1 ಸಾವಿರ ಕೋಟಿಯ ಅಭಿವೃದ್ಧಿ ಕಾಮಗಾರಿ: ಬಂಗೇರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

thaluku panchayath pragathi parisheelana sabheಬೆಳ್ತಂಗಡಿ : ಕಳೆದ ನಾಲ್ಕೂವರೆ ವರ್ಷದಲ್ಲಿ ತಾಲೂಕಿನಲ್ಲಿ ದಾಖಲೆ ಮೊತ್ತದ ಕಾಮಗಾರಿ ನಡೆದಿದೆ. 1 ಸಾವಿರ ಕೋಟಿಯ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ವಿವಿಧ ಯೋಜನೆಗಳ ಮೂಲಕ 16,978 ಮನೆಗಳನ್ನು ಮಂಜೂರು ಗೊಳಿಸಿ ಬಡವರಿಗೆ ಹಂಚಿಕೆ ಮಾಡಿದ್ದೇನೆ ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಅ.9ರಂದು ಬೆಳ್ತಂಗಡಿ ತಾಲೂಕು ಪಂಚಾಯತು ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತುಗಳ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳ ಪ್ರಗತಿ ಪರಿಶೀಲನೆ ನಡೆಸಿ ನಂತರ ಸಭೆ ಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಒಂದು ವರ್ಷದಲ್ಲಿ ೧೭ ಸೇತುವೆಗಳು ತಾಲೂಕಿಗೆ ಮಂಜೂರು ಆಗಿದೆ. 72 ಕಾಮಗಾರಿಗಳು ಈಗಾಗಲೇ ಸರಕಾರದಿಂದ ಮಂಜೂರಾಗಿ ಬಂದಿದ್ದು, ಇದರ ಶಂಕುಸ್ಥಾಪನೆಯನ್ನು ಶೀಘ್ರವಾಗಿ ನೆರವೇರಿಸಲಿದ್ದೇನೆ. ಈಗಾಗಲೇ ಪ.ಜಾತಿ ಮತ್ತು ಪಂಗಡದ 600ಕ್ಕೂ ಮಿಕ್ಕಿ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡ ಲಾಗಿದ್ದು, ಇನ್ನೂ 400ಕ್ಕೂ ಮಿಕ್ಕಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗು ವುದು, ತಾಲೂಕಿನ ೪೮ ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ.438 ಕೋಟಿಗಳ ಅಭಿವೃದ್ಧಿ
ಕಾಮಗಾರಿ ನಡೆಸಲಾಗಿದೆ ಎಂದು ತಿಳಿಸಿದರು.
ಇನ್ನು ಒಂದು ತಿಂಗಳ ಒಳಗೆ ಎಲ್ಲಾ ಮನೆ ನಿವೇಶನಗಳ ಜಾಗವನ್ನು ಪಂಚಾಯತುಗಳಿಗೆ ಹಸ್ತಾಂತರ ಮಾಡಲು ಕ್ರಮ ಜರುಗಿಸಲಾಗುವುದು, ಪ್ರತಿ ಗ್ರಾಮ ಪಂಚಾಯತುಗಳಲ್ಲಿ ಕಂಪ್ಯೂಟರ್ ಅಪರೇಟರ್ ಹುದ್ದೆ ಗಳಿಗೆ ನೇಮಕಾತಿ ನಡೆಸಲು ಪ್ರಯತ್ನಿ ಸಲಾಗುವುದು,
ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ ಹೆಚ್ಚಿದ್ದು, ಇನ್ನೂ 15 ದಿನಗಳ ಒಳಗೆ ಎಲ್ಲಾ ಗ್ರಾಮ ಕರಣಿಕರ ಮತ್ತು ಗ್ರಾಮ ಸಹಾಯಕರ ಸಭೆಯನ್ನು ನಡೆಸಲಾಗುವುದು ಕಳೆದ ಮೂರು ವರ್ಷಗಳ ಹಿಂದೆ ಕಿನ್ಯಮ್ಮ ಸಭಾಂಗಣದಲ್ಲಿ ನಡೆಸಿದ ಸಮಾವೇಶದಲ್ಲಿ ಬಂದ ಬೇಡಿಕೆಗಳಲ್ಲಿ ಶೇ. 80 ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಹೇಳಿದರು.
ಮನೆ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಬೇಡಿ, ನಾನು ಯಾವುದೇ ಪಕ್ಷ ನೋಡಿ ಅನುದಾನ ಹಂಚಿಲ್ಲ, ಎಲ್ಲಾ ಪಂಚಾಯತಿಗೂ ಸಮಾನವಾಗಿ ಹಂಚಿಕೆ ಮಾಡಿದ್ದೇನೆ. ಪಿಡಿಒಗಳು ಕೂಡಾ ಯಾವುದೇ ತಾರತಮ್ಯ ಮಾಡಬಾರದು ಎಂದು ಶಾಸಕರು ಕಿವಿ ಮಾತು ಹೇಳಿದರು. ಈಗಾಗಲೇ ತಾಲೂಕಿಗೆ ೫೦೦ ಮನೆಗಳನ್ನು ಹೆಚ್ಚುವರಿಯಾಗಿ ತರಿಸಿ ವಿತರಣೆ ಮಾಡಿದ್ದೇನೆ. ಪ್ರತಿ ಗ್ರಾಮ ಪಂಚಾಯತು ಪಿಡಿಒ ಕಾರ್ಯದರ್ಶಿಗಳಿಗೆ ಎರಡು ಮನೆಗಳನ್ನು ನೀಡುತ್ತೇನೆ ಇದನ್ನು ಬಡವರನ್ನು ಗುರುತಿಸಿ ಅವರಿಗೆ ವಿತರಣೆ ಮಾಡಿ ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಿಡಿಒ ಪ್ರಕಾಶ್ ಶೆಟ್ಟಿಯವರು ಈ ಸರಕಾರದ ಅವಧಿಯಲ್ಲಿ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಪ್ರತಿ ಪಂಚಾಯತ್‌ಗೆ ರೂ. 5 ರಿಂದ ರೂ.6 ಕೋಟಿ ಅನುದಾನ ಬಂದಿದ್ದು, ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ ಎಂದರು.
ಸಭೆಯಲ್ಲಿ ಶಾಸಕರು ಗ್ರಾಮ ಪಂಚಾಯತುಗಳ ಪ್ರಗತಿಯನ್ನು ಪರಿಶೀಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ತಮ್ಮ ಪಂಚಾಯತದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆದ ಪ್ರಗತಿಯ ವಿವರಗಳನ್ನು ನೀಡಿದರು. ಲೋಕೋಪಯೋಗಿ ಇಲಾಖೆಯಲ್ಲಿ ತಾಲೂಕಿನಾದ್ಯಂತ ನಾಲ್ಕೂವರೆ ವರ್ಷದಲ್ಲಿ ರೂ.119.17 ಕೋಟಿಯ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ ಎಂದು ಸಹಾಯಕ ಅಭಿಯಂತರ ಶಿವಪ್ರಸಾದ ಅಜಿಲ ಸಭೆಗೆ ಮಾಹಿತಿ ನೀಡಿದರು. ಕುಡಿಯುವ ನೀರಿನ ಯೋಜನೆಯಲ್ಲಿ ರೂ. 10.76 ಕೋಟಿಯ ಕಾಮಗಾರಿ ನಡೆಸಲಾಗಿದೆ ಎಂದು ಅಧಿಕಾರಿ ಮಾಹಿತಿ ಇತ್ತರು. ಗ್ರಾಮಾಂತರ ಪ್ರದೇಶದಲ್ಲಿ ಅಗತ್ಯ ಕುಡಿಯುವ ನೀರಿಗಾಗಿ ೩೬ ನೀರಿನ ಬೂತ್ ರಚನೆಗೊಂಡು ವರ್ಷಗಳು ಕಳೆದರೂ ಇದುವರೆಗೂ ಇದರ ಪ್ರಯೋಜನ ಜನರಿಗೆ ಲಭಿಸಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ಇದರ ಕಾಮಗಾರಿಯನ್ನು ಶೀಘ್ರವಾಗಿ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುವೆಟ್ಟು ಗ್ರಾಮವನ್ನು ನಗರ ಎಂದು ಪರಿಗಣಿಸಿರುವುದರಿಂದ ಕೇವಲ 10 ಮನೆಗಳು ಮಾತ್ರ ದೊರಕಿದೆ ಎಂದು ಅಭಿವೃದ್ಧಿ ಅಧಿಕಾರಿ ರವೀಂದ್ರ ನಾಯಕ್ ಶಾಸಕರ ಗಮನಕ್ಕೆ ತಂದಾಗ ರಾಜ್ಯದಲ್ಲಿ 127 ಗ್ರಾಮಗಳನ್ನು ನಗರ ಎಂದು ಪರಿವರ್ತಿಸಲಾಗಿದೆ. ಇದರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕುವೆಟ್ಟು ಗ್ರಾಮ ಸೇರಿದೆ ಎಂದು ಶಾಸಕರು ತಿಳಿಸಿದರು. ಹೊಸಂಗಡಿ ಗ್ರಾಮದ ಅಂಚೆ ಪಿನ್‌ಕೋಡು ಬದಲಾವಣೆ ಮಾಡಿರುವುದರಿಂದ ಪಡಿತರ ಮತ್ತು ಆಧಾರ್ ಕಾರ್ಡ್ ಮಾಡಲು ಸಮಸ್ಯೆಯಾಗಿದೆ ಎಂದು ಪಿಡಿಒ ಹೇಳಿದಾಗ ಇದನ್ನು ಸರಿಪಡಿಸಲು ಕ್ರಮ ಜರುಗಿಸುವಂತೆ ಶಾಸಕರು ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚನೆ ನೀಡಿದರು. ಮಡಂತ್ಯಾರಿನಲ್ಲಿ ಪಂಚಾಯತು ಮನೆ ನಿವೇಶನದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ನೆಡುತೋಪು ಇರುವುದರಿಂದ ಸಮಸ್ಯೆಯಾಗಿರುವ ವಿಷಯವನ್ನು ಪಿಡಿಓ ನಾಗೇಶ್ ಶಾಸಕರ ಗಮನಕ್ಕೆ ತಂದರು. ಇದನ್ನು ಕೂಡಲೇ ಕಟಾವು ಮಾಡಿ ಜಾಗ ಬಿಟ್ಟುಕೊಡಲು ಅರಣ್ಯಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಪಾಂಡವರ ಕಲ್ಲು ರಸ್ತೆ ಅಭಿವೃದ್ಧಿ ಬಗ್ಗೆ ಪಿಡಿಒ ಪ್ರಶ್ನಿಸಿದಾಗ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಜರುಗುತ್ತಿದೆ ಎಂದರು.
ಸುಲ್ಕೇರಿಯಲ್ಲಿ ಖಾಸಗಿ ಶಾಲೆಯ ಸಮಸ್ಯೆ ಬಗ್ಗೆ ಪಿಡಿಒ ರವಿ ಶಾಸಕರ ಗಮನಕ್ಕೆ ತಂದಾಗ ಇದನ್ನು ಸರಕಾರದ ವಶಕ್ಕೆ ಪಡೆದುಕೊಳ್ಳುವ ಚಿಂತನೆ ಇದ್ದರೂ, ಸ್ವಾಮೀಜಿಯೋರ್ವರು ಇದನ್ನು ನಡೆಸಲು ಮುಂದೆ ಬಂದಿರುವುದನ್ನು ಶಾಸಕರು ಸಭೆಗೆ ವಿವರಿಸಿದರು. ಮುಂಡಾಜೆಯ ಕೊಂಬಿನಡ್ಕ ಶಾಲೆ ಒಂದು ಭಾಗ ಮಳೆಗೆ ಕುಸಿದಿದೆ ಎಂದು ಸಂಜೀವ ನಾಯ್ಕ ಸಭೆಗೆ ತಿಳಿಸಿದಾಗ ಮಾತನಾಡಿದ ಶಾಸಕರು ಈಗಾಗಲೇ ಶಾಲೆಗಳ ದುರಸ್ಥಿಗೆ ರೂ. 2.50 ಕೋಟಿ ಅನುದಾನ ಬಂದಿದ್ದು, ಪುನಃ ರೂ.3 ಕೋಟಿ ಅನುದಾನಕ್ಕೆ ಸರಕಾರಕ್ಕೆ ಬರೆಯಲಾಗಿದೆ ಎಂದರು. ನಾರಾವಿಯಲ್ಲಿ ಮೆಸ್ಕಾಂ ಉಪಕೇಂದ್ರದ ಜಾಗ ಅರಣ್ಯ ಇಲಾಖೆ ಸಮಸ್ಯೆ ಕುರಿತು ಪಿಡಿಒ ನಿರ್ಮಲ್‌ಕುಮಾರ್ ಸಭೆಗೆ ಮಾಹಿತಿ ನೀಡಿದಾಗ ಇದರ ಬಗ್ಗೆ ಕ್ರಮ ಕೈಗೊಳ್ಳಲು ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಬೆಳ್ತಂಗಡಿ-ಕೊಯ್ಯೂರು ರಸ್ತೆ ಅಭಿವೃದ್ಧಿ ಕುರಿತು ಪಿಡಿಒ ಶ್ರೀನಿವಾಸ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಶಾಸಕರು ಈ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್.ಸುವರ್ಣ, ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಕುಸುಮಾಧರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಆರ್. ನರೇಂದ್ರ, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ವ್ಯವಸ್ಥಾಪಕಿ ಸುವರ್ಣ ಕುಮಾರಿ ಉಪಸ್ಥಿತರಿದ್ದರು. ಕಾರ್ಯನಿರ್ವಾಹ ಣಾಧಿಕಾರಿ ಬಸವರಾಜ್ ಸ್ವಾಗತಿಸಿದರು. ಪಿಡಿಒ ಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಯೋಜಕ ಜಯಾನಂದ ಕಾರ್ಯಕ್ರಮ ನಿರೂಪಿಸಿ, ಪಿಡಿಒ ಗಾಯತ್ರಿ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.