಸಂದೇಹ ಬೇಡ. ಕಾಯ್ದೆ ಸರಳೀ
ಕರಣದ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ವಸಂತ ಬಂಗೇರ ಮಾತನಾಡಿ, ಈ ಕ್ಷೇತ್ರದಲ್ಲಿ ನನ್ನನ್ನು ಜನತೆ 5 ಬಾರಿ ವಿವಿಧ ಪಕ್ಷಗಳಿಂದ ಆರಿಸಿ ಜನ ಸೇವೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಎಂದೂ ಕೂಡ ಮತದಾರರಿಗೆ ಅಗೌರವವಾಗುವ ರೀತಿಯಲ್ಲಿ ನಾನು ನಡೆದುಕೊಂಡಿಲ್ಲ, ಅಲ್ಪಸಂಖ್ಯಾತ ಸಮುದಾಯ ದವರು ಎಂದರೆ ಅವರು ನಮ್ಮವರು ಎಂದು ಭಾವಿಸಿದ್ದೇನೆ ಎಂದರು. ಗುರುವಾಯನಕೆರೆಯಲ್ಲಿ ಸರಕಾರಿ ಅನುದಾನದಿಂದ ಶಾದಿಮಹಲ್ ನಿರ್ಮಿಸಿ ಆದಾಯವನ್ನು ಸಮುದಾಯದ ಏಳಿಗೆಗೆ ವಿನಿಯೋಗಿಸಲು ನಿರ್ಧರಿಸಿದ್ದಾರೆ. ಈ ಕಟ್ಟಡಕ್ಕೆ 50 ಲಕ್ಷ ರೂ. ಸರಕಾರ ನೀಡಿದೆ. ಆ ಅನುದಾನಕ್ಕೆ ಹೆಚ್ಚುವರಿಯಾಗಿ ಸೇರಿಸಿ ಸುಂದರವಾದ ಕಟ್ಟಡ ನಿರ್ಮಿಸಿದ್ದಾರೆ. ಈಗ ಸಮಿತಿಯ ಮುಂದೆ 35 ಲಕ್ಷದಷ್ಟು ಸಾಲವಿದ್ದು, ನೀವು ಬೆಂಗಳೂರಿಗೆ ಹೋದ ತಕ್ಷಣ ಉಳಿಕೆ 50 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಿ ನೆರವು ನೀಡಬೇಕು.
ಶಾಲಾ ದುರಸ್ತಿಗೆ ಇನ್ನೂ 3 ಕೋಟಿ ರೂ ಬೇಡಿಕೆ:
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ತಾವು ಈಗಾಗಲೇ ತಾಲೂಕಿನ ಶಾಲೆಗಳ ದುರಸ್ಥಿಗೆ 2 ಕೋಟಿ ರೂ. ಒದಗಿಸಿಕೊಟ್ಟಿದ್ದೀರಿ. ಇನ್ನೂ ಕೆಲವು ಶಾಲೆಗಳು ತುರ್ತು ದುರಸ್ಥಿಯ ಅವಶ್ಯಕತೆ ಇದ್ದು ಇಲ್ಲಿ ಅಪಾಯಗಳು ಸಂಭವಿಸಿ ನಮ್ಮ ಸರಕಾರಕ್ಕೆ ಕೆಟ್ಟ ಹೆಸರು ಬರುವ ಮುನ್ನ ಇನ್ನೂ 3 ಕೋಟಿ ರೂ. ಗಳನ್ನು ದುರಸ್ಥಿಗಾಗಿ ಬಿಡುಗಡೆಮಾಡಬೇಕು ಎಂದು ಮನವಿ ಮಾಡಿದ ಶಾಸಕರು, ಸರಕಾರ ನೌಕರರ ಪೈಕಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಅಧ್ಯಾಪಕವೃಂದ ಎಂದು ಮೊದಲಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್, ಭಾರತ್ ಸೇವಾದಳದ ರಾಜ್ಯ ಸಂಘಟಕ ಅಲ್ಫೋನ್ಸ್ ಫ್ರಾಂಕೋ ಸಂದರ್ಭೋಚಿತವಾಗಿ ಶುಭ ಕೋರಿದರು. ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿಲ್ಲಾ ವಕ್ಫ್ ಅಧಿಕಾರಿ ಹಾಜಿ ಅಬೂಬಕ್ಕರ್, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಎ ಉಸ್ಮಾನ್, ಜಿ.ಪಂ ಸದಸ್ಯ ಪಿ ಧರಣೇಂದ್ರ, ವಕ್ಫ್ ಸಚಿವರ ಸರಕಾರಿ ಆಪ್ತ ಕಾರ್ಯದರ್ಶಿ ಸಿದ್ದೀಕ್ ಪಾಶಾ, ಗುರುವಾಯನಕೆರೆ ಮುದರ್ರಿಸ್ ಕೆ.ಎ ಸುಲೈಮಾನ್ ಫಾಳಿಲಿ, ಸಹಾಯಕ ಖತೀಬ್ ಮುಹಮ್ಮದ್ ಶರೀಫ್ ಸಅದಿ, ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನ್ ಶಾಫಿ, ಪ್ರ. ಕಾರ್ಯದರ್ಶಿ ಮುಹಮ್ಮದ್ ರಫಿ, ದರ್ಗಾ ಸಮಿತಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ಬಾವುಂಞಿ ಹಾಜಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಶ್ರೀಧರ ಭಂಡಾರಿ ಉಪಸ್ಥಿತರಿದ್ದರು.
ಸಚಿವರು ಮತ್ತು ಶಾಸಕರಿಗೆ ಅದ್ದೂರಿ ಸನ್ಮಾನ:
ಶಾದಿಮಹಲ್ ಉದ್ಘಾಟನೆ ನಡೆಸಿಕೊಟ್ಟ ವಕ್ಫ್ ಸಚಿವ ತನ್ವೀರ್ ಸೇಠ್ ಅವರಿಗೆ ಮುಸ್ಲಿಂ ಸಂಪ್ರದಾಯದ ಉಲ್ಲನ್ ಟೋಪಿ ಧರಿಸುವ ಮೂಲಕ ಸನ್ಮಾನ ನಡೆದರೆ ಸಭಾಧ್ಯಕ್ಷತೆ ವಹಿಸಿದ್ ಶಾಸಕ ವಸಂತ ಬಂಗೇರ ಅವರಿಗೆ ವಿಶೇಷ ಪೇಠ ತೊಡಿಸಿ ಅದ್ದೂರಿಯಾಗಿ ಸನ್ಮಾನ ನಡೆಸಲಾಯಿತು.
ಸ್ಮರಣಿಕೆ, ಪುರಸ್ಕಾರ:
ಶಾದಿಮಹಲ್ ನೀಲಿನಕಾಶೆ ತಯಾರಿಸಿದ ತಾಹಿರ್ ಇಂಜಿನಿಯರ್, ಗುತ್ತಿಗೆ ನಿರ್ವಹಿಸಿದ ಯೂಸುಫ್ ಕನ್ನಡಿಕಟ್ಟೆ ಮತ್ತು ಸಾದಿಕ್, ಸಹಕಾರ ನೀಡಿದ ಕುವೆಟ್ಟು ಗ್ರಾ.ಪಂ ಅಧ್ಯಕ್ಷ ರಿಯಾಝ್ ಅಹಮ್ಮದ್, ನಿಕಟಪೂರ್ವ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಇಂಟರ್‌ಲಾಕ್ ಕಾಮಗಾರಿ ನಿರ್ವಹಿಸಿದ ರಿಯಾಝ್ ಪೆರಾಲ್ದರಕಟ್ಟೆ, ಮಾಜಿ ಅಧ್ಯಕ್ಷ ಹಾಜಿ ಸುಲೈಮಾನ್ ಕರಾವಳಿ ಅವರನ್ನು ಶಾಲು, ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಸಚಿವರು ಮಸೀದಿ ವಠಾರಕ್ಕೆ ಆಗಮಿಸುತ್ತಿದ್ದಂತೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಶಾಸಕರ ಅನುದಾನದಲ್ಲಿ ಮಸೀದಿ ಆವರಣದಲ್ಲಿ ಅಳವಡಿಸಿರುವ ಇಂಟರ್‌ಲಾಕ್ ಅಂಗಣವನ್ನು ಶಾಸಕರು ಮತ್ತು ಸಚಿವರು ಜಂಟಿಯಾಗಿ ಉದ್ಘಾಟಿಸಿದರು. ಬಳಿಕ ನೂತನ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ, ಗುರುವಾಯನಕರೆ ಮಸೀದಿ ಖತೀಬ್ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ದುಆ ಪ್ರಾರ್ಥನೆ ನಡೆಸಿಕೊಟ್ಟರು. ಜಮಾಅತ್ ಆಡಳಿತ ಮಂಡಳಿ ಸದಸ್ಯ ಹಸೈನಾರ್ ಶಾಫಿ ಸ್ವಾಗತಿಸಿ ಪ್ರಸ್ತಾವನೆಗೈದರು. ಲ| ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತ್ ಸಮಿತಿ ನೂತನ ಅಧ್ಯಕ್ಷ ಉಸ್ಮಾನ್ ಬಳೆಂಜ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *